ಸುಶಾಂತ್ ಸಿಂಗ್ ಅಂತ್ಯಕ್ರಿಯೆಯಲ್ಲಿ ಯಾವೆಲ್ಲಾ ನಟ-ನಟಿಯರು ಹಾಜರಿದ್ದರು?

ನಿನ್ನೆ ಮೃತಪಟ್ಟ ಬಾಲಿವುಡ್ ಯುವನಟ ಸುಶಾಂಗ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ಇಂದು ಮುಂಬೈನಲ್ಲಿ ನಡೆಯಿತು.

Recommended Video

Sushanth Singh Rajput's dad collapsed after hearing his son's news | Filmibeat Kannada

ಮುಂಬೈನ ವಿಲೆ ಪಾರ್ಲೆ ಚಿತಾಗಾರದಲ್ಲಿ ಕೆಲವೇ ಮಂದಿ ಕುಟುಂಬ ಸದಸ್ಯರು ಮತ್ತು ಸಿನಿಮಾ ಉದ್ಯಮದ ಗೆಳೆಯರ ಸಮ್ಮುಖದಲ್ಲಿ ಅಂತಿಮಕ್ರಿಯೆ ನಡೆಯಿತು.

ಕೊರೊನಾ ಭೀತಿಯ ನಡುವೆ ಕೆಲವೇ ಮಂದಿ ಆಪ್ತರು ಅಂತಿಮಕ್ರಿಯೆಯಲ್ಲಿ ಭಾಗವಹಿಸಿದ್ದರು. ಜೋರು ಮಳೆಯ ನಡುವೆಯೇ ಸುಶಾಂತ್ ಸಿಂಗ್ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಸಿನಿಮಾರಂಗದ ಗಣ್ಯರ ಹೆಸರುಗಳು ಇಲ್ಲಿವೆ.

ಪ್ರೇಯಸಿ ರೆಹಾ ಚಕ್ರೊಬರ್ತಿ ಭಾಗಿ

ಪ್ರೇಯಸಿ ರೆಹಾ ಚಕ್ರೊಬರ್ತಿ ಭಾಗಿ

ಸುಶಾಂತ್ ಸಿಂಗ್‌ನ ಪ್ರೇಯಸಿ ರೆಹಾ ಚಕ್ರವರ್ತಿ ಗೆಳೆಯನ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದರು. ರೆಹಾ ಚಕ್ರವರ್ತಿ ಜೊತೆಗೆ ಆತ್ಮೀಯ ಬಾಂಧವ್ಯ ಸುಶಾಂತ್ ಸಿಂಗ್‌ ಗೆ ಇತ್ತು. ಶನಿವಾರ ಮಧ್ಯರಾತ್ರಿ ಸುಶಾಂತ್ ಸಿಂಗ್, ರೆಹಾ ಚಕ್ರವರ್ತಿಗೆ ಕರೆ ಮಾಡಿದ್ದರು.

ಗೆಳತಿ ಕೃತಿ ಸೆನನ್ ಭಾಗಿ

ಗೆಳತಿ ಕೃತಿ ಸೆನನ್ ಭಾಗಿ

ಆತ್ಮೀಯ ಗೆಳತಿ ಕೃತಿ ಸೆನನ್ ಸಹ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದರು. ರಾಬ್ತಾ ಸಿನಿಮಾದಲ್ಲಿ ಸುಶಾಂತ್ ಜೊತೆಯಲ್ಲಿ ನಟಿಸಿದ್ದ ಇವರೊಂದಿಗೆ ಸುಶಾಂತ್ ಹೆಸರು ಕೆಲಕಾಲ ತಳುಕು ಹಾಕಿಕೊಂಡಿತ್ತು. ಗೆಳೆಯನಿಗೆ ಅಂತಿಮ ವಿದಾಯ ಹೇಳಲು ಅವರು ಆಗಮಿಸಿದ್ದರು.

ನಟಿ ಶ್ರದ್ಧಾ ಕಪೂರ್ ಭಾಗಿ

ನಟಿ ಶ್ರದ್ಧಾ ಕಪೂರ್ ಭಾಗಿ

ನಟ ವಿವೇಕ್ ಒಬೆರಾಯ್ ಸಹ ಅಂತಿಮಕ್ರಿಯೆಯಲ್ಲಿ ಭಾಗವಹಿಸಿದ್ದರು. ಚಿಚೋರೆ ಸಿನಿಮಾದ ನಾಯಕಿ ಶ್ರದ್ಧಾ ಕಪೂರ್, ಸಿನಿಮಾದ ನಿರ್ದೇಶಕ ಅಭಿಶೇಕ್ ಕಪೂರ್ ಮತ್ತು ಅವರ ಪತ್ನಿ ಸಹ ಹಾಜರಿದ್ದರು. ಅಭಿಶೇಕ್ ಕಪೂರ್ ತಮ್ಮ ಕಾಯ್‌ಪೋಚೆ ಸಿನಿಮಾದಲ್ಲಿ ಮೊದಲ ಬಾರಿಗೆ ಸುಶಾಂತ್‌ ಗೆ ಅವಕಾಶ ನೀಡಿದ್ದರು.

ಗೆಳೆಯ ರಾಜ್‌ಕುಮಾರ್ ರಾವ್

ಗೆಳೆಯ ರಾಜ್‌ಕುಮಾರ್ ರಾವ್

ಕಾಯ್‌ಪೊಚೆ, ರಾಬ್ತಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ರಾಜ್‌ಕುಮಾರ್ ರಾವ್ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ನಟ ಅರುಣ್ ಶೌರಿ ಸಹ ಭಾಗವಹಿಸಿದ್ದರು. ಸುಶಾಂತ್‌ ಗೆ ಬಾಲಿವುಡ್ ಸ್ಟಾರ್‌ಗಳು ತೋರಿದ ಅಸಹಕಾರದ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.

ಗಾಯಕ ಉದಿತ್ ನಾರಾಯಣ್

ಗಾಯಕ ಉದಿತ್ ನಾರಾಯಣ್

ಗಾಯಕ ಉದಿತ್ ನಾರಾಯಣ್, ಟಿವಿ ನಟ ಕ್ರಿಸ್ಟಲ್ ಡಿಸೋಜಾ, ರಾಬ್ತಾ ನಿರ್ದೇಶಕ ವಿಜನ್, ನಟ ಜಾಕಿ ಬಗ್ನಾನಿ, ರಾಜಕಾರಣಿ ಸಂಜಯ್ ನಿರುಪಮ್ ಭಾಗವಹಿಸಿದ್ದರು. ಮುಖ್ಯವಾಗಿ ಸುಶಾಂತ್ ಅವರ ತಂದೆ, ಸಹೋದರಿಯರು ಹಾಜರಿದ್ದರು.

More from Filmibeat

English summary
Many actors from film industry participated in last rite of actor Sushant SIngh held in Mumbai today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X