For Quick Alerts
  ALLOW NOTIFICATIONS  
  For Daily Alerts

  ಹೃದಯಾಘಾತದಿಂದ ಮರಾಠಿ ನಟ ಪ್ರದೀಪ್ ಪಟ್ವರ್ಧನ್ ನಿಧನ

  |

  ಚಿತ್ರರಂಗಕ್ಕೆ ಮತ್ತೊಂದು ಆಘಾತ. ಮರಾಠಿಯ ಖ್ಯಾತ ನಟ ಪ್ರದೀಪ್ ಪಟ್ವರ್ಧನ್ ಹಠಾತ್ ನಿಧನರಾಗಿದ್ದಾರೆ. ಇಂದು(ಆಗಸ್ಟ್ 9) ಮುಂಜಾನೆ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

  ಬಾಕ್ಸ್‌ ಆಫೀಸ್‌ನಲ್ಲಿ ಖಾನ್-ಖಿಲಾಡಿ ಎದುರು-ಬದುರು! ಗೆಲ್ಲೋದು ಯಾರು?ಬಾಕ್ಸ್‌ ಆಫೀಸ್‌ನಲ್ಲಿ ಖಾನ್-ಖಿಲಾಡಿ ಎದುರು-ಬದುರು! ಗೆಲ್ಲೋದು ಯಾರು?

  ಮರಾಠಿ ಚಿತ್ರರಂಗ, ಕಿರುತೆರೆ ಹಾಗೂ ರಾಜಕೀಯ ಗಣ್ಯರು ನಟ ಪ್ರದೀಪ್ ಪಟ್ವರ್ಧನ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಂಬನಿ ಮಿಡಿದು ಟ್ವೀಟ್ ಮಾಡಿದ್ದಾರೆ. "ಮರಾಠಿ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಆಳಿದ ಎವರ್ ಗ್ರೀನ್ ನಟ ಪ್ರದೀಪ್ ಪಟ್ವರ್ಧನ್ ನಿಧನ ಮನಸ್ಸಿಗೆ ನೋವುಂಟು ಮಾಡಿದೆ.ಅವರ ಅಗಲಿಕೆಯಿಂದ ಮರಾಠಿ ಕಲಾಲೋಕ ಒಬ್ಬ ಶ್ರೇಷ್ಠ ಕಲಾವಿದನನ್ನು ಕಳೆದುಕೊಂಡಿದೆ" ಎಂದು ಬರೆದುಕೊಂಡಿದ್ದಾರೆ.

  Recommended Video

  Aryavardha Guruji |ಆರ್ಯವರ್ಧನ್ ಈ ಅವತಾರಕ್ಕೆ ಇವರೇ ಕಾರಣ | Bigg Boss OTT | Filmibeat Kannada

  'ಮರುಚಿ ಮಾವ್ಶಿ' ನಾಟಕದಿಂದ ಪ್ರದೀಪ್ ಪಟ್ವರ್ಧನ್ ಖ್ಯಾತಿ ಗಳಿಸಿದ್ದರು. ಪ್ರದೀಪ್ ಪಟ್ವರ್ಧನ್ ಹಲವು ಮರಾಠಿ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. 'ಫುಲ್ ಚಾರ್ ಹಾಫ್' (1991), 'ಮೀ ಶಿವಾಜಿರಾಜೆ ಭೊಂಸ್ಲೆ ಬೋಲ್ತೆ' (2009), ಮತ್ತು 'ಪೊಲೀಸ್ ಲೈನ್' (2016), 'ಲವು ಕಾ ಲಾತ್', ಜಮ್ಲಾ ಹೋ ಜಮ್ಲಾ, ಪ್ರದೀಪ್ ನಟನೆಯ ಕೆಲ ಪ್ರಮುಖ ಸಿನಿಮಾಗಳು. ಅನುರಾಗ್ ಕಶ್ಯಪ್ ನಿರ್ದೇಶನದ 'ಬಾಂಬೆ ವೆಲ್ವೆಟ್' ಚಿತ್ರದಲ್ಲೂ ನಟಿಸಿದ್ದರು. ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದರು. ಮರಾಠಿ ಕಿರುತೆರೆ ಧಾರಾವಾಹಿಗಳಲ್ಲೂ ಪ್ರದೀಪ್ ಬಣ್ಣ ಹಚ್ಚಿದ್ದರು.

  English summary
  Marathi Actor Pradeep Patwardhan Passes Away At 52 After Suffering From Heart Attack. Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X