For Quick Alerts
  ALLOW NOTIFICATIONS  
  For Daily Alerts

  ನಕಲಿ ಪಿಎಚ್.ಡಿ ಪದವಿ ಪಡೆದ ಆರೋಪ: ಸಿನಿಮಾ ನಿರ್ಮಾಪಕಿ ಸ್ವಪ್ನಾ ಅರೆಸ್ಟ್

  |

  ಮರಾಠಿಯ ಖ್ಯಾತ ಸಿನಿಮಾ ನಿರ್ಮಾಪಕಿ ಸ್ವಪ್ನಾ ಪಾಟ್ಕರ್ ನಕಲಿ ಪಿಎಚ್.ಡಿ ಪದವಿ ಪಡೆದ ಆರೋಪದಲ್ಲಿ ಜೈಲು ಸೇರಿದ್ದಾರೆ. ಕ್ಲಿನಿಕಲ್ ಸೈಕೋಲಾಜಿಯಲ್ಲಿ ನಕಲಿ ಪಿಎಚ್.ಡಿ ಪದವಿ ಪಡೆದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವ ಆರೋಪದ ಮೇಲೆ ಸ್ವಪ್ನ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

  39 ವರ್ಷದ ನಿರ್ಮಾಪಕಿ ಸ್ವಪ್ನಾ 2015ರಲ್ಲಿ ಮರಾಠಿಯಲ್ಲಿ ಬಿಡುಗಡೆಯಾಗಿದ್ದ ಶಿವಸೇನೆ ಸಂಸ್ಥಾಪಕ ಬಾಲ್ ಠಾಕ್ರೆ ಅವರ ಬಯೋಪಿಕ್ ಬಾಲ್ಕಡು ಸಿನಿಮಾ ಮಾಡಿ ಹೆಚ್ಚು ಖ್ಯಾತಿಗಳಿಸಿದ್ದರು.

  ಮೇ 26ರಂದು ಮುಂಬೈನ ಬಾಂದ್ರಾ ಪೊಲೀಸರು ಠಾಣೆಯಲ್ಲಿ FIR ದಾಖಲಾದ ಬಳಿಕ ಸ್ವಪ್ನಾರನ್ನು ಬಂಧಿಸಲಾಗಿದೆ. 2016ರಲ್ಲಿ ಬಾಂದ್ರಾದಲ್ಲಿರುವ ಪ್ರಮುಖ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸೈಕೋಲಾಜಿ ಮಾಡುತ್ತಿರುವುದಾಗಿ ಸ್ವಪ್ನಾ ಹೇಳಿದ್ದರು.

  ಸಮಾಜ ಸೇವಕ ಗುರ್ದೀಪ್ ಸಿಂಗ್ ಮೇ 26ರಂದು ಸ್ವಪ್ನಾ ವಿರುದ್ಧ ಬಾಂದ್ರಾ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದರು. ಅನಾಮದೇಯ ವ್ಯಕ್ತಿಯಿಂದ ಈ ಬಗ್ಗೆ ದಾಖಲೆ ಪಡೆದ ನಂತರ ಗುರ್ದೀಪ್ ದೂರು ನೀಡಿದ್ದರು. ದೂರಿನಲ್ಲಿ ನಿರ್ಮಾಪಕಿ ಸ್ವಪ್ನಾ ಛತ್ರಪತಿ ಶಾಹುಜಿ ಮಹಾರಾಜ್ ವಿಶ್ವವಿದ್ಯಾಲಯವು ಸ್ವಪ್ನಾ ಪಾಟ್ಕರ್ ಗೆ ನೀಡಿದ ಪಿಎಚ್.ಡಿ ಪ್ರಮಾಣ ಪತ್ರ ನಕಲಿ ಎಂದು ಹೇಳಿದ್ದರು.

  ಸಿಎಂ ಸಾಹೇಬ್ರು ರಾಜೀನಾಮೆ ಕೊಡಬೇಕಂತೆ-ಮಠ ಡೈರೆಕ್ಟರ್ ರಿಂದ ಬಿಎಸ್ ವೈಗೆ ಫುಲ್ ಕ್ಲಾಸ್ | Guru prasad | Filmibeat Kannada

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ, ನಕಲಿ ಪದವಿಯನ್ನು ಬಳಿಸಿ, ಸ್ವಪ್ನಾ ಆಸ್ಪತ್ರೆಯಲ್ಲಿ ಕೆಲಸ ಪಡೆಯಲು ಯಶಸ್ವಿಯಾಗಿದ್ದು, ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು ಎಂದು ಹೇಳಿದ್ದಾರೆ.

  English summary
  Marathi film producer Swapna Patkar arrested over fake Phd Degree.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X