ಸಾರಾ ಅಲಿ ಖಾನ್‌ ಮಾಜಿ ಪ್ರಿಯಕರನ ಹೆಗಲಿಗೆ ಒರಗಿದ ವಿಶ್ವ ಸುಂದರಿ, ಇಬ್ಬರ ನಡುವೆ ಜಾಹ್ನವಿ ಕಪೂರ್‌ಗೇನು ಕೆಲಸ..?

ಚಿತ್ರರಂಗದಲ್ಲಿ ಕೆಲ ನಾಯಕಿಯರು ಮದುವೆಯಾದ ಮೇಲೆ ಬಣ್ಣದ ಲೋಕದಿಂದ ದೂರ ಉಳಿದು ಬಿಡುತ್ತಾರೆ. ಇನ್ನೂ ಕೆಲವರೂ ಸೆಕೆಂಡ್ ಇನ್ನಿಂಗ್ಸ್ ನಲ್ಲಿಯೂ ತರಹೇವಾರಿ ಸಿನಿಮಾಗಳನ್ನೊಪ್ಪಿ ಗೆದ್ದು ಬೀಗುತ್ತಾರೆ. ಮತ್ತೂ ಕೆಲವರು ಈ ಎರಡು ಸಾಲುಗಳಿಗೆ ಸೇರಲು ಬಯಸದೇ, ಅತ್ತ ಸಿನಿಮಾವನ್ನೂ ಮಾಡದೇ.. ಇತ್ತ ಮದುವೆಯೂ ಆಗದೇ.. ಜಾಲಿ ಮೂಡ್ ನಲ್ಲಿ ತಮಗೆ ಅನ್ನಿಸಿದ ಕಡೆಗೆಲ್ಲಾ ಪ್ರವಾಸಕ್ಕೆ ತೆರಳುತ್ತಾರೆ. ಪ್ರೀತಿ-ಪ್ರೇಮ-ಪ್ರಣಯ ಎಂದು ಸುತ್ತಾಡುತ್ತಾರೆ. ಉದಾಹರಣೆಗೆ ಮಾನುಷಿ ಚಿಲ್ಲರ್.

ಹೌದು, ಐಶ್ವರ್ಯ ರೈ.. ಪ್ರಿಯಾಂಕ ಚೋಪ್ರಾ.. ಅವರಂತೆ ವಿಶ್ವ ಸುಂದರಿಯಾದ ಮಾನುಷಿಗೆ ಬಾಲಿವುಡ್‌ನಲ್ಲಿ ಮಿಂಚುವ ಎಲ್ಲ ಅವಕಾಶ ಇತ್ತು. ಬಾಲಿವುಡ್ ರತ್ನಗಂಬಳಿಯನ್ನೂ ಹಾಸಿ ಸ್ವಾಗತವನ್ನ ಕೋರಿತ್ತು ಕೂಡ. ಆದರೆ, ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದ ಮಾನುಷಿಗೆ ಈಗ ನಾಲ್ಕು ಸಿನಿಮಾ ಸೋಲಿನ ನಂತರ ಚಿತ್ರರಂಗದಲ್ಲಿ ಆಸಕ್ತಿ ಕಡಿಮೆಯಾದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹೊಸ ಚಿತ್ರ ಮತ್ತು ಪಾತ್ರದ ಹುಡುಕಾಟವನ್ನೂ ಮಾಡುವ ಬದಲು ಮಾನುಷಿ ಚಿಲ್ಲರ್, ಸಾರಾ ಅಲಿ ಖಾನ್ ಅವರ ಮಾಜಿ ಪ್ರಿಯಕರ ವೀರ್ ಪಹಾರಿಯಾ ಜೊತೆ ಹೆಚ್ಚೇಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

Manushi Chhillar and Veer Pahariya s Relationship Confirmed Romantic Video Sparks Rumors

ಆದರೂ ..ಇಲ್ಲಿಯವರೆಗೆ ಮಾನುಷಿ ಮತ್ತು ವೀರ್ ಪಹಾರಿಯಾ ನಡುವೆ ಪ್ರೇಮಾಂಕುರವಾದ ಕುರುಹು ಸಿಕ್ಕಿರಲಿಲ್ಲ. ಇಬ್ಬರು ಸ್ನೇಹಿತರಿರಬಹುದು ಹೀಗಾಗಿ ಪ್ರವಾಸಕ್ಕೆಲ್ಲ ಜೊತೆಯಾಗಿ ಹೋಗುತ್ತಿರಬಹುದು ಎಂಬ ಅನುಮಾನವನ್ನೇ ಇಲ್ಲಿಯವರೆಗೆ ಅನೇಕರು ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಆ ಅನುಮಾನ ದೂರವಾಗಿದೆ. ಯಾಕೆಂದರೆ..ಮಾನುಷಿ ಮತ್ತು ವೀರ್ ಪ್ರೇಮಕಥೆಗೆ ಸಾಕ್ಷಿಯ ರೂಪದಲ್ಲಿ ವಿಡಿಯೋವೊಂದು ಹೊರ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ನಿಮಗೆ ಗೊತ್ತಿರಲಿ.. ಅಸಲಿಗೆ ವೀರ್ ಪಹಾರಿಯಾಗೆ ಶಿಖರ್ ಪಹಾರಿಯಾ ಎಂಬ ಸಹೋದರ ಇದ್ದಾನೆ. ಈ ಶಿಖರ್ ಪಹಾರಿಯಾ ಬೇರೆ ಯಾರು ಅಲ್ಲ ಬದಲಿಗೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರ ಮನದರಸ. ಹಿಂದೆ ವೀರ್ ಪಹಾರಿಯಾ ಜೊತೆ ಸಾರಾ ಅಲಿ ಖಾನ್ ಇದ್ದಾಗ ಈ ನಾಲ್ವರು ಸೇರಿ ಪ್ರವಾಸಕ್ಕೆ ತೆರಳುತ್ತಿದ್ದರು. ಪಬ್ಬು-ಕ್ಲಬ್ಬು ಎಂದು ಸುತ್ತಾಡುತ್ತಿದ್ಧರು

Manushi Chhillar and Veer Pahariya s Relationship Confirmed Romantic Video Sparks Rumors

ಆದರೆ ಈಗ ಸಾರಾ ಅಲಿ ಖಾನ್ ಇಲ್ಲ. ಆ ಜಾಗಕ್ಕೆ ಮಾನುಷಿ ಚಿಲ್ಲರ್ ಬಂದಿದ್ದಾರೆ. ಎಂದಿನಂತೆ ವೀರ್ ಪಹಾರಿಯಾ-ಮಾನುಷಿ ಚಿಲ್ಲರ್- ಶಿಖರ್ ಪಹಾರಿಯಾ-ಜಾಹ್ನವಿ ಕಪೂರ್ ಸಮುದ್ರದಲ್ಲಿ ಹಡಗನ್ನೇರಿ ಮೋಜು-ಮಸ್ತಿಗೆಂದು ತೆರಳಿದ್ದಾರೆ. ಇದೇ ಸಮಯದಲ್ಲಿ ಜಾಹ್ನವಿ ಕಪೂರ್ ಮೊಬೈಲ್ ಕ್ಯಾಮರಾಗೆ ಹಡುಗಿನಲ್ಲಿ ನಿಂತು ಫೋಸ್ ನೀಡಿದ್ದಾರೆ. ಆದರೆ.. ಇಲ್ಲಿ ಜಾಹ್ನವಿ ಕಪೂರ್ ನಿಂತ ಜಾಗದ ಪಕ್ಕದಲ್ಲಿಯೇ ಮಾನುಷಿ ಚಿಲ್ಲರ್ ಮತ್ತು ವೀರ್ ಪಹಾರಿಯಾ ರೊಮ್ಯಾಂಟಿಕ್ ಮೂಡ್‌ನಲ್ಲಿ ಕುಳಿತಿರುವುದು ಸೆರೆಯಾಗಿದೆ.

ಸೆರೆಯಾದ ಈ ವಿಡಿಯೋದಲ್ಲಿ ಮಾನುಷಿ ಚಿಲ್ಲರ್, ವೀರ್ ಪಹಾರಿಯಾ ಹೆಗಲಿಗೆ ಒರಗಿ ಅವರ ಕೈಯನ್ನು ಹಿಡಿದು ಕುಳಿತಿದ್ದಾರೆ. ಹೀಗಾಗಿಯೇ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಅನೇಕರು ತಮ್ಮ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ಧಾರೆ. ಬಾಲಿವುಡ್‌ನ ಹೊಸ ಪ್ರಣಯ ಪಕ್ಷಿಗಳು ಎನ್ನುತ್ತಿದ್ದಾರೆ. ಕೆಲವರು ಇದೆಲ್ಲದರ ಕಡೆ ಗಮನ ಕೊಡುವ ಬದಲು ಮಾನುಷಿ ಚಿತ್ರರಂಗದ ಕಡೆ ಗಮನವಹಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದರೆ, ಇನ್ನೂ ಕೆಲವರು ಸಾರಾ ಅಲಿ ಖಾನ್ ಅವರ ಬಗ್ಗೆ ಕನಿಕರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೇ ಮಾನುಷಿ ಚಿಲ್ಲರ್‌ ಗೆ ಇದು ಮೊದಲ ಪ್ರೇಮವಲ್ಲ. ವೀರ್ ಪಹಾರಿಯಾಕ್ಕಿಂತ ಮುಂಚೆ ಮಾನುಷಿ ಚಿಲ್ಲರ್ ಹೃದಯ ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಪಾಲಾಗಿತ್ತು. ಆದರೆ, ಆ ನಂತರ ಏನಾಯ್ತೋ.. ಇಬ್ಬರು ದೂರವಾದರು. ಈಗ ಮಾನುಷಿ ವೀರ್ ಪಹಾರಿಯಾ ಜೊತೆ ಪ್ರೇಮ ಗೀತೆ ಹಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X