For Quick Alerts
  ALLOW NOTIFICATIONS  
  For Daily Alerts

  ನಾನು ಶಾರುಖ್ ಖಾನ್ ಹಂಚಿಕೊಂಡು ಬೀಡಿ ಸೇದುತ್ತಿದ್ದೆವು: ಮನೋಜ್ ಬಾಜಪೇಯಿ

  |

  ಹಿಂದಿಯ ಬಹು ಜನಪ್ರಿಯ ನಾಯಕ ನಟ, ಪೋಷಕ ನಟ, ವಿಲನ್‌ಗಳಲ್ಲಿ ಒಬ್ಬರು ಮನೋಜ್ ಬಾಜಪೇಯಿ. ಹಿಂದಿ ಮಾತ್ರವೇ ಅಲ್ಲದೆ ಹಲವು ಭಾಷೆಗಳ ಸಿನಿಮಾದಲ್ಲಿ ಮನೋಜ್ ನಟಿಸಿದ್ದಾರೆ.

  Shahrukh Khan ಕಷ್ಟದ ದಿನಗಳನ್ನು ಕಣ್ಣಾರೆ ನೋಡಿದ್ದೇನೆ ಎಂದ Manoj Bajpai | Filmibeat Kannada

  ರಂಗಭೂಮಿ ಹಿನ್ನೆಲೆಯಿಂದ ಬಾಲಿವುಡ್‌ಗೆ ಬಂದ ಮನೋಜ್ ಹಲವು ಕಷ್ಟಗಳನ್ನು ಎದುರಿಸಿ ದೊಡ್ಡ ಹಂತಕ್ಕೆ ಏರಿದವರು. ಇದೀಗ ಮನೋಜ್ ನಟನೆಯ 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ವೆಬ್ ಸರಣಿಯು ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಗೆ ತಯಾರಾಗಿದ್ದು ಅದರ ಪ್ರಚಾರದಲ್ಲಿ ನಿರತರಾಗಿದ್ದಾರೆ ಮನೋಜ್.

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮನೋಜ್ ಬಾಜಪೇಯಿ ತಮ್ಮ ಹಳೆಯ ಗೆಳೆಯ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್‌ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್ ಹಾಗೂ ತಾಮ್ಮ ಗೆಳೆತನ ಆಗಿನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ ಮನೋಜ್.

  'ನಾನು ಹಾಗೂ ಶಾರುಖ್ ಖಾನ್ ಒಂದೇ ಬೀಡಿಯನ್ನು ಹಂಚಿಕೊಂಡು ಸೇದುತ್ತಿದ್ದೆವು. ಸಿಗರೇಟು ಸಿಕ್ಕರೆ ಸಿಗರೇಟು, ಬೀಡಿ ಸಿಕ್ಕರೆ ಬೀಡಿ. ಅವೆಲ್ಲ ನಮ್ಮ ಕಷ್ಟದ ದಿನಗಳು. ಆ ದಿನಗಳಲ್ಲೂ ಶಾರುಖ್ ಸಖತ್ 'ಚಾರ್ಮಿಂಗ್' ಆಗಿರುತ್ತಿದ್ದ' ಎಂದಿದ್ದಾರೆ ಮನೋಜ್ ಬಾಜಪೇಯಿ.

  'ಡಿಸ್ಕೊ ತೆಕ್‌ಗೆ ಕರೆದುಕೊಂಡು ಹೋಗಿದ್ದು ಶಾರುಖ್ ಖಾನ್'

  'ಡಿಸ್ಕೊ ತೆಕ್‌ಗೆ ಕರೆದುಕೊಂಡು ಹೋಗಿದ್ದು ಶಾರುಖ್ ಖಾನ್'

  'ನನನ್ನು ಮೊದಲ ಬಾರಿಗೆ ಡಿಸ್ಟೊತೆಕ್‌ಗೆ ಕರೆದುಕೊಂಡು ಹೋಗಿದ್ದು ಶಾರುಖ್ ಖಾನ್. ಅವನ ಬಳಿ ಒಂದು ಮಾರುತಿ ವ್ಯಾನ್ ಇತ್ತು. ತಾಜ್ ಹೋಟೆಲ್‌ನ ಡಿಸ್ಕೊ ತೆಕ್‌ಗೆ ನನ್ನನ್ನು ಕರೆದುಕೊಂಡು ಹೋಗಿದ್ದ' ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ಮನೋಜ್.

  'ಆಗಲೂ ಶಾರುಖ್ ಹಿಂದೆ ಹುಡುಗಿಯರು ಬೀಳುತ್ತಿದ್ದರು'

  'ಆಗಲೂ ಶಾರುಖ್ ಹಿಂದೆ ಹುಡುಗಿಯರು ಬೀಳುತ್ತಿದ್ದರು'

  'ನಾವಿಬ್ಬರೂ ದೆಹಲಿಯಲ್ಲಿ ಬ್ಯಾರಿ ಜೋನ್ಸ್‌ನ ನಾಟಕ ತಂಡದಲ್ಲಿ ಇದ್ದೆವು. ಆಗಲೂ ಅವನು ಯುವತಿಯರ ಮೆಚ್ಚಿನ ಹುಡುಗನಾಗಿದ್ದ. ಹುಡುಗಿಯರು ಸದಾ ಅವನ ಹಿಂದೆ ಬೀಳುತ್ತಿದ್ದರು. ನಮಗೆಲ್ಲ ಹೊಟ್ಟೆಕಿಚ್ಚಾಗುತ್ತಿತ್ತು. ಶಾರುಖ್ ಖಾನ್ ಯಾವ ಹಂತದಿಂದ ಸ್ಟಾರ್ ಆಗಿ ಬೆಳೆದ ಎಂಬುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವನ ಬಗ್ಗೆ ಹೆಮ್ಮೆ ಇದೆ' ಎಂದಿದ್ದಾರೆ ಮನೋಜ್ ಬಾಜಪೇಯಿ.

  ಮನೋಜ್ ಅನ್ನು ಹೊಗಳಿರುವ ಶಾರುಖ್ ಖಾನ್

  ಮನೋಜ್ ಅನ್ನು ಹೊಗಳಿರುವ ಶಾರುಖ್ ಖಾನ್

  ಶಾರುಖ್ ಖಾನ್ ಸಹ ತಮ್ಮ ಹಿಂದಿನ ಕೆಲವು ಸಂದರ್ಶನಗಳಲ್ಲಿ ಮನೋಜ್ ಬಾಜಪೇಯಿ ಅವರನ್ನು ಬಹುವಾಗಿ ಹೊಗಳಿದ್ದಾರೆ. 'ನಾನು, ಮನೋಜ್ 17-18 ವರ್ಷದ ವಯಸ್ಸಿನವರಾಗಿದ್ದಾನಿಂದಲೂ ಗೆಳೆಯರು. ಮನೋಜ್ ಬಾಜಪೇಯಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರು ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು' ಎಂದಿದ್ದಾರೆ.

  ಜೂನ್ 4 ರಂದು ವೆಬ್ ಸರಣಿ ಬಿಡುಗಡೆ

  ಜೂನ್ 4 ರಂದು ವೆಬ್ ಸರಣಿ ಬಿಡುಗಡೆ

  ಮನೋಜ್ ಬಾಜಪೇಯಿ ನಟಿಸಿರುವ 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ವೆಬ್ ಸರಣಿಯು ಜೂನ್ 4 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ವೆಬ್ ಸರಣಿಯಲ್ಲಿ ನಟಿ ಸಮಂತಾ ಅಕ್ಕಿನೇನಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿಯಲ್ಲಿ ಪ್ರಿಯಾಮಣಿ ಸೇರಿದಂತೆ ಇನ್ನೂ ಕೆಲವು ಪ್ರತಿಭಾವಂತ ನಟರಿದ್ದಾರೆ.

  English summary
  Actor Manoj Bajpayee recalls sharing beedis with Sharukh Khan. Him ans Sharukh were friends from 45 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X