ಮರಾಠಿಯ ಹಿರಿಯ ನಟ ರವಿ ಪಟ್ವರ್ಧನ್ ನಿಧನ
ಮರಾಠಿಯ ಹಿರಿಯ ನಟ ರವಿ ಪಟ್ವರ್ಧನ್ ಇಂದು ಬೆಳಗ್ಗೆ (ಡಿಸೆಂಬರ್ 6) ಹೃದಯಾಘಾತದಿಂದ ನಿಧನರಾಗಿದ್ದಾರೆ. 84 ವರ್ಷದ ನಟ ತಮ್ಮ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ. ರವಿ ಪಟ್ವರ್ಧನ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಂಕುಶ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಟ ರವಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮರಾಠಿ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಮಾತ್ರವಲ್ಲದೇ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು.
ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್ ನಟನೆಯ ತೇಜಾಬ್, ಶಾರುಖ್ ಖಾನ್ ಅಭಿನಯದ ರಾಜು ಬನ್ ಗಯಾ ಜೆಂಟಲ್ ಮ್ಯಾನ್ ಸೇರಿದಂತೆ ಹಿಂದಿಯ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಅವರ ಉದ್ದವಾದ ಮೀಸೆಯಿಂದ ಅವರಿಗೆ ಪೊಲೀಸ್ ಮತ್ತು ನ್ಯಾಯಾಧೀಶ ಪಾತ್ರಗಳಲ್ಲೇ ಹೆಚ್ಚಾಗಿ ಸಿಗುತ್ತಿದ್ದವು.

ರವಿ ಪಟ್ವರ್ಧನ್ ಚಲನಚಿತ್ರ ಹಾಗೂ ನಾಟಕಗಳ ಜೊತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದ್ದರು. ರವಿ ಪಟ್ವರ್ಧನ್ ಕೊನೆಯದಾಗಿ ಮರಾಠಿಯ ಅಗಾಬಾಯ್ ಸಾಸುಬಾಯ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಕೊರೊನಾ ಕಾರಣದಿಂದ ಈ ಶೋ ಸ್ಥಗಿತವಾಗಿತ್ತು. ಆದರೆ ಶೋ ಮತ್ತೆ ಪ್ರಾರಂಭವಾದರೂ ಕೊರೊನಾ ನಿಯಮದ ಪ್ರಕಾರ ರವಿ ಅವರು ಶೋನಲ್ಲಿ ಭಾಗಿಯಾಗಲಿಲ್ಲ.


Click it and Unblock the Notifications











