For Quick Alerts
  ALLOW NOTIFICATIONS  
  For Daily Alerts

  3ನೇ ಚಿತ್ರಕ್ಕೆ ಸಹಿ ಮಾಡಿದ 'ಮಿಸ್ ವರ್ಲ್ಡ್' ಮಾನುಷಿ ಚಿಲ್ಲರ್

  |

  2017ರಲ್ಲಿ 'ಮಿಸ್ ವರ್ಲ್ಡ್' ಪಟ್ಟ ಗೆದ್ದ ಬಳಿಕ ಮಾನುಷಿ ಚಿಲ್ಲರ್ ಬಾಲಿವುಡ್ ಇಂಡಸ್ಟ್ರಿಯನ್ನು ಆಳುವ ಸೂಚನೆ ಕೊಟ್ಟಿದ್ದರು. ಅದರಂತೆ ಬಿಟೌನ್‌ನ ದೊಡ್ಡ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ನಿರ್ಮಿಸುತ್ತಿದ್ದ 'ಪೃಥ್ವಿರಾಜ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು.

  ಈ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಅಷ್ಟರೊಳಗೆ ಮೂರನೇ ಚಿತ್ರಕ್ಕೆ ಮಾನುಷಿ ಚಿಲ್ಲರ್ ಸಹಿ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ವಿಶೇಷ ಅಂದ್ರೆ ಮೂರನೇ ಚಿತ್ರವೂ ಯಶ್ ರಾಜ್ ಫಿಲಂಸ್ ಸಂಸ್ಥೆಗೆ ಮಾಡುತ್ತಿರುವುದು ಗಮನಿಸಬೇಕಾದ ಸಂಗತಿ.

  ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.!ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.!

  ಯಶ್ ರಾಜ್ ಸಂಸ್ಥೆ ನಿರ್ಮಾಣ ಹಾಗೂ ಶಿವ್ ರಾವಲಿ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೆ ಮಾನುಷಿ ಚಿಲ್ಲರ್ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ತಿಳಿದಿದೆ. ಮುಂದೆ ಓದಿ...

  ಅಹಾನ್ ಪಾಂಡೆ ಜೊತೆ ಮಾನುಷಿ?

  ಅಹಾನ್ ಪಾಂಡೆ ಜೊತೆ ಮಾನುಷಿ?

  ಬಾಲಿವುಡ್ ನಟ ಚಂಕಿ ಪಾಂಡೆ ಸೋದರಳಿಯ ಅಹಾನ್ ಪಾಂಡೆ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಲು ಸಜ್ಜಾಗುತ್ತಿದ್ದು, ನಿರ್ದೇಶಕ ಶಿವ್ ರಾವಲಿ ಪರಿಚಯ ಮಾಡಲು ತಯಾರಿ ನಡೆಸಿದ್ದಾರೆ. ಇದೇ ಸಿನಿಮಾಗೆ ಈಗ ಮಾನುಷಿ ಚಿಲ್ಲರ್ ನಾಯಕಿ ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಆದಿತ್ಯ ಚೋಪ್ರಾ ಬಂಡವಾಳ ಹಾಕುತ್ತಿದ್ದಾರೆ.

  ವಿಕ್ಕಿ ಕೌಶಲ್ ಜೊತೆ ಮಿಸ್ ವರ್ಲ್ಡ್

  ವಿಕ್ಕಿ ಕೌಶಲ್ ಜೊತೆ ಮಿಸ್ ವರ್ಲ್ಡ್

  ಇದಕ್ಕೂ ಮುಂಚೆ ವಿಜಯ್ ಕೃಷ್ಣ ಅಚಾರ್ಯ ನಿರ್ದೇಶನ ಮಾಡಲಿರುವ ಕಾಮಿಡಿ ಸಿನಿಮಾದಲ್ಲಿ ಮಾನಷಿ ಚಿಲ್ಲರ್ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್‌ನಲ್ಲಿ ವಿಕ್ಕಿ ಕೌಶಲ್ ನಾಯಕ. ಈ ಸಿನಿಮಾ ಸಹ ಯಶ್ ರಾಜ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲಿಗೆ ಮಾನುಷಿ ನಟಿಸುತ್ತಿರುವ ಮೊದಲ ಮೂರು ಸಿನಿಮಾಗಳು ಯಶ್ ರಾಜ್ ಬ್ಯಾನರ್ ಎನ್ನುವುದು ವಿಶೇಷ.

  ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಗಿದೆ ನವೆಂಬರ್ 18 ರ ನಂಟು.! ಏನದು.?ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಗಿದೆ ನವೆಂಬರ್ 18 ರ ನಂಟು.! ಏನದು.?

  ಪೃಥ್ವಿರಾಜ್ ಚಿತ್ರದಲ್ಲಿ ನಾಯಕಿ

  ಪೃಥ್ವಿರಾಜ್ ಚಿತ್ರದಲ್ಲಿ ನಾಯಕಿ

  ನಟ ಅಕ್ಷಯ್ ಕುಮಾರ್ ನಟಿಸಿರುವ 'ಪೃಥ್ವಿರಾಜ್' ಸಿನಿಮಾದಲ್ಲಿ ಮಾನುಷಿ ಚಿಲ್ಲರ್ ಕಾಣಿಸಿಕೊಂಡಿದ್ದಾರೆ. ಇದು ಮಿಸ್ ವರ್ಲ್ಡ್ ಸುಂದರಿಯ ಚೊಚ್ಚಲ ಸಿನಿಮಾ. ಸಂಪೂರ್ಣವಾಗಿ ಶೂಟಿಂಗ್ ಮುಗಿದಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಚಿತ್ರಮಂದಿರಕ್ಕೆ ಸಿನಿಮಾ ಬರಬೇಕಿತ್ತು. ಆದ್ರೆ, ಕೋವಿಡ್ ಕಾರಣದಿಂದ ವಿಳಂಬವಾಗಿದೆ.

  ಯಶ್ ರಾಜ್ ಸಂಸ್ಥೆಯ ನೆಚ್ಚಿನ ನಟಿ

  ಯಶ್ ರಾಜ್ ಸಂಸ್ಥೆಯ ನೆಚ್ಚಿನ ನಟಿ

  ಅಂದ್ಹಾಗೆ, 2017ರ ಭುವನ ಸುಂದರಿ ಜೊತೆ ಯಶ್ ರಾಜ್ ಫಿಲಂಸ್ ಮೂರು ಪ್ರಾಜೆಕ್ಟ್‌ಗಳ ಒಪ್ಪಂದ ಮಾಡಿಕೊಂಡಿತ್ತು. ಆ ಹಿನ್ನೆಲೆ ಮೂರು ಸಿನಿಮಾಗೆ ಸಹಿ ಮಾಡಿದ್ದಾರೆ. ಇನ್ನು ನಟಿಯ ಡೆಡಿಕೇಷನ್, ಕೆಲಸ, ಶ್ರದ್ಧೆ ಬಗ್ಗೆ ನಿರ್ಮಾಣ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

  ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು | Filmibeat Kannada
  English summary
  2017 Miss World Manushi Chhillar signs her 3rd Project in Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X