For Quick Alerts
  ALLOW NOTIFICATIONS  
  For Daily Alerts

  'ಬಾಲಿವುಡ್‌ನ ಕೆಲವರಿಗೆ ಅಭದ್ರತೆ ಕಾಡುತ್ತಿದೆ' ಎಂದ ಕಂಗನಾ ರನೌತ್

  |

  ಬಾಲಿವುಡ್ ನಟಿ ಕಂಗನಾ ರನೌತ್ ಕಾಂಟ್ರವರ್ಸಿಗಳಿಂದಲೇ ಹೆಚ್ಚು ಫೇಮಸ್ ಆಗಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಸಮಾಜದಲ್ಲಿ ನಡೆಯುವ ಕೆಲ ಸೂಕ್ಷ್ಮ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಸ್ನೇಹಿತರು ಕೂಡ ತೀರಾ ಕಡಿಮೆ.

  ಸದ್ಯ ಬಾಲಿವುಡ್‌ನಲ್ಲಿ ಮತ್ತೆ ತಮ್ಮ ಆರ್ಭಟ ತೋರಿಸಲು 'ಧಾಕಡ್' ಸಿನಿಮಾದ ಮೂಲಕ ಬೆಳ್ಳಿ ತೆರೆ ಮೇಲೆ ಬರಲು ಕಂಗನಾ ಸಜ್ಜಾಗಿದ್ದಾರೆ. ಇಂದು (ಮೇ 13) ಕಂಗನಾ ಅಭಿನಯಿರುವ ಹೊಸ ಸಿನಿಮಾ 'ಧಾಕಡ್' ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ನೋಡಿದ ಅಭಿಮಾನಿಗಳು ಹಾಗೂ ಸಿನಿ ಕಲಾವಿದರು ಸಿನಿಮಾಗೆ ಶುಭಾಶಯ ಕೋರುತ್ತಿದ್ದಾರೆ.

  ಯುಟ್ಯೂಬ್‌ನಲ್ಲಿ ಟ್ರೆಂಡ್‌ ಆದ ಕಂಗನಾ ಅಭಿನಯದ 'ಶಿ ಈಸ್ ಆನ್ ಫೈರ್‌' ಸಾಂಗ್ಯುಟ್ಯೂಬ್‌ನಲ್ಲಿ ಟ್ರೆಂಡ್‌ ಆದ ಕಂಗನಾ ಅಭಿನಯದ 'ಶಿ ಈಸ್ ಆನ್ ಫೈರ್‌' ಸಾಂಗ್

  ಆದರೆ, ಬಾಲಿವುಡ್‌ನ ಬಿಗ್ ಸ್ಟಾರ್‌ಗಳು ಕಂಗನಾ ನಟಿಸಿದ 'ಧಾಕಡ್' ಸಿನಿಮಾದ ಟ್ರೈಲರ್‌ ಬಗ್ಗೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಲ್ಮಾನ್ ಖಾನ್ ಟ್ರೈಲರ್‌ ನೋಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಆದರೆ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ 'ಧಾಕಡ್' ಟೀಮ್‌ಗೆ ಶುಭ ಕೋರಿದ್ದ ಟ್ವೀಟ್‌ನ್ನು ಡಿಲೀಟ್ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಬಳಿಕ ಕಂಗನಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ಬಾಲಿವುಡ್‌ನಲ್ಲಿ ಕೆಲ ಮಂದಿಗೆ ನನ್ನನ್ನು ಮತ್ತು ನನ್ನ ಕೆಲಸಗಳನ್ನು ಹೊಗಳಲು ಅಭದ್ರತೆ ಕಾಡುತ್ತಿದೆ. ಆ ಕಾರಣದಿಂದ ನಾನು ಮಾಡಿದ ಕೆಲಸಕ್ಕೆ ಬೆಂಬಲ ನೀಡುವುದಿಲ್ಲ." ಎಂದಿದ್ದಾರೆ.

   ನೇರವಾಗಿ ಮಾತನಾಡುವ ಕಂಗನಾ ರನೌತ್

  ನೇರವಾಗಿ ಮಾತನಾಡುವ ಕಂಗನಾ ರನೌತ್

  ನಟಿ ಕಂಗನಾ ರನೌತ್ ಯಾವುದೇ ವಿಷಯವಾಗಲಿ ಮನಸ್ಸಿಗೆ ಅನ್ನಿಸಿದ್ದನ್ನು ಓಪನ್ ಆಗಿ ನೇರವಾಗಿ ಮಾತನಾಡುತ್ತಾರೆ. ಹೀಗಾಗಿ ಬಾಲಿವುಡ್‌ನಲ್ಲಿ ಅವರಿಗೆ ಹೆಚ್ಚಾಗಿ ಸ್ನೇಹಿತರಿಲ್ಲ. ಸದ್ಯ ಈಗಲೂ ಕೂಡ ಯಾವುದೇ ಫಿಲ್ಟರ್‌ಗಳಿಲ್ಲದೆ ಮಾತನಾಡಿರುವ ನಟಿ "ಬಾಲಿವುಡ್‌ ಮಂದಿ ನನ್ನನ್ನು ಹೊಗಳಲು ಇಷ್ಟಪಡುವುದಿಲ್ಲ. ಯಾವುದೇ ಲಾಬಿ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಬಾಲಿವುಡ್ ಮಂದಿಗೆ ಅಭದ್ರತೆ ಕಾಡುತ್ತಿದೆ ಎಂದಿದ್ದಾರೆ." ಅಲ್ಲದೆ 'RRR' ಆಗಲಿ, 'ಪುಷ್ಪ' ಆಗಲಿ ಯಾವುದೇ ಒಳ್ಳೆಯ ಸಿನಿಮಾ ಬಂದರೂ ನಾನು ಹೊಗಳುತ್ತೇನೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನಾನೇ ಮೊದಲು ಹೊಗಳಿದ್ದು, ಉತ್ತಮ ಚಿತ್ರಗಳನ್ನು ನಾನು ಮನಸಾರೆ ಹೊಗಳುತ್ತೇನೆ." ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

  ರಾಜಮೌಳಿ ಯಶಸ್ವಿ ನಿರ್ದೇಶಕ ಏಕೆ? ಕಂಗನಾ ಕೊಟ್ಟರು ಕಾರಣರಾಜಮೌಳಿ ಯಶಸ್ವಿ ನಿರ್ದೇಶಕ ಏಕೆ? ಕಂಗನಾ ಕೊಟ್ಟರು ಕಾರಣ

   'ಧಾಕಡ್' ಚಿತ್ರತಂಡಕ್ಕೆ ವಿಶ್ ಮಾಡಿ ಬಳಿಕ ಪೋಸ್ಟ್ ಡಿಲೀಟ್

  'ಧಾಕಡ್' ಚಿತ್ರತಂಡಕ್ಕೆ ವಿಶ್ ಮಾಡಿ ಬಳಿಕ ಪೋಸ್ಟ್ ಡಿಲೀಟ್

  ಇತ್ತೀಚಿಗಷ್ಟೇ 'ಧಾಕಡ್' ಸಿನಿಮಾದ ಹಾಡಿನ ಟೀಸರ್ ಬಿಡುಡೆಯಾಗಿತ್ತು. ಹಾಡಿನ ಟೀಸರ್ ಅನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗುಡ್ ವಿಶಸ್ ಎಂದು ಪೋಸ್ಟ್ ಹಾಕಿದ್ದರು. ಆದರೆ ಪೋಸ್ಟ್ ಹಾಕಿದ ಕೆಲವೇ ನಿಮಿಷದಲ್ಲಿ ಅಮಿತಾಭ್ ತಾವು ಹಾಕಿದ್ದ ಪೋಸ್ಟ್‌ನ್ನು ಡಿಲೀಟ್ ಮಾಡಿಬಿಟ್ಟರು. ಅಮಿತಾಭ್ ಬಚ್ಚನ್ ಅವರ ಈ ನಡೆಯಿಂದ ಕಂಗನಾ ಬೇಸರವನ್ನು ವ್ಯಕ್ತಪಡಿಸಿದ್ದರು.

   ಅಮಿತಾಭ್ ಪೋಸ್ಟ್ ಡಿಲೀಟ್‌ಗೆ ಕಂಗನಾ ಪ್ರತಿಕ್ರಿಯೆ ಏನು ?

  ಅಮಿತಾಭ್ ಪೋಸ್ಟ್ ಡಿಲೀಟ್‌ಗೆ ಕಂಗನಾ ಪ್ರತಿಕ್ರಿಯೆ ಏನು ?

  'ಧಾಕಡ್' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ನಟಿ ಕಂಗನಾ ರನೌತ್ ಪ್ರಚಾರದ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಪೋಸ್ಟ್ ಡಿಲೀಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ವೈಯಕ್ತಿಕ ಅಭದ್ರತೆಗಳಿವೆ. ನಾವು ಉದ್ಯಮದಿಂದ ಬಹಿಷ್ಕಾರಕ್ಕೆ ಒಳಗಾಗುತ್ತೇವೆ ಎಂಬ ಕಾರಣಕ್ಕೆ ಕೆಲವರು ಹಿಂದೆ ಸರಿಯಬಹುದು ಎಂದು ನಾನು ಭಾವಿಸುವುದಿಲ್ಲ. ಪ್ರತಿಯೊಬ್ಬರಲ್ಲೂ ಲೈಕ್ಸ್ ಡಿಸ್ಲೈಕ್ಸ್ ಅನ್ನೋದು ಇರುತ್ತೆ ಅದು ಸಹಜ. ಆದರೆ, ಅಮಿತಾಭ್ ಬಚ್ಚನ್ ಅವರು ಪೋಸ್ಟ್ ಹಾಕಿ 5-10 ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ. ಅವರಂತಹ ದೊಡ್ಡ ನಟರಿಗೆ ಯಾವ ಒತ್ತಡವಿರುತ್ತೆ ನನಗಂತೂ ಗೊತ್ತಿಲ್ಲ. ಇದು ಕೊಂಚ ವಿಚಿತ್ರವಾಗಿದೆ." ಎಂದು ಹೇಳಿಕೊಂಡಿದ್ದಾರೆ.

  ಮದುವೆ ಆಗಿಲ್ಲ ಏಕೆ? ಕಾರಣ ನೀಡಿದ ಕಂಗನಾಮದುವೆ ಆಗಿಲ್ಲ ಏಕೆ? ಕಾರಣ ನೀಡಿದ ಕಂಗನಾ

   'ಧಾಕಡ್‌'ನಲ್ಲಿ ಕಂಗನಾ ಹೊಸ ಅವತಾರ

  'ಧಾಕಡ್‌'ನಲ್ಲಿ ಕಂಗನಾ ಹೊಸ ಅವತಾರ

  ಆಕ್ಷನ್ ಡ್ರಾಮಾ ಇರುವ 'ಧಾಕಡ್' ಸಿನಿಮಾದಲ್ಲಿ ಕಂಗನಾ ರನೌತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಟ್ರೈಲರ್ ಹಾಗೂ ಹಾಡಿನ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿರುವ 'ಧಾಕಡ್' ಸಿನಿಮಾ ಇದೇ ಮೇ 20 ರಂದು ಬಿಡುಗಡೆಯಾಗಲಿದ್ದು, ಕಂಗನಾ ಬೆಳ್ಳಿ ತೆರೆ ಮೇಲೆ ರಾಕ್‌ ಮಾಡಲು ಸಿದ್ದರಾಗಿದ್ದಾರೆ. ಈಗಾಗಲೇ ಯುಟ್ಯೂಬ್‌ನಲ್ಲಿ ಸಿನಿಮಾ ಟ್ರೈಲರ್‌ 30 ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ. ಈಗ 'ಶೀ ಈಸ್‌ ಆನ್ ಫೈರ್‌' ಹಾಡು ಕೂಡ ಹೆಚ್ಚಿನ ವೀವ್ಸ್ ಪಡೆದುಕೊಳ್ಳುತ್ತಿದೆ. ಸದ್ಯ ಹಾಡು, ಟ್ರೈಲರ್ ನೋಡಿರುವ ಕಂಗನಾ ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ.

  English summary
  Kangana Ranaut says many in Bollywood refrain from praising her work because of their insecurities.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X