ಮಹಿಳೆಯರ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟ ಮನೋಜ್ ಬಾಜಪೇಯಿ!

ನಟ ಮನೋಜ್ ಬಾಜಪೇಯಿ ಹೆಸರು ಕೇಳದ ಸಿನಿ ಪ್ರೇಮಿಗಳು ಕಡಿಮೆ. ತೆಲುಗು, ತಮಿಳಿನ ಕೆಲವು ಸಿನಿಮಾಗಳಲ್ಲಿಯೂ ನಟಿಸಿರುವ ಮನೋಜ್ ಬಾಜಪೇಯಿ ದಕ್ಷಿಣ ಭಾರತದ ಸಿನಿಮಾ ಪ್ರೇಮಿಗಳಿಗೂ ಪರಿಚಿತರು.

ವಿಲನ್ ಮಾದರಿಯ ಅಥವಾ ಬಹಳ ಭಿನ್ನವಾದ ಪೋಷಕ ಪಾತ್ರಗಳ ಮೂಲಕ ಹೆಸರುವಾಸಿಯಾಗಿರುವ ಮನೋಜ್ ಬಾಜಪೇಯಿಗೆ ಮೂರು ಬಾರಿ ರಾಷ್ಟ್ರಪ್ರಶಸ್ತಿ ದೊರೆತಿದೆ. ಮನೋಜ್ ನಟಿಸಿದ ತಮ್ಮ ಮೊದಲ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ್ದು ವಿಶೇಷ.

'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯಿಂದಂತೂ ಮನೋಜ್ ಬಾಜಪೇಯಿ ಜನಪ್ರಿಯತೆ ದುಪ್ಪಟ್ಟಾಗಿದೆ. ಬಹಳ ಸಾಮಾನ್ಯ ಕುಟುಂಬದಿಂದ ಹಲವು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿ ನಟನಾಗಿ ನೆಲೆ ನಿಂತಿರುವ ಮನೋಜ್ ಬಾಜಪೇಯಿ ಆಗಾಗ್ಗೆ ತಮ್ಮ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುತ್ತಿರುತ್ತಾರೆ ಮತ್ತು ಸಂದರ್ಶನಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

ಮನೋಜ್ ಬಾಜಪೇಯಿ ನಟಿಸಿರುವ 'ಡಯಲ್ 100' ಸಿನಿಮಾ ಆಗಸ್ಟ್ 6ರಂದು ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಮನೋಜ್ ಜೊತೆಗೆ ಮನೋಜ್ ಶಿಷ್ಯೆ ಆಗಿದ್ದ ಸಾಕ್ಷಿ ತನ್ವಾರ್ ಸಹ ನಟಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಮನೋಜ್ ಮತ್ತು ಸಾಕ್ಷಿ ತಾವು ಪಯಣಿಸಿದ ಹಾದಿಯ ಬಗ್ಗೆ ಮಾತನಾಡಿದ್ದಾರೆ. ಇದೇ ಸಮಯ ತಾವೊಮ್ಮೆ ಮಹಿಳೆಯರ ಶೌಚಾಲಯದಲ್ಲಿ ಅಡಗಿ ಕೂತಿದ್ದ ಘಟನೆಯನ್ನು ನಟ ಮನೋಜ್ ಬಾಜಪೇಯಿ ನೆನಪಿಸಿಕೊಂಡಿದ್ದಾರೆ.

ಮನೋಜ್ ಶಿಷ್ಯ ಸಾಕ್ಷಿ ತನ್ವಾರ್‌ ಈಗ ಸಹನಟಿ

ಮನೋಜ್ ಶಿಷ್ಯ ಸಾಕ್ಷಿ ತನ್ವಾರ್‌ ಈಗ ಸಹನಟಿ

ಸಾಕ್ಷಿ ತನ್ವಾರ್ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜ್‌ನಲ್ಲಿ ಕಲಿಯುತ್ತಿದ್ದಾಗ ಮನೋಜ್ ಬಾಜಪೇಯಿ ಆ ಕಾಲೇಜಿನ ಕೆಲವು ಹೆಣ್ಣುಮಕ್ಕಳಿಗೆ ನಟನೆ ತರಬೇತಿ ನೀಡುತ್ತಿದ್ದರು. ಆ ಹುಡುಗಿಯರಲ್ಲಿ ಸಾಕ್ಷಿ ತನ್ವಾರ್ ಸಹ ಒಬ್ಬರು. ''ನನಗೆ ಗೊತ್ತಿತ್ತು ಸಾಕ್ಷಿ ತನ್ವಾರ್‌ಗೆ ಪ್ರತಿಭೆ ಇದೆ ಆಕೆ ಏನನ್ನಾದರೂ ಸಾಧಿಸಿಯೇ ಸಾಧಿಸುತ್ತಾಳೆಂದು'' ಎಂದಿದ್ದಾರೆ ಮನೋಜ್ ಬಾಜಪೇಯಿ. ''ನಾನು ಸಾಕ್ಷಿಯೊಂದಿಗೆ ಸತತ ಸಂಪರ್ಕದಲ್ಲಿ ಇರಲಿಲ್ಲವಾದರೂ ಆಕೆಯ ಬೆಳವಣಿಗೆಯನ್ನು ಗಮನಿಸುತ್ತಲೇ ಬಂದಿದ್ದೆ ಮತ್ತು ಆಕೆಯ ನಟನೆಯನ್ನು ಮೆಚ್ಚಿಕೊಳ್ಳುತ್ತಿದ್ದೆ'' ಎಂದಿದ್ದಾರೆ ಮನೋಜ್ ಬಾಜಪೇಯಿ.

ಮಹಿಳೆಯರ ಕಾಲೇಜ್‌ಗೆ ನಟನೆ ಕಲಿಸಲು ಹೋಗುತ್ತಿದ್ದ ಮನೋಜ್

ಮಹಿಳೆಯರ ಕಾಲೇಜ್‌ಗೆ ನಟನೆ ಕಲಿಸಲು ಹೋಗುತ್ತಿದ್ದ ಮನೋಜ್

ತಾವು ಲೇಡಿ ಶ್ರೀರಾಮ್ ಕಾಲೇಜ್‌ಗೆ ನಟನೆ ಕಲಿಸಲು ಹೋಗುತ್ತಿದ್ದ ದಿನಗಳಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿರುವ ಮನೋಜ್ ಬಾಜಪೇಯಿ, '' ಅದು ಯುವತಿಯರ ಕಾಲೇಜಾಗಿತ್ತು. ಆಗ ನನ್ನ ಬಳಿ ನಟನೆ ಕಲಿಯುತ್ತಿದ್ದ ಯುವತಿಯರಿಗೆ ತರಗತಿ ಮುಗಿದ ಬಳಿಕ ಗೇಟ್‌ ಬಳಿ ಬರುವಂತೆ ಹೇಳಿರುತ್ತಿದ್ದೆ. ಅವರು ಬರುವುದು ತಡವಾದರೆ ಕಾಲೇಜಿನ ಒಳಕ್ಕೆ ಹೋಗುತ್ತಿರಲಿಲ್ಲ ಬದಲಿಗೆ ಅಲ್ಲೇ ರಸ್ತೆಯಲ್ಲಿ ಓಡಾಡಿ ಕಾಲ ಕಳೆಯುತ್ತಿದ್ದೆ. ನನಗೆ ಯುವತಿಯರ ಬಳಿ ಮಾತನಾಡುವುದು ಬಹಳ ಮುಜುಗರ ತರುತ್ತಿತ್ತು. ಬಹಳ ಸಂಕೋಚದ ಸ್ವಭಾವದವನಾಗಿದ್ದೆ ನಾನು'' ಎಂದಿದ್ದಾರೆ ಮನೋಜ್.

ಮಹಿಳೆಯರ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಮನೋಜ್

ಮಹಿಳೆಯರ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಮನೋಜ್

''ಒಮ್ಮೆ ಅನಿವಾರ್ಯ ಕಾರಣದಿಂದ ಕಾಲೇಜಿನ ಒಳಗೆ ಹೋದೆ ಶೌಚಾಲಯ ಬಳಸಲೇ ಬೇಕಾದ ಸ್ಥಿತಿ ಹಾಗಾಗಿ ಯುವತಿಯರ ಶೌಚಾಲಯದ ಒಳಕ್ಕೆ ನುಗ್ಗಿಬಿಟ್ಟೆ. ನಾನು ಅಲ್ಲಿರುವಂತೆಯೇ ಕೆಲವು ಯುವತಿಯರು ಶೌಚಾಲಯದ ಒಳಗೆ ಬಂದರು. ಕೂಡಲೇ ನಾನು ಶೌಚಾಲಯದ ಒಳಗೆ ಅವಿತುಕೊಂಡು ಒಳಗಿನಿಂದ ಲಾಕ್ ಹಾಕಿಕೊಂಡು ಬಿಟ್ಟೆ. ಅವರು ಹೋಗುವವರೆಗೆ ನಾನು ಹೊರಗೆ ಹೋಗಲಿಲ್ಲ. ನಾನೆಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತೇನೋ ಎಂದು ಬಹಳ ಭಯಪಟ್ಟಿದ್ದೆ'' ಎಂದಿದ್ದಾರೆ ಮನೋಜ್ ಬಾಜಪೇಯಿ.

ಶಾರುಖ್ ಗೆಳೆತನದ ಬಗ್ಗೆ ಮನೋಜ್ ಮಾತು

ಶಾರುಖ್ ಗೆಳೆತನದ ಬಗ್ಗೆ ಮನೋಜ್ ಮಾತು

ಮನೋಜ್ ಭಾಜಪೇಯಿ ದೆಹಲಿಯಲ್ಲಿ ನಾಟಕಗಳಲ್ಲಿ ಅಭಿನಯಿಸುವಾಗ ಶಾರುಖ್ ಖಾನ್ ಸಹ ಅವರ ತಂಡದಲ್ಲಿದ್ದರು. ಶಾರುಖ್ ಗೆಳೆತನವನ್ನು ಮನೋಜ್ ಬಾಜಪೇಯಿ ಹಲವು ಬಾರಿ ನೆನಪಿಸಿಕೊಂಡಿದ್ದಾರೆ. ನಮ್ಮ ಗುಂಪಿನಲ್ಲಿ ಶಾರುಖ್ ಒಬ್ಬನ ಬಳಿಯೇ ಕಾರು ಇದ್ದದ್ದು, ಅವನ ಬಳಿ ಮಾರುತಿ 800 ಕಾರು ಇತ್ತು. ಅವನೇ ಮೊದಲ ಬಾರಿಗೆ ನನ್ನನ್ನು ಪಬ್‌ಗೆ ಕರೆದುಕೊಂಡು ಹೋಗಿದ್ದು, ಶಾರುಖ್ ಖಾನ್‌ಗೆ ಆಗಲು ಮಹಿಳೆಯರ ಫಾಲೋವಿಂಗ್ ಹೆಚ್ಚಿತ್ತು. ಎಲ್ಲ ಹುಡುಗಿಯರು ಶಾರುಖ್ ಹಿಂದೆ ಬೀಳುತ್ತಿದ್ದರು. ನಾವೆಲ್ಲ ಅವನನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದೆವು ಎಂದಿದ್ದಾರೆ ಮನೋಜ್ ಬಾಜಪೇಯಿ.

ಹಲವು ಅವಕಾಶಗಳು ಮನೋಜ್ ಕೈಯಲ್ಲಿವೆ

ಹಲವು ಅವಕಾಶಗಳು ಮನೋಜ್ ಕೈಯಲ್ಲಿವೆ

ಕಳೆದೊಂದು ವರ್ಷದಿಂದ ಮನೋಜ್ ಬಾಜಪೇಯಿ ವೃತ್ತಿ ಜೀವನ ಬಹಳ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಈ ಮೊದಲೇ ಅವರೊಬ್ಬ ಸ್ಟಾರ್ ನಟ ಆಗಿದ್ದರೂ ಸಹ ಬಹುತೇಕ ಪೋಷಕ ಪಾತ್ರ, ವಿಲನ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 'ದಿ ಫ್ಯಾಮಿನಿ ಮ್ಯಾನ್' ವೆಬ್ ಸರಣಿಯಿಂದ ಬಹಳ ಜನಪ್ರಿಯರಾಗಿದ್ದಾರೆ ಮನೋಜ್. ಇದೀಗ 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 3 ಬರಲಿದ್ದು, ದೊಡ್ಡ ಸಂಭಾವನೆಯನ್ನೇ ಇದಕ್ಕಾಗಿ ಮನೋಜ್ ಪಡೆಯುತ್ತಿದ್ದಾರೆ. ಇದೀಗ ಮನೋಜ್ ಮಲಯಾಳಂ ಸಿನಿಮಾ 'ಕುರುಪ್' ಅಲ್ಲಿ ನಟಿಸಿದ್ದು ಆ ಸಿನಿಮಾ ಬಿಡುಗಡೆ ಆಗಬೇಕಿದೆ. ಇಂಗ್ಲೀಷ್ ಸಿನಿಮಾ 'ಡಿಸ್ಪ್ಯಾಚ್' ಸಿನಿಮಾದಲ್ಲಿ ನಟಿಸಿದ್ದಾರೆ. ಅದೂ ಸಹ ಬಿಡುಗಡೆ ಆಗಲಿದೆ. ಮನೋಜ್ ನಟನೆಯ 'ಸೈಲೆನ್ಸ್' ಹಾಗೂ 'ಡಯಲ್ 100' ಸಿನಿಮಾಗಳು ಇತ್ತೀಚೆಗಷ್ಟೆ ಬಿಡುಗಡೆ ಆಗಿವೆ.

More from Filmibeat

English summary
Actor Manoj Bajpayee recalled a incident when he locked himself in a ladies toilet in Delhi's Ladies Sriram College.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X