ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?
ನಿಜ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪಾದನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ.
ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯ ಹೆಸರು ಹೇಳಿಕೊಂಡು ಹಣ ಪೀಕುವವರ ಸಂಖ್ಯೆ ದಿನದಿಂದ ದಿನಕ್ಕೆ ಒಂದು ಕಡೆ ಹೆಚ್ಚಾಗುತ್ತಿದೆ. ಅದೇ ಮತ್ತೊಂದು ಕಡೆ ಮತ್ತೂ ಕೆಲವರು ದುಡ್ಡಿನ ಆಸೆಗೆ ಅಡ್ಡದಾರಿ ಹಿಡಿದು ಶೋಷಣೆಯ ಜಾಲಕ್ಕೆ ಬೀಳುತ್ತಿದ್ದಾರೆ. ವೇಶ್ಯಾವಾಟಿಕೆ ದಂಧೆಯಲ್ಲಿ ತಮ್ಮನ್ನು ತೋಡಗಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆಯೆಲ್ಲಾ ತತ್ವ ಸಿದ್ಧಾಂತಗಳ ಬೋಧನೆ ಮಾಡುವ ಇವರು ರಾತ್ರಿಯಾದರೆ ಪ್ರಭಾವಿ ವ್ಯಕ್ತಿಗಳ ಜೊತೆ ಹಾಸಿಗೆ ಹಂಚಿಕೊಳ್ಳುತ್ತಿದ್ದಾರೆ.

ಇದಕ್ಕೆ ಪುರಾವೆ ಎನ್ನುವಂತೆ ಮೊನ್ನೆ ಮೊನ್ನೆ ಮುಂಬೈನ ಗಿರ್ಗಾಂವ್ ಪ್ರದೇಶದಲ್ಲಿ ಹೈಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಗಿರ್ಗಾಂವ್‌ನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಹೈಟೆಕ್ ದಂಧೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಮುಂಬೈ ಕ್ರೈಮ್ ಬ್ರಾಂಚ್‌ನ ಯುನಿಟ್ ನಂ 4 ದಾಳಿಯನ್ನು ಮಾಡಿದ್ದು ಈ ದಾಳಿಯಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇಬ್ಬರು ಖ್ಯಾತ ನಟಿಯರನ್ನು ರಕ್ಷಿಸಲಾಗಿದೆ.
ಹೀಗೆ ರಕ್ಷಿಸಲಾದ ಇಬ್ಬರಲ್ಲಿ ಒಬ್ಬರು ಮರಾಠಿ ಚಿತ್ರರಂಗದ ಖ್ಯಾತ ಮತ್ತು ಬಹುಬೇಡಿಕೆಯ ನಟಿಯಾಗಿದ್ದರೆ, ಮತ್ತೊಬ್ಬರು ಹಿಂದಿ ಮತ್ತು ಬೆಂಗಾಲಿ ಭಾಷೆಯಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾ ಹೆಸರು ಮಾಡಿರುವ ನಟಿಯಾಗಿದ್ದಾರೆ ಎಂದು ಪೊಲೀಸರು ಈಗಾಗಲೇ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದಾರೆ.
ಇನ್ನು ಈ ದಾಳಿಯ ಸಮಯದಲ್ಲಿ ಚಿತ್ರರಂಗದಲ್ಲಿ ಹಲವಾರು ಸೆಲೆಬ್ರಿಟಿಗಳ ಜೊತೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೂಡ ಬಂಧಿಸಲಾಗಿದೆ. ಈಕೆಯೇ ಈ ದಂಧೆಯ ಹಿಂದಿನ ಕಿಂಗ್‌ಪಿನ್ ಎಂದು ಕೂಡ ಪೊಲೀಸರು ಮಾಹಿತಿಯನ್ನು ಹಂಚಿಕೊಂಡಿದ್ದು ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ.. ಸ್ಟುಡಿಯೋಗಳಲ್ಲಿ.. ಕೆಲಸದ ನೆಪದಲ್ಲಿ ನಟಿಯರಿಗೆ ಹತ್ತಿರವಾಗುತ್ತಿದ್ದ ಈಕೆ ತನ್ನ ಸಂಪರ್ಕಗಳ ದುರ್ಬಳಕೆ ಮಾಡಿಕೊಂಡು ಮುಗ್ದ ನಟಿಯರನ್ನು ಕಾನೂನು ಬಾಹಿರ ಚಟುವಟಿಕೆಗಳ ಕಡೆಗೆ ಪ್ರಚೋದಿಸುತ್ತಿದ್ದಳು ಎಂದು ಹೇಳಿದ್ಧಾರೆ.
ಸದ್ಯ ಬಂಧನಕ್ಕೊಳಗಾದ ಲೇಡಿ ಮೇಕಪ್ ಆರ್ಟಿಸ್ಟ್ ವಿಚಾರಣೆಯನ್ನು ಪೊಲೀಸರು ನಡೆಸಿದ್ದು, ಈ ವಿಚಾರಣೆಯಲ್ಲಿ ಆಘಾತಕಾರಿ ಅಂಶ ಬೆಳಕಿಗೆ ಬಂದಿವೆ. ಆ ಪ್ರಕಾರ ಹಣ, ಹೆಸರು, ಕೀರ್ತಿಯ ಬೆನ್ನತ್ತಿ ಕಣ್ಣು ಕೋರೈಸುವ ಜೀವನ ಶೈಲಿಯ ಕನಸು ಕಾಣುವ ನಾಯಕಿಯರಿಗೆ ಈ ಮೇಕಪ್ ಆರ್ಟಿಸ್ಟ್ ಗಾಳ ಹಾಕುತ್ತಿದ್ದಳು. ಇವರು ಮಾತ್ರವಲ್ಲದೆ ಈ ಅಸಹಾಯಕತೆ ಮತ್ತು ಆಸೆಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಈ ಮೇಕಪ್ ಆರ್ಟಿಸ್ಟ್ ಹಣದಾಸೆ ತೋರಿಸಿ ಕಾನೂನು ಬಾಹಿರ ಡೀಲ್‌ಗಳಿಗೆ ಬಳಸಿಕೊಳ್ಳುತ್ತಿದ್ದಳು. ಯಾವ ಚೌಕಾಶಿಯನ್ನು ಮಾಡದ, ಕಣ್ಮುಚ್ಚಿ ಲಕ್ಷಾಂತರ ಹಣ ಸುರಿಯುವ ಶ್ರೀಮಂತರನ್ನು ಹುಡುಕಿ ಡೀಲ್ ಕುದುರಿಸುತ್ತಿದ್ದಳು.
ಒಂದು ರಾತ್ರಿಗೆ ಎರಡು ಲಕ್ಷ
ಮಾಧ್ಯಮದವರಿಗೆ ಮುಂಬೈ ಕ್ರೈಂ ಬ್ರಾಂಚ್‌ನ ಹಿರಿಯ ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ಶ್ರೀಮಂತರ ಜೊತೆ ಒಂದು ರಾತ್ರಿ ಹಾಸಿಗೆ ಹಂಚಿಕೊಳ್ಳಲು ನಟಿಯರಿಗೆ ಎರಡು ಲಕ್ಷದ ಆಮಿಷವನ್ನು ಮೇಕಪ್ ಆರ್ಟಿಸ್ಟ್ ಒಡ್ಡಿದ್ದಳು. ಡೀಲ್ ಕುದುರಿಸಿದ್ದಳು. ಇನ್ನು ಈ ಎರಡು ಲಕ್ಷ.ಸಂಪೂರ್ಣವಾಗಿ ನಟಿಯರಿಗೆ ನೀಡಲಾಗಿರಲಿಲ್ಲ. ಬದಲಿಗೆ ತನ್ನ ಕಮಿಷನ್ ಹಣವನ್ನು ಜೇಬಿಗೆ ಇಳಿಸಿಕೊಂಡು ಬಾಕಿ ಹಣವನ್ನು ಈಕೆ ಮರಾಠಿಯ ಖ್ಯಾತ ನಟಿ ಮತ್ತು ಇನ್ನೊಬ್ಬ ನಟಿಗೆ ನೀಡಿದ್ದಳು ಎಂದು ಪೊಲೀಸರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಾನವ ಸಾಗಣೆ ತಡೆ ಕಾಯ್ದೆ ಮತ್ತು ರಕ್ಷಣಾ ಕಾರ್ಯಾಚರಣೆಯ ಕಾನೂನು ನಿಯಮಗಳ ಪ್ರಕಾರ, ಈ ದಾಳಿಯಲ್ಲಿ ರಕ್ಷಿಸಲ್ಪಟ್ಟ ನಟಿಯರ ಖಾಸಗಿತನವನ್ನು ಕಾಪಾಡಲು ಮುಂಬೈ ಪೊಲೀಸರು ಅವರ ಅಧಿಕೃತ ಹೆಸರು ಮತ್ತು ಗುರುತನ್ನು ರಹಸ್ಯವಾಗಿಟ್ಟಿದ್ದಾರೆ.
ಆ ನಟಿಯರು ಯಾರು..? ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಕೆಲವರು
ಇನ್ನುಳಿದಂತೆ ಈ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರೂ ನಟಿಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು ಸೋಶಿಯಲ್ ಮೀಡಿಯಾ ತಜ್ಞರು ಈ ಜಾಲದಲ್ಲಿ ಸಿಲುಕಿದ್ದ ಇಬ್ಬರು ನಟಿಯರು ಯಾರಿರಬಹುದು ಎನ್ನುವುದನ್ನು ಪತ್ತೆ ಮಾಡುತ್ತಿದ್ದಾರೆ. ಮರಾಠಿ ಮತ್ತು ಬಾಲಿವುಡ್‌ನ ಪ್ರಸಿದ್ಧ ನಟಿಯರ ಹೆಸರುಗಳನ್ನು ಊಹಿಸಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇದು ಸಾಲದು ಎಂಬಂತೆ ಇನ್ನು ಕೆಲವರು ಯಾವ ಅಧಿಕೃತ ಮಾಹಿತಿ ಇಲ್ಲದಿದ್ದರೂ ನಟಿಯರ ಹೆಸರನ್ನು ಉಲ್ಲೇಖಿಸಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ಧಾರೆ.
ಸದ್ಯ ಬಂಧಿತ ಮಹಿಳಾ ಮೇಕಪ್ ಆರ್ಟಿಸ್ಟ್ ಬಳಿ ಇದ್ದ ಮೊಬೈಲ್ ಕರೆಗಳ ಪಟ್ಟಿ, ಬ್ಯಾಂಕ್ ಬ್ಯಾಲೆನ್ಸ್ ಸ್ಟೇಟ್‌ಮೆಂಟ್‌ಗಳು ಮತ್ತು ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಇನ್ನೂ ಹಲವು ದೊಡ್ಡ ಹೆಸರುಗಳು ಹೊರಬರುವ ಸಾಧ್ಯತೆಗಳಿವೆ. ಮೇಕಪ್ ಆರ್ಟಿಸ್ಟ್ ವಿರುದ್ಧ ಮುಂಬೈ ಪೊಲೀಸರು ಅನೈತಿಕ ಸಂಚಾರ ತಡೆ ಕಾಯ್ದೆ (ITPA) ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.


Click it and Unblock the Notifications