Just In
Don't Miss!
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- News
ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ
- Lifestyle
ಜನವರಿ 23 ಪರಾಕ್ರಮ ದಿವಸ್: ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು
- Automobiles
ಸನ್ ಫಿಲ್ಮ್ ತೆರವಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ಇಲಾಖೆ
- Sports
ಸಿಎಸ್ಕೆಯಿಂದ ಕೇದಾರ್ ಜಾಧವ್, ಪೀಯೂಷ್ ಚಾವ್ಲಾ, ಮುರಳಿ ವಿಜಯ್ ಹೊರಕ್ಕೆ?
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೂರ್ತಿ ದೇಹ ಕಪ್ಪಾಗಿ ಇದಿಯಾ ಎಂದು ಅಣಕಿಸುತ್ತಿದ್ದರು; ಮಸಾಬಾ ಗುಪ್ತಾ
ಡಿಸೈನರ್ ಮತ್ತು ನಟಿ ಮಸಾಬಾ ಗುಪ್ತಾ ಎದುರಿಸಿದ ವರ್ಣಬೇಧ ನೀತಿಯ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕಪ್ಪಾಗಿದ್ದಿದ್ದಕ್ಕೆ ಶಾಲೆಯಲ್ಲಿ ಮತ್ತು, ಕಾಲೇಜಿನಲ್ಲಿ ಬಾಯಿಗೆ ಬಂದಹಾಗೆ ಮಾತಾಡಿಕೊಳ್ಳುತ್ತಿದ್ದರು ಎಂದು ಮಸಾಬಾ ಬೇಸರ ವ್ಯಕ್ತಪಡಿಸಿದ್ದಾರೆ.
ತಾನು ಎದುರಿಸಿದ ತಾರತಮ್ಯದ ಬಗ್ಗೆ ಮಸಾಬಾ ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಮಸಾಬಾ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಖ್ಯಾತ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ ಅವರ ಪುತ್ರಿ. ಕಪ್ಪಾಗಿದ್ದಾರೆ ಎನ್ನುವ ಕಾರಣಕ್ಕೆ ಸಾಕಷ್ಟು ನೋವು ಎದುರಿಸಬೇಕಾಗಿ ಬಂತು ಹೇಳಿದ್ದಾರೆ.
'ಸ್ನೇಹಿತರು ಮತ್ತು ಪರಿಚಯಸ್ಥರು ಬೆನ್ನ ಹಿಂದೆ ಮಾತನಾಡಿರುವುದು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಯಾವ ಆಟ ಆಡಬೇಕು, ಯಾವ ಬಟ್ಟೆ ಧರಿಸಬೇಕು, ಯಾವುದನ್ನು ಓದಬೇಕು ಅಂತ ನನ್ನ ಸ್ನೇಹಿತೆ ಕೇಳುತ್ತಿದ್ದೆ. ಇದು ವಿಚಿತ್ರ ವಿಲಕ್ಷಣ ಎಂದು ನಾನು ಭಾವಿಸಿದೆ.'
'ನನ್ನ ಚರ್ಮದ ಬಣ್ಣಕ್ಕಿಂತ ಹೆಚ್ಚಾಗಿ ಇದು ನನ್ನ ಹೆತ್ತವರ ಸಂಬಂಧದ ಪ್ರತೀಕ. ಶಾಲೆಯಲ್ಲಿ ಯಾರಿಗೋ ಹುಟ್ಟಿದವಳು ಎಂದು ಅಂತ ನನ್ನನ್ನು ಕರೆದಿದ್ದು ಇನ್ನು ನೆನಪಿದೆ. ಚಿಕ್ಕವಳಿದ್ದಾಗ ಇದರ ಅರ್ಥ ಗೊತ್ತಿರಲಿಲ್ಲ. ಏನಿದು ಅಂತ ತಾಯಿ ಕೇಳಿದೆ. ಅಮ್ಮ ಇದಕ್ಕೂ ಮಿಗಿಲಾದ ಪದ ಕೇಳ ಬೇಕಾಗಿ ಬರಬಹುದು. ಎದುರಿಸಲು ರೆಡಿಯಾಗಿರು ಅಂತ ಹೇಳಿದರು.'
'ಶಾಲೆಯಲ್ಲಿ ನಾನು ಟೆನ್ನಿಸ್ ಆಡುತ್ತಿದ್ದೆ. ಹಾಗಾಗಿ ತರಗತಿಗೆ ತಡವಾಗಿ ಬರುತ್ತಿದೆ. ಇದಕ್ಕೆ ಅವಕಾಶ ಕೊಟ್ಟಿದ್ದರು' ಎಂದಿದ್ದಾರೆ. 'ಕ್ಲಾಸ್ ಬಂದಾಗ ಹುಡುಗರು ನನ್ನ ಬ್ಯಾಗ್ ನಲ್ಲಿದ್ದ ಒಳ ಉಡುಪುಗಳನ್ನು ತೆಗೆದು ಎಲ್ಲೆಡೆ ಬಿಸಾಕುತ್ತಿದ್ದರು, ನಾನು ದಪ್ಪಗಿದ್ದಿದ್ದಕ್ಕಾಗಿ ಬಟ್ಟೆಗಳನ್ನು ನೋಡಿ ನಗುತ್ತಿದ್ದರು. ಪೂರ್ತಿ ದೇಹ ಕಪ್ಪಾಗಿ ಇದಿಯಾ ಎಂದು ಪ್ರಶ್ನಿಸುತ್ತಿದ್ದರು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಜಗತ್ತಿನಲ್ಲಿ ನನ್ನಂತವರು ತುಂಬಾ ಜನರಿದ್ದಾರೆ ಎಂದು ಗೊತ್ತಾಯಿತು. ಮೊದಲ ಬಾರಿಗೆ ಕನ್ನಡಿ ನೋಡುತ್ತಿದ್ದೇನೆ ಅಂತ ಅನಿಸಿತು. ಆಮೇಲೆ ಏಕಾಂಗಿತನ ದೂರವಾಗೋಕೆ ಆರಂಭವಾಯ್ತು. ವರ್ಣಬೇಧದ ಬಗ್ಗೆ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ.