ಬಾಲಿವುಡ್ ನಟ ಆಶಿಶ್ ವಾರಂಗ್ ಇನ್ನಿಲ್ಲ

ಮರಾಠಿ ಹಾಗೂ ಹಿಂದಿ ಚಿತ್ರನಟ ಆಶಿಶ್ ವಾರಂಗ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್ 5ರಂದು ಥಾಣೆಯ ವರ್ತಕ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಾರಂಗ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರ ಅಕಾಲಿಕ ನಿಧನವು ಮರಾಠಿ ಮತ್ತು ಬಾಲಿವುಡ್ ಮನರಂಜನಾ ಕ್ಷೇತ್ರಕ್ಕೆ ಆಘಾತ ತಂದಿದೆ.

ಅಮಿತಾಭ್ ಬಚ್ಚನ್, ಅಮೀರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಕತ್ರಿನಾ ಕೈಫ್, ರಣವೀರ್ ಸಿಂಗ್ ಸೇರಿದಂತೆ ಸ್ಟಾರ್ ನಟ-ನಟಿಯರ ಜೊತೆ ವಾರಂಗ್ ತೆರೆ ಹಂಚಿಕೊಂಡಿದ್ದರು. ಇನ್ನು 'ದೃಶ್ಯಂ' ಚಿತ್ರದಲ್ಲಿ ಪೊಲೀಸ್ ಆಫೀಸರ್ ಹಾಗೂ ರಾಣಿ ಮುಖರ್ಜಿ ನಟನೆಯ 'ಮರ್ದಾನಿ' ಚಿತ್ರದ ಪಾತ್ರ ಅವರಿಗೆ ವಿಶೇಷ ಮೆಚ್ಚುಗೆ ತಂದುಕೊಟ್ಟಿತ್ತು.

Marathi and Hindi Actor Ashish Warang Passes Away at 55 in Thane

ಮರಾಠಿ ಹಾಗೂ ಹಿಂದಿ ಚಿತ್ರರಂಗ ಎರಡರಲ್ಲೂ ತಮ್ಮ ಛಾಪು ಮೂಡಿಸಿದ್ದ ವಾರಂಗ್, ತಮ್ಮ ಪೋಷಕ ಪಾತ್ರಗಳಿಂದ ಗಮನ ಸೆಳೆದಿದ್ದರು. ಇತ್ತೀಚೆಗೆ ಬಂದ 'ಸೂರ್ಯವಂಶಿ', 'ಮರ್ದಾನಿ', 'ಸರ್ಕಸ್', 'ಸಿಂಬಾ' ಮತ್ತು 'ಏಕ್ ವಿಲನ್ ರಿಟರ್ನ್ಸ್‌'ನಂತಹ ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದರು.

ಮರಾಠಿ ಧಾರಾವಾಹಿಗಳು ಹಾಗೂ ಜಾಹೀರಾತುಗಳಲ್ಲಿಯೂ ಕೂಡ ವಾರಂಗ್ ನಟಿಸಿದ್ದರು. ಆದರೆ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆಶಿಶ್ ವಾರಂಗ್ ನಿಧನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಳೆದ ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ. 8 ತಿಂಗಳ ಹಿಂದೆ ಕಾಮಾಲೆಯಿಂದ ಚೇತರಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಉಂಟಾದ ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ.

ಆಪ್ತರು, ಅಭಿಮಾನಿಗಳು ಮತ್ತು ಚಿತ್ರರಂಗದ ಮಂದಿ ವಾರಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮರಾಠಿ ಮನರಂಜನೆ ಕ್ಷೇತ್ರ ಇತ್ತೀಚೆಗೆ ಹಲವಾರು ಹೆಸರಾಂತ ಕಲಾವಿದರನ್ನು ಕಳೆದುಕೊಂಡಿದೆ. ನಟಿ ಜ್ಯೋತಿ ಚಂದೇಕರ್ (ಆಗಸ್ಟ್ 16), ಹಿರಿಯ ನಟ ಅಚ್ಯುತ್ ಪೊದ್ದಾರ್ (ಆಗಸ್ಟ್ 18) ಹಾಗೂ ನಟಿ ಪ್ರಿಯಾ ಮರಾಠೆ (ಆಗಸ್ಟ್ 31) ನಿಧನರಾಗಿದ್ದರು.

ತಾವು ಕೆಲಸ ಮಾಡುವ ಸಿನಿಮಾಗಳಲ್ಲಿ ಸಹ ಕಲಾವಿದರ ಜೊತೆ ಫೋಟೊ, ವೀಡಿಯೋ ಕ್ಲಿಕ್ಕಿಸಿಕೊಂಡು ಆಶೀಶ್ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಅವರು ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದರು ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ.

More from Filmibeat

English summary
Actor Ashish Warang, known for his roles in Drishyam, Mardaani, Sooryavanshi and Marathi serials, passed away at 55 in Thane. The film industry mourns his untimely death.
Read more about: bollywood actor hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X