ಸಾರಾ ಅಲಿ ಖಾನ್‌ ಮಾಜಿ ಪ್ರಿಯಕರನ ಜೊತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಲವ್ವು ಡವ್ವು...?

ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಆದರೆ.. ಇದು ಬಣ್ಣದ ಲೋಕ. ಇಲ್ಲಿ.. ಪ್ರೀತಿ ಮೊಳಕೆಯೊಡೆದಷ್ಟೇ ವೇಗವಾಗಿ ಉಸಿರುಗಟ್ಟಿ ಸತ್ತು ಹೋಗುತ್ತದೆ. ಆ ನಂತರ ಅಷ್ಟೇ ಬೇಗ ಇನ್ಯಾರದ್ದೋ ಮೇಲೆ ಮತ್ತೊಮ್ಮೆ ಪ್ರೇಮಾಂಕುರವಾಗುತ್ತೆ. ಇದಕ್ಕೆ .. ವೀರ್ ಪಹಾರಿಯಾ ಮತ್ತು ಮಾನುಷಿ ಚಿಲ್ಲರ್ ಸದ್ಯದ ಉದಾಹರಣೆ.

ಹೌದು, ವಿಶ್ವ ಸುಂದರಿ ಕಿರೀಟವನ್ನ ಮುಡಿಗೇರಿಸಿಕೊಂಡು ಆ ನಂತರ ಸೀದಾ ಬಾಲಿವುಡ್‌ಗೆ ಬಂದ ಮಾನುಷಿ ಚಿಲ್ಲರ್ ಸದ್ಯ ಮಾಜಿ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಶಿಂಧೆ ಮೊಮ್ಮಗ ವೀರ್‌ ಪಹಾರಿಯಾ ಜೊತೆ ಸುತ್ತಾಡುತ್ತಿದ್ದಾರೆ. ಪ್ರೀತಿ ಕಿತಾಬು ಓದುತ್ತಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಮಾಯಾನಗರಿ ಮುಂಬೈನಲ್ಲಿ ಗುಲ್ಲಾಗಿದೆ. ವಿಶೇಷ ಅಂದರೆ ಈ ವೀರ್‌ ಪಹಾರಿಯಾ ಬೇರೆ ಯಾರು ಅಲ್ಲ. ಬದಲಿಗೆ.. ಜಾಹ್ನವಿ ಕಪೂರ್ ಹೃದಯ ಕದ್ದ ಶಿಖರ್ ಪಹಾರಿಯಾ ಅವರ ಸಹೋದರ. ಇನ್ನೂ ವಿಶೇಷ ಅಂದರೆ.. ಒಂದ್ಕಾಲದಲ್ಲಿ ಬಾಲಿವುಡ್‌ನ ಚೋಟೆ ನವಾಬ್ ಸೈಫ್ ಅಲಿ ಖಾನ್ ಅವರ ಮುದ್ದಾದ ಮಗಳು ಸಾರಾ ಅಲಿ ಖಾನ್ ಅವರ ಹೃದಯವನ್ನೂ ಗೆದ್ದಿದ್ದ ಚೋರ ಈ ವೀರ್ ಪಹಾರಿಯಾ. ಇಂಥಾ ವೀರ್ ಪಹಾರಿಯಾ ಈಗ ಸಾರಾ ಅಲಿ ಖಾನ್ ಅವರ ತೆಕ್ಕೆಯಿಂದ ಜಾರಿ ಸೀದಾ ಮಾನುಷಿ ಚಿಲ್ಲರ್ ಮಡಿಲಿನಲ್ಲಿ ಬಿದ್ದಿದ್ದಾರೆ ಅನ್ನುವುದು ಈ ಕ್ಷಣದ ಬ್ರೇಕಿಂಗ್ ನ್ಯೂಸು.

manushi-chhillar-is-dating-sara-ali-khans-ex-bf-veer-pahariya

ಅಂದ್ಹಾಗೇ ಮಾನುಷಿ ಚಿಲ್ಲರ್‌ ಗೆ ಇದು ಮೊದಲ ಪ್ರೇಮವಲ್ಲ. ವೀರ್ ಪಹಾರಿಯಾಕ್ಕಿಂತ ಮುಂಚೆ ಮಾನುಷಿ ಚಿಲ್ಲರ್ ಹೃದಯ ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಪಾಲಾಗಿತ್ತು. ಆದರೆ, ಆ ನಂತರ ಏನಾಯ್ತೋ.. ಇಬ್ಬರು ದೂರವಾದರು. ಈಗ ಮಾನುಷಿ ಹೆಸರು ವೀರ್ ಪಹಾರಿಯಾ ಜೊತೆ ಥಳುಕು ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಮಾನುಷಿ ಮತ್ತು ವೀರ್ ಪಹಾರಿಯಾ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಸಂಗೀತ ಸಮಾರಂಭದಲ್ಲಿ ಥಕ ಥೈ ಎಂದು ಕುಣಿದಿದ್ದಾರೆ. ಮಾನುಷಿ ಸಿಲ್ವರ್ ಲೆಹೆಂಗಾದಲ್ಲಿ ಬೆರಗುಗೊಳಿಸಿದರೆ, ವೀರ್ ಅದೇ ಬಣ್ಣದ ಕುರ್ತಾದಲ್ಲಿ ಹೆಜ್ಜೆ ಹಾಕಿದ್ದಾರೆ.

ಇನ್ನೂ.. ಇದಕ್ಕೂ ಮುನ್ನ ಮಾನುಷಿ ಚಿಲ್ಲರ್-ವೀರ್ ಪಹಾರಿಯಾ-ಜಾಹ್ನವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಜೊತೆಯಾಗಿ ಪ್ರವಾಸಕ್ಕೂ ತೆರಳಿದ್ದರು. ಕೆಲ ಕಾಲ ಮೋಜು ಮಸ್ತಿಯನ್ನು ಮಾಡಿದ್ದರು. ಉಳಿದಂತೆ ಬಾಂಬೆ ಟೈಮ್ಸ್ ವರದಿಯ ಪ್ರಕಾರ ಮಾನುಷಿ ಮತ್ತು ವೀರ್ ಸಂಬಂಧ ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿದ್ದು, ವೀರ್ ಸ್ನೇಹಿತರ ಬಳಗವನ್ನು ಮಾನುಷಿ ಚಿಲ್ಲರ್ ಸದ್ಯಕ್ಕೆ ಪರಿಚಯ ಮಾಡಿಕೊಂಡಿದ್ದಾರೆ. ವೀರ್ ಮತ್ತು ಅವರ ಸ್ನೇಹಿತರ ಜೊತೆ ಹೆಚ್ಚೆಚ್ಚು ಸಮಯವನ್ನೂ ಕಳೆಯುತ್ತಿದ್ದಾರೆ.

manushi-chhillar-is-dating-sara-ali-khans-ex-bf-veer-pahariya

ಒಟ್ನಲ್ಲಿ ಸದ್ಯಕ್ಕೆ ಮಾನುಷಿ ಚಿಲ್ಲರ್ ಮತ್ತು ವೀರ್ ಪಹಾರಿಯಾ ಅವರ ಸಂಬಂಧದ ಕುರಿತು ಬಾಲಿವುಡ್‌ನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ವೀರ್ ಪಹಾರಿಯಾ ಜೊತೆ ಮಾನುಷಿ ಮದ್ವೆಯಾಗುವುದು ಖಚಿತ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಹಾಗೊಂದು ವೇಳೆ ಈ ಸುದ್ದಿ ನಿಜವಾದಲ್ಲಿ.. ಮಾನುಷಿ ಚಿಲ್ಲರ್ ವೀರ್ ಪಹಾರಿಯಾ ಜೊತೆ ಮದುವೆಯಾಗಿದ್ದೇ ಆದಲ್ಲಿ.. ಜಾಹ್ನವಿ ಕಪೂರ್ ಮತ್ತು ಮಾನುಷಿ ಚಿಲ್ಲರ್ ಒಂದೇ ಮನೆಯ ಸೊಸೆಯಾಗಲಿದ್ದಾರೆ. ಬಾಲಿವುಡ್‌ನ ಎರಡು ಅತ್ಯಮೂಲ್ಯ ರತ್ನಗಳು ಪಹಾರಿಯಾ ಬ್ರದರ್ಸ್ ಮನೆಗೆ ಸೇರಿದಂತೆ ಆಗಲಿದೆ. ನಿಜಕ್ಕೂ ಇಬ್ಬರು ಒಂದೇ ಮನೆಯ ಸೊಸೆಯಾಗ್ತಾರಾ..? ಉತ್ತರ ಕಾಲವೇ ನೀಡಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X