ತಾಯಿಗೆ 2ನೇ ಮದುವೆ ಮಾಡಿಸಿ "ಹ್ಯಾಪಿ ಸೆಕೆಂಡ್ ಇನ್ನಿಂಗ್ಸ್ ಅಮ್ಮ" ಎಂದ ಖ್ಯಾತ ನಟ

ಮದುವೆ ಅಂದ್ರೆ ಕೇವಲ ಎರಡು ದೇಹಗಳ ಬೆಸುಗೆಯಲ್ಲ, ಎರಡು ಮನಸ್ಸುಗಳ ಸಮ್ಮಿಲನ ಎನ್ನುವ ಮಾತಿದೆ. ಮದುವೆ ಎರಡು ಮನಸ್ಸುಗಳನ್ನು ಬೆಸೆಯಬೇಕು. ಎರಡು ಕುಟುಂಬಗಳ ಅಂತಸ್ತು, ಆಸ್ತಿಯನ್ನಲ್ಲ, ಅವರ ಹಿನ್ನೆಲೆ ಇಲ್ಲಿ ಲೆಕ್ಕಕ್ಕೆ ಬರಲ್ಲ. ಇನ್ನು ಇಳಿ ವಯಸ್ಸಿನಲ್ಲಿ 2ನೇ ಮದುವೆ ಆಗುವವರು ಇದ್ದಾರೆ.

ಇವತ್ತಿಗೂ ಭಾರತದಲ್ಲಿ ಕೆಲವರು 2ನೇ ಮದುವೆಯನ್ನು ಸಣ್ಣದಾಗಿ ನೋಡುತ್ತಾರೆ. ಕೆಲವೊಮ್ಮೆ ಇಳಿ ವಯಸ್ಸಿನಲ್ಲಿ ಮದುವೆ ಆಗುವವರನ್ನು ನೋಡುವ ದೃಷ್ಟಿಕೋನವೇ ಬೇರೆ. ಇತ್ತೀಚೆಗೆ ಖ್ಯಾತ ಖಳನಟ ಆಶೀಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ 2ನೇ ಮದುವೆ ಆಗಿದ್ದು ಭಾರೀ ಸುದ್ದಿ ಆಗಿತ್ತು. ಇದೀಗ ಮರಾಠಿ ನಟನೊಬ್ಬ ತಮ್ಮ ತಾಯಿಗೆ ಅದ್ಧೂರಿಯಾಗಿ 2ನೇ ಮದುವೆ ಮಾಡಿಸಿದ್ದಾರೆ.

Siddharth-Chandekar-mother-seema-second-marriage

ಮರಾಠಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ನ ಸಿದ್ದಾರ್ಥ್ ಚಂದೇಕರ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಜೆಂಡಾ', 'ಕ್ಲಾಸ್‌ಮೇಟ್ಸ್', 'ಬಾಲ ಗಂಧರ್ವ' ಹೀಗೆ ಒಂದಷ್ಟು ಮರಾಠಿ ಸಿನಿಮಾದಲ್ಲಿ ನಟಿಸಿರುವ ಸಿದ್ದಾರ್ಥ್, ಬಾಲಿವುಡ್‌ನಲ್ಲೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಇನ್ನು ಮರಾಠಿ ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡು ಹೆಸರು ಮಾಡಿದ್ದಾರೆ. ಇತ್ತೀಚೆಗೆ ನಾಗೇಶ್ ಕುಕುನೂನ್ ನಿರ್ದೇಶನದ 'ಸಿಟಿ ಆಫ್ ಡ್ರೀಮ್ಸ್' ವೆಬ್ ಸೀರಿಸ್‌ನಲ್ಲಿ ಸಿದ್ದಾರ್ಥ್ ನಟಿಸಿದ್ದರು.

ಸದ್ಯ ನಟ ಸಿದ್ಧಾರ್ಥ್ ಸಿನಿಮಾ ಬಿಟ್ಟು ತಮ್ಮ ವೈಯಕ್ತಿಕ ಜೀವನದ ಶುಭಕಾರ್ಯದಿಂದ ಸುದ್ದಿಯಲ್ಲಿದ್ದಾರೆ. ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. ಇತ್ತೀಚೆಗೆ ತಮ್ಮ ತಾಯಿಗೆ 2ನೇ ಮದುವೆ ಮಾಡಿಸಿ ಸಿದ್ದಾರ್ಥ್ ಆದರ್ಶವಾಗಿ ನಿಂತಿದ್ದಾರೆ. ನಿತಿನ್ ಎಂಬುವವರ ಜೊತೆ ಸೀಮಾ ಚಂದೇಕರ್ ಮದುವೆ ನಡೆದಿದೆ. ಈ ಬಗ್ಗೆ ಸಿದ್ದಾರ್ಥ್ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಬರೆದುಕೊಂಡಿದ್ದಾರೆ. ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಸೀಮಾ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸಿದ್ದಾರ್ಥ್‌ ತಮ್ಮ ತಾಯಿ ಸೀಮಾ ಚಂದೇಕರ್ 2ನೇ ಮದುವೆಯ ಫೋಟೊ ಹಂಚಿಕೊಂಡಿದ್ದಾರೆ. "ಅಮ್ಮ, ಹ್ಯಾಪಿ ಸೆಕೆಂಡ್ ಇನ್ನಿಂಗ್ಸ್. ನಿಮ್ಮ ಮಕ್ಕಳ ಜೊತೆ ನಿನ್ನು ಜೀವನ ಇನ್ನು ಬಾಕಿಯಿದೆ. ನಿನಗೆ ಸ್ವತಂತ್ರವಾದ ಸುಂದರ ಪ್ರಪಂಚ ಇದೆ. ಇವತ್ತಿನವರೆಗೆ ನಮಗಾಗಿ ಬಹಳ ತ್ಯಾಗ ಮಾಡಿದ್ದೀಯಾ. ಈಗ ನಿಮ್ಮ ಕುರಿತು, ನಿಮ್ಮ ಹೊಸ ಸಂಗಾತಿ ಬಗ್ಗೆ ಆಲೋಚಿಸಬೇಕಾದ ಸಮಯ ಬಂದಿದೆ. ಈ ವಿಷಯದಲ್ಲಿ ನಿಮ್ ಮಕ್ಕಳು ಯಾವಾಗಲೂ ನಿಮೊಟ್ಟಿಗೆ ಇರುತ್ತೇವೆ"

"ನೀವು ನನ್ನ ಮದುವೆಯನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದ್ದಿರಿ. ಈಗ ನಾನು ಅದನ್ನೇ ಮಾಡಿದ್ದೇನೆ. ನನ್ನ ಜೀವನದಲ್ಲಿ ಹೆಚ್ಚು ಸಂತೋಷಪಟ್ಟ ಮದುವೆ. ಐ ಲವ್ ಯೂ ಅಮ್ಮ. ಹ್ಯಾಪಿ ಮ್ಯಾರೀಡ್ ಲೈಫ್" ಎಂದು ಸಿದ್ದಾರ್ಥ್‌ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಮರಾಠಿ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರು ಕೂಡ ಜೋಡಿಗೆ ಕಂಗ್ರಾಟ್ಸ್ ಹೇಳುತ್ತಿದ್ದಾರೆ.

ನಟ ಸಿದ್ಧಾರ್ಥ್ ಪತ್ನಿ ಮಿತಾಲಿ ಮಾಯೇಕರ್ ಈ ಪೋಸ್ಟ್ ಶೇರ್ ಮಾಡಿ ಅತ್ತೆಯ ಮದುವೆಯ ಮತ್ತಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. "ಹ್ಯಾಪಿ ಮ್ಯಾರೀಡ್ ಲೈಫ್ ಅತ್ತೆ. ನಮ್ಮ ಅತ್ತೆಯ ಮದುವೆ. ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಕ್ಕೆ ನಿಮ್ಮ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ನಿಮ್ಮ ಬೆಂಬಲಕ್ಕೆ ನಿಂತ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ಇಂತಹ ಕುಟುಂಬದ ಭಾಗವಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ."

"ಇಲ್ಲಿಯವರೆಗೂ ನೀವು ನಿಮ್ಮ ಮನಸಾರೆ ನಮಗಾಗಾಗಿ ಸಾಕಷ್ಟು ಮಾಡಿದ್ದೀರಿ. ಆದರೆ ಈಗ ನೀವು ನಿಮಗಾಗಿ ಜೀವಿಸಬೇಕಿದೆ. ಯಾವಾಗಲೂ ಸಂತೋಷದಿಂದಿರಿ. ನಿಮ್ಮ ಜೊತೆ ನಿಮ್ಮ ಮಕ್ಕಳು ನಾವಿದ್ದೀವಿ. ನಿಮಗೂ ಹಾಗೂ ನಿತಿನ್ ಕಾಕುಗೆ ಶುಭವಾಗಲಿ. ಲವ್‌ಯು" ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Siddharth Chandekar got his mother seema married for the second time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X