For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ಲೀಕ್ ಬೆದರಿಕೆ, 15 ಲಕ್ಷ ಬೇಡಿಕೆಯಿಟ್ಟಿದ್ದ ನಟಿ ಅರೆಸ್ಟ್

  |

  ಹಣಕ್ಕಾಗಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮರಾಠಿ ನಟಿ ಸಾರಾ ಶ್ರವನ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. 15 ಲಕ್ಷ ಹಣಕ್ಕಾಗಿ ಬೆದರಿಕೆ ಇಟ್ಟಿದ್ದ ಆರೋಪದಲ್ಲಿ ಕೇಸ್ ದಾಖಲಾಗಿದ್ದು, ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

  ಈ ಪ್ರಕರಣದಲ್ಲಿ ಈಗಾಗಲೇ ಮೂರು ಜನರನ್ನು ಬಂಧಿಸಿದ್ದರು. ಇಬ್ಬರು ಮರಾಠಿ ನಟಿಯರು ಹಾಗೂ ಒಬ್ಬ ಪೊಲೀಸ್ ಅಧಿಕಾರಿಯೂ ಇದ್ದಾರೆ. ಇದೀಗ, ಸಾರಾ ಶ್ರವನ್ ಅರೆಸ್ಟ್ ಆಗಿದ್ದು, ಈ ಪ್ರಕರಣ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ.

  ಬಾಲಿವುಡ್ ಖ್ಯಾತ ನಿರ್ದೇಶಕನ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನುಬಾಲಿವುಡ್ ಖ್ಯಾತ ನಿರ್ದೇಶಕನ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು

  ತನ್ನ ಮೇಲೆ ದೂರು ದಾಖಲಾಗಿದೆ ಎಂದು ತಿಳಿಯುತ್ತಿದ್ದಂತೆ ನಟಿ ಸಾರಾ ದುಬೈಗೆ ಪರಾರಿಯಾಗಿದ್ದರು. ಮುಂಬೈ ಪೊಲೀಸರು ಈ ನಟಿಗಾಗಿ ಶೋಧ ಮಾಡುತ್ತಿದ್ದರು. ಹಲವು ತಿಂಗಳುಗಳ ಬಳಿಕ ಮುಂಬೈಗೆ ನಟಿ ಬಂದ ವಿಷಯ ತಿಳಿದ ಪೊಲೀಸರು, ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


  ಸುಭಾಷ್ ಯಾದವ್ ಎಂಬ ವ್ಯಕ್ತಿ ಬೆದರಿಕೆ ಹಾಗೂ 15 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಎಪ್ರಿಲ್ 20, 2019ರಂದು ಪೊಲೀಸರಿಗೆ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದರು. ಆದರೆ ಸಾರಾ ತಲೆತಪ್ಪಿಸಿಕೊಂಡು ಹೋಗಿದ್ದರು.

  ರೂಮ್ ಬಾಗಿಲು ಮುಚ್ಚಿ ಟ್ಯಾಲೆಂಟ್ ತೋರಿಸು ಎಂದಿದ್ದ ನಿರ್ದೇಶಕ: ರಾಖಿ ಸಾವಂತ್ರೂಮ್ ಬಾಗಿಲು ಮುಚ್ಚಿ ಟ್ಯಾಲೆಂಟ್ ತೋರಿಸು ಎಂದಿದ್ದ ನಿರ್ದೇಶಕ: ರಾಖಿ ಸಾವಂತ್

  ಅಂದ್ಹಾಗೆ, ಸುಭಾಷ್ ಯಾದವ್ ಜೊತೆ ಸಾರಾ ಶ್ರವನ್ ಒಂದು ಸಿನಿಮಾ ಮಾಡಿದ್ದರು. ಈ ಸಿನಿಮಾ ರಿಲೀಸ್ ಬಳಿಕ ಆತನ ಮೇಲೆ ಲೈಗಿಂಕ ಕಿರುಕುಳದ ಆರೋಪ ಮಾಡಿದರು. 'ಈ ಕೇಸ್ ಗೆ ಸಂಬಂಧಿಸಿದ ವಿಡಿಯೋ ನನ್ನ ಬಳಿ ಇದೆ, ದುಡ್ಡು ಕೊಡು, ಇಲ್ಲ ಅಂದ್ರೆ ವಿಡಿಯೋ ಲೀಕ್ ಮಾಡ್ತೀನಿ' ಎಂದು ಬೆದರಿಸಿದ್ದಳು. ಈ ಮಧ್ಯೆ ಆ ವಿಡಿಯೋವನ್ನು ಮತ್ತೊಬ್ಬ ನಟಿ ಲೀಕ್ ಮಾಡಿಬಿಟ್ಟಳು. ನಂತರ ಯಾದವ್ ದೂರು ದಾಖಲಿಸಿದ್ದರು.

  English summary
  Marathi Actress Sara Shrawan arrest in 15 lakh extortion case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X