twitter
    For Quick Alerts
    ALLOW NOTIFICATIONS  
    For Daily Alerts

    ಎಲ್ಲರೂ 1000 ಕೋಟಿಯಲ್ಲಿ ಸಿಕ್ಕೊಂಡಿದ್ದು, ಕಥೆ-ನಟನೆ ಬಗ್ಗೆ ಯಾರೂ ಮಾತಾಡುತ್ತಿಲ್ಲ: ಮನೋಜ್ ಬಾಜಪೇಯಿ

    |

    ಇತ್ತೀಚೆಗಿನ ದಿನಗಳಲ್ಲಿ ಸಿನಿಮಾದ ಕಥೆ ಹಾಗೂ ನಟ-ನಟಿಯ ಪರ್ಫಾರ್ಮೆನ್ಸ್ ಬಗ್ಗೆ ಮಾತಾಡುವ ಬದಲು, ಬಾಕ್ಸಾಫೀಸ್‌ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ "ಜನರು ಕಥೆ ಬಗ್ಗೆ, ನಟ-ನಟಿಯರ ಅಭಿನಯದ ಬಗ್ಗೆ ಮಾತಾಡುವುದನ್ನೇ ಇಷ್ಟ ಪಡುತ್ತಿಲ್ಲ. ಎಲ್ಲರೂ ನಂಬರ್‌ಗಳಲ್ಲಿ ಮುಳುಗಿ ಹೋಗಿದ್ದಾರೆ." ಎಂದು ಹೇಳಿದ್ದಾರೆ.

    ಕೆಲವು ತಿಂಗಳಿಗಳಿಂದ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿವೆ. ಈ ವೇಳೆ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಎಸ್‌ ಎಸ್‌ ರಾಜಮೌಳಿ ನಿರ್ದೇಶನದ RRR ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ 246 ಕೋಟಿಯನ್ನು ನಾಲ್ಕು ವಾರಗಳಲ್ಲಿ ಕಲೆಹಾಕಿತ್ತು. ಹಾಗೇ 16 ದಿನಗಳಲ್ಲಿ ವರ್ಲ್ಡ್‌ವೈಡ್ ಬಾಕ್ಸಾಫೀಸ್ ಗಳಿಕೆಯಲ್ಲಿ 1000 ಕೋಟಿ ಲೂಟಿ ಮಾಡಿತ್ತು.

    67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಯಾರ ಯಾರ ಮುಡಿಗೇರಿದೆ ಅವಾರ್ಡ್67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಯಾರ ಯಾರ ಮುಡಿಗೇರಿದೆ ಅವಾರ್ಡ್

    ಇನ್ನೊಂದು ಕಡೆ ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ಸಿನಿಮಾ 'ಕೆಜಿಎಫ್ 2' ಮೊದಲ ದಿನವೇ ವಿಶ್ವದಾದ್ಯಂತ 134.50 ಕೋಟಿ ಲೂಟಿ ಮಾಡಿತ್ತು. ಬಳಿಕ 1000 ಕೋಟಿ ಕ್ಲಬ್ ಕೂಡ ಸೇರಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ಸ್ಮಾಲ್ ಬಜೆಟ್ ಸಿನಿಮಾ ಕೂಡ 250 ಕೋಟಿ ಲೂಟಿ ಮಾಡಿತ್ತು. ಈ ಮೂರು ಸಿನಿಮಾಗಳು ಬಾಕ್ಸಾಫೀಸ್‌ ಕಲೆಕ್ಷನ್‌ನಿಂದಲೇ ಚರ್ಚೆಯಲ್ಲಿತ್ತು.

    Manoj Bajpayee says people are talking about 1000cr not interested in content and performances

    ಸಿನಿಮಾ ಹೇಗಿದೆ ಅಂತ ಯಾರು ಮಾತಾಡುತ್ತಿಲ್ಲ

    ಮನೋಜ್ ಬಾಜಪೇಯಿ ಸಂದರ್ಶನವೊಂದರಲ್ಲಿ ಸಿನಿಮಾ ಹೇಗಿದೆ ಎಂದು ಯಾರು ಮಾತಾಡುತ್ತಿಲ್ಲ ಎಂದು ಹೇಳಿದ್ದಾರೆ. " ಸಿನಿಮಾ ಹೇಗಿದೆ ಯಾರೂ ಮಾತೇ ಆಡುವುದಿಲ್ಲ. ಅಭಿಮಾನ ಹೇಗಿದೆ ಅಂತ ಮಾತಾಡಲು ಯಾರೂ ರೆಡಿಯಿಲ್ಲ. ಸಿನಿಮಾಗೆ ಬೇರೆ ಬೇರೆ ವಿಭಾಗದವರ ಕೊಡುಗೆ ಏನು? ಅನ್ನುವುದನ್ನು ಮಾತಾಡುತ್ತಿಲ್ಲ. ನಾವೆಲ್ಲರೂ 1000 ಕೋಟಿ ಅಥವಾ 300 ಕೋಟಿ ಅಥವಾ 400 ಕೋಟಿಯೊಳಗೆ ಸಿಕ್ಕಿಕೊಂಡಿದ್ದೇವೆ." ಎಂದು ಬೇಸರ ವ್ಯಕ್ತಪಡಿಸಿದ್ದಾರೆ'

    KRK ವಿರುದ್ಧ ಸಿಡಿದೆದ್ದ ನಟ ಮನೋಜ್ ಬಾಜಪೇಯಿ; ಮಾನನಷ್ಟ ಮೊಕದ್ದಮೆ ದಾಖಲುKRK ವಿರುದ್ಧ ಸಿಡಿದೆದ್ದ ನಟ ಮನೋಜ್ ಬಾಜಪೇಯಿ; ಮಾನನಷ್ಟ ಮೊಕದ್ದಮೆ ದಾಖಲು

    " ಇದು ಬಹಳ ದಿನಗಳಿಂದ ನಡೆಯುತ್ತಿದೆ. ಆದರೆ ಇದು ಕೊನೆಗೊಳ್ಳುತ್ತದೆ ಎಂದು ನನಗೆ ಅನಿಸುವುದಿಲ್ಲ." ಎಂದು ಮನೋಜ್ ಬಾಜಪೇಯಿ ಆತಂಕ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಕಲೆಕ್ಷನ್ ಬಗ್ಗೆ ಮಾತಾಡುವ ಬದಲು ನಟ-ನಟಿ ಅಭಿನಯ, ಸ್ಟೋರಿ, ಸ್ಕ್ರೀನ್ ಪ್ಲೇ, ಕ್ಯಾಮರಾ, ಎಡಿಟಿಂಗ್, ಲೈಟಿಂಗ್ ಬಗ್ಗೆ ಜನರು ಮಾತಾಡುವುದನ್ನು ಮರೆತಿದ್ದಾರೆಂಬ ಆರೋಪ ಮನೋಜ್ ಬಾಜಪೇಯಿ ಮಾಡುತ್ತಿದ್ದಾರೆ.

    Manoj Bajpayee says people are talking about 1000cr not interested in content and performances

    1000 ಕೋಟಿ ಸಿನಿಮಾದಿಂದ ನಮ್ಮಂಥವರಿಗೆ ಕಷ್ಟ

    ಇದೇ ಸಂದರ್ಶನದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಪ್ರತಿಭಾವಂತ ನಟರಿಗೆ ಏನು ನಷ್ಟ ಆಗುತ್ತಿದೆ ಎನ್ನುವುದನ್ನು ಬಿಡಿಸಿ ಹೇಳಿದ್ದಾರೆ. "ಇತ್ತೀಚೆಗೆ ವಿಮರ್ಶಕರು ನೀವ್ಯಾಕೆ ಅವರಂಥ ಸಿನಿಮಾ ಮಾಡುವುದಿಲ್ಲ. ನಿಮ್ಮ ಸಿನಿಮಾ ಯಾಕೆ ಕೆಲಸ ಮಾಡುತ್ತಿಲ್ಲ? ಈ ಪ್ರಶ್ನೆಗಳನ್ನು ಟಾಪ ನಟರಿಗೆ ಕೇಳಲಾಗುತ್ತೆ. ಅವರನ್ನು ತಮ್ಮ ವಿಮರ್ಶೆಯಿಂದ ಕಟಕಟೆಯಲ್ಲಿ ನಿಲ್ಲಿಸಲಾಗುತ್ತೆ. ನಾನು ಇಂತಹ ಪ್ರಪಂಚದಿಂದ ದೂರನೇ ಉಳಿದಿದ್ದೇನೆ." ಎಂದಿದ್ದಾರೆ ಮನೋಜ್ ಬಾಜಪೇಯಿ.

    ಮಹಿಳೆಯರ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟ ಮನೋಜ್ ಬಾಜಪೇಯಿ!ಮಹಿಳೆಯರ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟ ಮನೋಜ್ ಬಾಜಪೇಯಿ!

    "ಹಿಂದೆ ನಮ್ಮ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡುವುದು ನಮ್ಮಂಥವರಿಗೆ ಕಷ್ಟ ಆಗುತ್ತಿತ್ತು. 1000 ಕೋಟಿ ಸಿನಿಮಾಗಳಿಂದ ಈಗಂತೂ ಇನ್ನೂ ಕಷ್ಟವಾಗುತ್ತಿದೆ. ಒಟಿಟಿ ನನ್ನಂಥ ನಟರಿಗೆ ವರವಿದ್ದಂತೆ. ಬೇರೆ ಪ್ರತಿಭಾವಂತ ನಟರಿಗೆ, ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಒಟಿಟಿ ವರವಾಗಿದೆ. ಇವರೆಲ್ಲರೂ ಈಗ ಒಟಿಟಿಯಿಂದ ಅದ್ಭುತವಾದ ಕೆಲಸ ಮಾಡುತ್ತಿರುವುದನ್ನು ನೋಡಿ ಹೃದಯ ತುಂಬಿ ಬರುತ್ತೆ." ಎಂದು ಹೇಳಿದ್ದಾರೆ.

    English summary
    Manoj Bajpayee says people are talking about 1000cr not interested in content and performances, Know More.
    Thursday, May 12, 2022, 8:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X