For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ಹುಟ್ಟುಹಬ್ಬದಲ್ಲಿ ಭಾಗಿಯಾದ ಸೆಲೆಬ್ರಿಟಿಗಳಿವರು

  |

  ಬಾಲಿವುಡ್ ಪಾರ್ಟಿಗಳು ಸದಾ ರಂಗು-ರಂಗು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಅವರ ಗ್ಲಾಮರಸ್ ಉಡುಗೆಗಳು, ಹಾಡು-ಕುಣಿತ-ಕುಡಿತಗಳು ಸದಾ ಜೋರು. ಈ ಬಾಲಿವುಡ್ 'ದೊಡ್ಡವರ' ಪಾರ್ಟಿಗಳಲ್ಲಿ ಏನು ನಡೆಯುತ್ತದೆ ಎಂಬ ಕುತೂಹಲ ಸಾಮಾನ್ಯರಿಗೆ ಸಹಜ.

  ಬಾಲಿವುಡ್‌ನ ಬೇಬೊ ಎಂದೇ ಕರೆಸಿಕೊಳ್ಳುವ ನಟಿ ಕರೀನಾ ಕಪೂರ್ ನಿನ್ನೆಯಷ್ಟೆ (ಸೆಪ್ಟೆಂಬರ್ 21) ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ನವಾಬ್ ಕುಟುಂಬದ ಸೊಸೆಯಾಗಿರುವ ಕರೀನಾ ಐಶಾರಾಮಿ ಪಾರ್ಟಿಯನ್ನೇ ಮಾಡಿದ್ದಾರೆ.

  ಎಸ್. ಎಸ್ ರಾಜಮೌಳಿ ಅಂದ್ರೆ ತುಂಬಾ ಇಷ್ಟ ಎಂದು ನುಲಿದ ಬಾಲಿವುಡ್ ಬ್ಯೂಟಿ!ಎಸ್. ಎಸ್ ರಾಜಮೌಳಿ ಅಂದ್ರೆ ತುಂಬಾ ಇಷ್ಟ ಎಂದು ನುಲಿದ ಬಾಲಿವುಡ್ ಬ್ಯೂಟಿ!

  ಬಾಲಿವುಡ್‌ನ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ನವಾಬ್ ಕುಟುಂಬದ ಪಾರ್ಟಿಗಳು ಸದಾ ರಂಗು-ರಂಗಾಗಿರುತ್ತವೆ. ಅದರಲ್ಲಿಯೂ ಕರೀನಾ ಸಹ ಪಾರ್ಟಿ ಫ್ರೀಕ್‌ ಕಪೂರ್‌ ಕುಟುಂಬದ ಕುಡಿ ಆಗಿರುವುದರಿಂದ ಇವರ ಪಾರ್ಟಿಯ ಜೋರು ತುಸು ಹೆಚ್ಚೇ.

  ಕರೀನಾ ಕಪೂರ್‌ಳ 42ನೇ ಹುಟ್ಟುಹಬ್ಬದಲ್ಲಿ ಬಾಲಿವುಡ್‌ನ ಹಲವು ಖ್ಯಾತನಾಮ ನಟ-ನಟಿಯರು ಭಾಗಿಯಾಗಿದ್ದರು. ಈ ಪಾರ್ಟಿಯ ಕೆಲವು ಚಿತ್ರಗಳು ಸಹ ಸಖತ್ ವೈರಲ್ ಆಗಿವೆ.

  ಕಪೂರ್ ಕುಟುಂಬಕ್ಕೆ ಸೊಸೆಯಾಗಿ ಬಂದಿರುವ ಆಲಿಯಾ ಭಟ್, ಕರೀನಾರ ಸಹೋದರ ರಣ್‌ಬೀರ್ ಕಪೂರ್, ಕರೀನಾರ ಸಂಬಂಧಿ ಅರ್ಜುನ್ ಕಪೂರ್ ಹಾಗೂ ಆತನ ಗರ್ಲ್‌ಫ್ರೆಂಡ್ ಮಲೈಕಾ ಅರೋರಾ, ಕರೀನಾರ ಅಕ್ಕ ಕರಿಶ್ಮಾ ಕಪೂರ್, ಕರೀನಾರ ಪತಿ ಸೈಫ್ ಅಲಿ ಖಾನ್‌ರ ಸಹೋದರಿ ಸೋಹಾ ಅಲಿ ಖಾನ್ ಹಾಗೂ ಆಕೆಯ ಪತಿ ಕುನಾಲ್ ಖೇಮು, ಕರೀನಾರ ಆತ್ಮೀಯ ಗೆಳೆಯ ಕರಣ್ ಜೋಹರ್, ಕರೀನಾರ ಮತ್ತೊಬ್ಬ ಆತ್ಮೀಯ ಗೆಳೆಯ ವಸ್ತ್ರವಿನ್ಯಾಸಕ ಮನೀಷ್ ಮಲ್ಹೋತ್ರಾ, ಕಪೂರ್ ಕುಟುಂಬದ ಸಂಜಯ್ ಕಪೂರ್, ಮಹದೀಪ್ ಕಪೂರ್, ಅಮೃತಾ ಅರೋರಾ ಇನ್ನೂ ಹಲವರು ಕರೀನಾರ ಬರ್ತ್‌ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.

  ಕರಣ್ ಜೊಹರ್, ಮನೀಷ್ ಮಲ್ಹೋತ್ರಾ ಸೇರಿದಂತೆ ಹಲವರು ಕರೀನಾರ ಬರ್ತ್‌ ಡೇ ಪಾರ್ಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಕರೀನಾರ ಯಾವುದೇ ಬರ್ತ್‌ ಡೇ ಚಿತ್ರಗಳಲ್ಲಿ ಸೈಫ್ ಅಲಿ ಖಾನ್ ಇಲ್ಲ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕರೀನಾಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

  ಕರೀನಾ ಕಪೂರ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿತ್ತು, ಆದರೆ ಸಿನಿಮಾ ಹಿಟ್ ಆಗಲಿಲ್ಲ. ಕರೀನಾ ಇದೀಗ 'ವೀರ್ ದಿ ವೆಡ್ಡಿಂಗ್ 2' ಹಾಗೂ 'ತಕ್ತ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಜೋಯಾ ಅಖ್ತರ್ ನಿರ್ದೇಶನದ ಸಿನಿಮಾದಲ್ಲಿಯೂ ಕರೀನಾ ನಟಿಸಲಿದ್ದಾರೆ.

  English summary
  Many Bollywood celebrities attended Kareena Kapoor's birthday party. Alia Bhatt, Ranbir Kapoor, Karan Johar, Malaika Arora, Soha Ali Khan and many attended the party.
  Thursday, September 22, 2022, 18:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X