ಮೀ ಟೂ ಚಳವಳಿಯಿಂದ ಪ್ರಭಾವಿಗಳು ತಪ್ಪಿಸಿಕೊಂಡಿದ್ದಾರೆ: ರಾಧಿಕಾ

ಮೀ ಟೂ ಚಳವಳಿ ಬಾಲಿವುಡ್‌ನಲ್ಲಿ ಸುನಾಮಿಯನ್ನೇ ಸೃಷ್ಟಿಸಿತ್ತು. ಕೇವಲ ಬಾಲಿವುಡ್ ಮಾತ್ರವಲ್ಲ ಕನ್ನಡ ಸೇರಿದಂತೆ ಇನ್ನೂ ಕೆಲವು ಚಿತ್ರರಂಗಗಳ ಕತ್ತಲ ವ್ಯವಹಾರವನ್ನು ಜಗಜ್ಜಾಹೀರು ಮಾಡಿತ್ತು.

ವಿದೇಶದಿಂದ ಭಾರತಕ್ಕೆ ಬಂದ ಮೀ ಟೂ ಚಳವಳಿಯಿಂದಾಗಿ ಭಾರತದ ಹಲವು ಸ್ತ್ರೀ ಪೀಡಕರ ನಿಜ ಬಣ್ಣ ಬಯಲಾಯಿತು. ಚಳವಳಿ ಯ ದೆಸೆಯಿಂದ ಸಾಕಷ್ಟು ಮಂದಿ ನೊಂದ ಮಹಿಳೆಯರು ಧೈರ್ಯವಾಗಿ ತಮಗಾದ ಅನ್ಯಾಯ ಬಗ್ಗೆ ಮಾತನಾಡಿದರು. ಹಲವರಿಗೆ ನ್ಯಾಯವೂ ದೊರಕಿತೆನ್ನಬಹುದು.

ಮೀ ಟೂ ಚಳವಳಿಯ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಧಿಕಾ ಆಪ್ಟೆ, ' ಮೀ ಟೂ ಚಳವಳಿಯಿಂದ ತಪ್ಪಿಸಿಕೊಂಡು ಈಗಲೂ ಅಂಥಹುವೇ ಕೆಲಸದಲ್ಲಿ ನಿರತರಾಗಿರುವ ಸಾಕಷ್ಟು ಮಂದಿ ಪ್ರಭಾವಿಗಳಿದ್ದಾರೆ' ಎಂದಿದ್ದಾರೆ.

ಸ್ತ್ರೀ ಪೀಡಕರು ಇನ್ನೂ ಇದ್ದಾರೆ: ರಾಧಿಕಾ

ಸ್ತ್ರೀ ಪೀಡಕರು ಇನ್ನೂ ಇದ್ದಾರೆ: ರಾಧಿಕಾ

'ಮೀ ಟೂ ಚಳವಳಿ ಸಾಕಷ್ಟು ಪರಿಣಾಮವನ್ನು ಬೀರಿತು. ಕೆಲವಷ್ಟು ಬದಲಾವಣೆಗಳಿಗೂ ಕಾರಣವಾಯಿತು. ಆದರೆ ಮೀ ಟೂ ಚಳವಳಿಯಿಂದ ಬಚಾವಾಗಿ ಇನ್ನೂ ಅದೇ ಸ್ತ್ರೀಪೀಡಕ ಕಾರ್ಯವನ್ನು ಮುಂದುವರೆಸುತ್ತಿರುವ ಹಲವು ಪ್ರಭಾವಿಗಳು ಚಿತ್ರರಂಗದಲ್ಲಿದ್ದಾರೆ' ಎಂದಿದ್ದಾರೆ ರಾಧಿಕಾ ಆಪ್ಟೆ.

ಸಾಕಷ್ಟು ಮಂದಿ ಪ್ರಭಾವಿಗಳು ತಪ್ಪಿಸಿಕೊಂಡಿದ್ದಾರೆ: ರಾಧಿಕಾ

ಸಾಕಷ್ಟು ಮಂದಿ ಪ್ರಭಾವಿಗಳು ತಪ್ಪಿಸಿಕೊಂಡಿದ್ದಾರೆ: ರಾಧಿಕಾ

ಸಾಕಷ್ಟು ಮಂದಿ ಪ್ರಭಾವಿಗಳು ಇಲ್ಲಿದ್ದಾರೆ. ಅವರ ಬಗ್ಗೆ ಜಗತ್ತಿಗೆ ಗೊತ್ತೇ ಇಲ್ಲ. ಮೀ ಟೂ ಚಳವಳಿ ಪ್ರಭಾವವನ್ನೇನೋ ಬೀರಿತು ಆದರೆ ಪೂರ್ಣ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ ಅದು ಸೋತಿತು. ಮೀಟೂ ಚಳವಳಿ ಇಷ್ಟಕ್ಕೆ ನಿಲ್ಲಬಾರದು. ಪೂರ್ಣ ವ್ಯವಸ್ಥೆಯನ್ನು ಬದಲಾಯಿಸುವತ್ತ ಗಮನ ಹರಿಸಬೇಕು ಎಂದಿದ್ದಾರೆ ರಾಧಿಕಾ.

ವ್ಯವಸ್ಥೆಯನ್ನು ಬದಲಾಯಿಸುವ ಕಾರ್ಯ ಆಗಬೇಕು: ರಾಧಿಕಾ

ವ್ಯವಸ್ಥೆಯನ್ನು ಬದಲಾಯಿಸುವ ಕಾರ್ಯ ಆಗಬೇಕು: ರಾಧಿಕಾ

ಮೀ ಟೂ ಚಳವಳಿಗೆ ಕೆಲವು ಅಮಾಯಕರು ಸಹ ಬಲಿಯಾಗಿದ್ದಾರೆ ಎಂದಿರುವ ರಾಧಿಕಾ, ಮೀ ಟೂ ಆರೋಪಕ್ಕೆ ತುತ್ತಾದ ಹಲವರು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಆದರೆ ಇದರ ಜೊತೆಗೆ ಸಂಬಂಧವೇ ಇಲ್ಲದವರು ಕೆಲವನ್ನು ಕಳೆದುಕೊಂಡು ಮನೆಯಲ್ಲಿದ್ದಾರೆ ಎಂದಿದ್ದಾರೆ.

Recommended Video

ಕೊಹ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಮುಖಂಡ | Filmibeat Kannada
ಮದುವೆ ಬಗ್ಗೆ ರಾಧಿಕಾ ಹೇಳಿಕೆ

ಮದುವೆ ಬಗ್ಗೆ ರಾಧಿಕಾ ಹೇಳಿಕೆ

ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ, ನಾನು ವೀಸಾ ಕಾರಣಕ್ಕಾಗಿ ವಿದೇಶಿಗನನ್ನು ಮದುವೆ ಆಗಿದ್ದೇನೆ ಎಂದು ಇತ್ತೀಚೆಗಷ್ಟೆ ರಾಧಿಕಾ ಹೇಳಿದ್ದರು. ರಾಧಿಕಾ ಆಪ್ಟೆ ಇತ್ತೀಚೆಗೆ ಸಾಕಷ್ಟು ಒಟಿಟಿ ವೆಬ್ ಸರಣಿಗಳು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ನಟನೆಯ 'ಶೂಟ್ ದಿ ಪಿಯಾನೊ ಪ್ಲೇಯರ್' ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

More from Filmibeat

English summary
Actress Radhika Apte said many influential people saved themselves from me too movement. Me too failed to change the system.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X