ರೇಪಿಸ್ಟ್ ಗಳ ವಿರುದ್ಧ ಗುಡುಗಿದ ರಾಣಿ ಮುಖರ್ಜಿ
Recommended Video
ನಟಿ ರಾಣಿ ಮುಖರ್ಜಿ ಕಳೆದ ವರ್ಷ 'ಹಿಚ್ಕಿ'ಯಂತಹ ಒಳ್ಳೆಯ ಸಿನಿಮಾ ನೀಡಿದ್ದರು. ಆ ಸಿನಿಮಾದ ನಂತರ ಇದೀಗ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
2014ರಲ್ಲಿ 'ಮರ್ದಾನಿ' ಸಿನಿಮಾದಲ್ಲಿ ರಾಣಿ ಮುಖರ್ಜಿ ನಟಿಸಿದ್ದರು. ಇದೀಗ ಇದೇ ಹೆಸರಿನಲ್ಲಿ 'ಮರ್ದಾನಿ 2' ಸಿನಿಮಾ ಬರುತ್ತಿದೆ. ಈ ಸಿನಿಮಾದ ಟ್ರೇಲರ್ ಇಂದು (ನವೆಂಬರ್ 14) ಬಿಡುಗಡೆಯಾಗಿದೆ. ಟ್ರೇಲರ್ ರಿಲೀಸ್ ಆಗಿ ಎರಡು ಗಂಟೆಗಳಲ್ಲಿಯೇ 4 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.
ಗನ್ ಹಿಡಿದು ರೇಪಿಸ್ಟ್ ಗಳ ವಿರುದ್ಧ ರಾಣಿ ಮುಖರ್ಜಿ ಗುಡುಗಿದ್ದಾರೆ. ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಣಿ ಕಾಣಿಸಿಕೊಂಡಿದ್ದಾರೆ. ಪೋಲೀಸ್ ಪಾತ್ರಕ್ಕೆ ಬೇಕಾದ ಖಡಕ್ ತನ ಅವರಿಗೆ ಇದೆ. ನೋಟ ಮತ್ತು ನಟನೆ ಎರಡರಲ್ಲಿಯೂ ರಾಣಿ ಮನಸ್ಸು ಗೆಲ್ಲುತ್ತಾರೆ.

ಭಾರತದಲ್ಲಿ ಒಂದು ವರ್ಷಕ್ಕೆ, 18 ವರ್ಷದ ಒಳಗಿನ ಹುಡುಗರ ಅತ್ಯಾಚಾರ ಆರೋಪಗಳ ಪ್ರಕರಣ 2000 ದಾಟಿದೆ. ಇದೇ ಸಿನಿಮಾದ ವಿಷಯವಾಗಿದೆ ಎಂದು ಚಿತ್ರತಂಡ ತಿಳಿಸಿದೆ.. ಅತ್ಯಾಚಾರ ಮಾಡಿದ ಪಾಪಿಗಳನ್ನು ಹಿಡಿದು, ಶಿಕ್ಷೆ ಕೊಡುವ ಕೆಲಸ ರಾಣಿ ಮಾಡುತ್ತಾರೆ. ಸಿನಿಮಾದ ಮೇಕಿಂಗ್ ಇಷ್ಟ ಆಗುತ್ತಿದೆ.
ಗೋಪಿ ಪುತ್ರನ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಆದಿತ್ಯ ಚೋಪ್ರಾ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 13 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.


Click it and Unblock the Notifications











