For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ ಬರ್ತ್‌ಡೇ ಪಾರ್ಟಿಯಲ್ಲಿ ತಾರೆಯರ ಹಿಂಡು

  |

  ನಿನ್ನೆ (ಜನವರಿ 5) ರಂದು ನಟಿ ದೀಪಿಕಾ ಪಡುಕೋಣೆ ತಮ್ಮ 35 ನೇ ಹುಟ್ಟುಹಬ್ಬವನ್ನು ಪತಿ ಹಾಗೂ ಉದ್ಯಮದ ಗೆಳೆಯರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

  ಮುಂಬೈನ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದಾರೆ ದೀಪಿಕಾ. ಸ್ಟಾರ್ ನಟಿಯ ಹುಟ್ಟುಹಬ್ಬದ ಪಾರ್ಟಿಗೆ ಬಾಲಿವುಡ್‌ನ ಹಲವು ಸೂಪರ್ ಸ್ಟಾರ್‌ಗಳು ಸಹ ಹಾಜರಿದ್ದರು.

  ಒಂದು ಕಾಲದ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಮತ್ತು ಆತನ ಈಗಿನ ಗರ್ಲ್‌ಫ್ರೆಂಡ್ ಆಲಿಯಾ ಭಟ್ ಅವರುಗಳು ದೀಪಿಕಾ ಪಡುಕೋಣೆ ಹುಟ್ಟುಹಬ್ಬ ಪಾರ್ಟಿಯ ಪ್ರಮುಖ ಅತಿಥಿಗಳು. ಇತ್ತೀಚೆಗೆ ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳದೇ ಇರುವ ಕರಣ್ ಜೋಹರ್ ಸಹ ಪಾರ್ಟಿಗೆ ಬಂದಿದ್ದರು.

  ಅನನ್ಯಾ ಪಾಂಡೆ, ಕರಣ್ ಜೋಹರ್, ಇಶಾನ್ ಹಾಜರು

  ಅನನ್ಯಾ ಪಾಂಡೆ, ಕರಣ್ ಜೋಹರ್, ಇಶಾನ್ ಹಾಜರು

  ಕಿರಿಯ ನಟಿ ಅನನ್ಯಾ ಪಾಂಡೆ ಬಿಳಿ ಬಣ್ಣದ ಗ್ಲಾಮರಸ್ ಉಡುಪು ಧರಿಸಿ ಪಾರ್ಟಿಯಲ್ಲಿ ಮಿಂಚಿದರೆ. ಅನನ್ಯಾ ಪಾಂಡೆಯ ಬಾಯ್‌ಫ್ರೆಂಡ್ ಹೊಸ ಹುಡುಗ ಇಶಾನ್ ಕಟ್ಟರ್ ಸಹ ಪಾರ್ಟಿಗೆ ಬಂದಿದ್ದರು.

  ಹಲವು ಸಿನಿಮಾ ಪ್ರಮುಖರು ಹಾಜರಿದ್ದರು

  ಹಲವು ಸಿನಿಮಾ ಪ್ರಮುಖರು ಹಾಜರಿದ್ದರು

  ಸಿನಿಮಾಕರ್ಮಿ ಸಿದ್ಧಾರ್ಥ್ ಆನಂದ್, ಶಾಹೀನ್ ಭಟ್, ಎಲೆಬ್ರಿಟಿ ಫೊಟೊಗ್ರಾಫರ್ ರೋಹನ್ ಶ್ರೇಷ್ಟ, ಶಕುನ್ ಭಾಟ್ರಾ, ಸಿದ್ಧಾಂತ್ ಚತುರ್ವೇದಿ, ಅಯಾನ್ ಮುಖರ್ಜಿ ಇನ್ನೂ ಹಲವರು ಪಾರ್ಟಿಯಲ್ಲಿ ಹಾಜರಿದ್ದರು. ರಣ್ವೀರ್‌ ಸಿಂಗ್‌ ರ ಸಹೋದರಿ, ದೀಪಿಕಾ ರ ಕಸಿನ್‌ಗಳು ಸಹ ಹುಟ್ಟುಹಬ್ಬದ ಪಾರ್ಟಿಗೆ ಬಂದಿದ್ದರು.

  ಕಳೆದ ಬಾರಿ ಪಾರ್ಟಿ ಭಾರಿ ಜೋರಾಗಿತ್ತು

  ಕಳೆದ ಬಾರಿ ಪಾರ್ಟಿ ಭಾರಿ ಜೋರಾಗಿತ್ತು

  ನಟಿ ದೀಪಿಕಾ ಪಡುಕೋಣೆಯ ಕಳೆದ ಬಾರಿಯ ಪಾರ್ಟಿ ಭಾರಿ ಜೋರಾಗಿತ್ತು. ಶಾರುಖ್ ಖಾನ್ ಸಹ ಪಾರ್ಟಿಗೆ ಬಂದಿದ್ದರು. ಆದರೆ ಈ ಬಾರಿ ಸೀಮಿತ ಅತಿಥಿಗಳ ಜೊತೆ ಪಾರ್ಟಿ ಮಾಡಿದ್ದಾರೆ ನಟಿ ದೀಪಿಕಾ ಪಡುಕೋಣೆ. ದೀಪಿಕಾರ ಹುಟ್ಟುಹಬ್ಬದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಹಲವು ಸಿನಿಮಾಗಳಲ್ಲಿ ದೀಪಿಕಾ ಬ್ಯುಸಿ

  ಹಲವು ಸಿನಿಮಾಗಳಲ್ಲಿ ದೀಪಿಕಾ ಬ್ಯುಸಿ

  ನಟಿ ದೀಪಿಕಾ ಪಡುಕೋಣೆ ಪ್ರಸ್ತುತ ಅನನ್ಯಾ ಪಾಂಡೆ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ನಟಿಸಲಿದ್ದಾರೆ. 83 ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಶಾರುಖ್ ಖಾನ್ ಜೊತೆಗೆ ಪಠಾಣ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಕ್ರಿಶ್ 4 ಹಾಗೂ ಧೂಮ್ 4 ಸಿನಿಮಾಗಳಲ್ಲಿ ಸಹ ನಟಿಸುವ ಸಾಧ್ಯತೆ ಇದೆ.

  English summary
  Many movie celebrities attend Deepika Padukone's birthday party. Alia-Ranbeer were the main guests of the event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X