twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ನ ಹಿರಿಯ ನಿರ್ದೇಶಕ ಬಸು ಚಟರ್ಜಿ ನಿಧನ

    |

    'ಚೋಟಿ ಸಿ ಬಾತ್', 'ರಜಿನಿಗಂಧ' 'ಚಿತ್ಚೋರ್' ಮುಂತಾದ ಚಿತ್ರಗಳಿಂದ ಖ್ಯಾತರಾಗಿದ್ದ ಹಿರಿಯ ಬಾಲಿವುಡ್ ನಿರ್ದೇಶಕ ಬಸು ಚಟರ್ಜಿ ಗುರುವಾರ ನಿಧನರಾದರು. 93 ವಯಸ್ಸಿನ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮುಂಬೈನ ಸಾಂಟಾಕ್ರೂಜ್‌ನಲ್ಲಿನ ನಿವಾಸದಲ್ಲಿ ಅವರು ನಿದ್ರೆಯಲ್ಲಿಯೇ ಮರಣ ಹೊಂದಿದ್ದಾರೆ.

    Recommended Video

    ಸ್ವಂತ ಖರ್ಚಿನಲ್ಲಿ ವಲಸೆ ಕಾರ್ಮಿಕರನ್ನು ರೈಲಿನಲ್ಲಿ ಊರಿಗೆ ಕಳಿಸ್ತಿರೋ ಸೋನು ಸೂದ್ | Sonu sood Helping Migrants

    'ವೃದ್ಧಾಪ್ಯದ ಕಾರಣದಿಂದಾಗಿ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ಸುಖನಿದ್ರೆಯಲ್ಲಿರುವಾಗಲೇ ಶಾಂತಿಯುತವಾಗಿ ನಿಧನರಾದರು. ಅವರ ನಿಧನ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ' ಎಂದು ಭಾರತೀಯ ಸಿನಿಮಾ ಮತ್ತು ಕಿರುತೆರೆ ನಿರ್ದೇಶಕರ ಸಂಸ್ಥೆ ನಿರ್ದೇಶಕ ಅಶೋಕ್ ಪಂಡಿತ್ ತಿಳಿಸಿದ್ದಾರೆ.

    ಹಿಂದಿ ಚಲನಚಿತ್ರ ಸಾಹಿತಿ ಅನ್ವರ್ ಸಾಗರ್ ನಿಧನಹಿಂದಿ ಚಲನಚಿತ್ರ ಸಾಹಿತಿ ಅನ್ವರ್ ಸಾಗರ್ ನಿಧನ

    ಬಸು ಅವರ ಅಂತ್ಯ ಸಂಸ್ಕಾರ ಸಂತಾಕ್ರೂಜ್‌ನಲ್ಲಿನ ಚಿತಾಗಾರಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನೆರವೇರಿತು.

     Manzil, Chhoti Si Baat Filmmaker Basu Chatterjee Is No More

    ಹಿಂದಿ ಮತ್ತು ಬಂಗಾಳಿ ಚಿತ್ರರಂಗಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿರುವ ಬಸು ಚಟರ್ಜಿ, ಹೃಷಿಕೇಶ್ ಮುಖರ್ಜಿ ಮತ್ತು ಬಸು ಭಟ್ಟಾಚಾರ್ಯ ಅವರಂತೆ ಚಿತ್ರರಂಗದಲ್ಲಿ ವಿಭಿನ್ನ ಹಾದಿಯಲ್ಲಿ ಸಿನಿಮಾ ಮಾಡಿದರು. 70ರ ದಶಕದಲ್ಲಿ ಆಕ್ಷನ್ ಚಿತ್ರಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಅವರು ಅಮೋಲ್ ಪಾಲೇಕರ್ ಜತೆಗೂಡಿ ಚೋಟಿ ಸಿ ಬಾತ್, ರಜನಿಗಂಧ, ಚಿತ್ಚೋರ್‌ದಂತಹ ಸಿನಿಮಾಗಳನ್ನು ಮಾಡಿದರು.

    ಸಲ್ಮಾನ್ ಖಾನ್ ಚಿತ್ರಗಳಿಂದ ಹೆಸರಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನಸಲ್ಮಾನ್ ಖಾನ್ ಚಿತ್ರಗಳಿಂದ ಹೆಸರಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

    ಸ್ಟಾರ್ ಕಲಾವಿದರಾದ ಅಮಿತಾಬ್ ಬಚ್ಚನ್ ಅವರನ್ನು 'ಮಂಜಿಲ್', ರಾಜೇಶ್ ಖನ್ನಾ ಅವರನ್ನು 'ಚಕ್ರವ್ಯೂಹ್' ಚಿತ್ರದಲ್ಲಿ, ದೇವ್ ಆನಂದ್ ಅವರನ್ನು 'ಮನ್ ಪಸಂದ್' ಮತ್ತು ಮಿಥುನ್ ಚಕ್ರವರ್ತಿ ಅವರನ್ನು 'ಶೌಕೀನ್' ಹಾಗೂ 'ಪಸಂದ್ ಆಪ್ನಿ ಆಪ್ನಿ' ಚಿತ್ರಗಳಲ್ಲಿ ವಿಭಿನ್ನ ಅವತಾರಗಳಲ್ಲಿ ತೋರಿಸಿದ ಖ್ಯಾತಿ ಅವರದು.

    ಗಮನಿಸಬೇಕಾದ ಸಂಗತಿಯೆಂದರೆ ಬಸು ನಿರ್ದೇಶನದ ಮಂಜಿಲ್, ಚೋಟಿ ಸಿ ಬಾತ್, ರಜನಿಗಂಧ ಮುಂತಾದ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ರಚಿಸಿದ್ದ ಯೋಗೇಶ್ ಗೌರ್ ಕಳೆದ ಶುಕ್ರವಾರವಷ್ಟೇ ನಿಧನರಾಗಿದ್ದರು. ಬಸು ಅವರು ತಮ್ಮ ದೀರ್ಘಕಾಲದ ಸಹೋದ್ಯೋಗಿಯನ್ನು ಹಿಂಬಾಲಿಸಿದ್ದಾರೆ.

    English summary
    Filmmaker Basu Chatterjee (93) known for his Rajnigandha, Chhoti Si Baat and many movies died on Thursday from age related health issues.
    Thursday, June 4, 2020, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X