ಪಿವಿಆರ್‌ನಲ್ಲಿ ಈ ಚಿತ್ರದ ಟಿಕೆಟ್ ದರ ಕೇವಲ 75!

Matto Ki Sykil tickets to be sold for 75 rupees at PVR despite postponing national cinema day

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇಂದು ( ಸೆಪ್ಟೆಂಬರ್ 16 ) ರಾಷ್ಟೀಯ ಸಿನಿಮಾ ದಿನ ನಡೆಯಬೇಕಿತ್ತು. ಹೌದು, ಭಾರತದಲ್ಲಿರುವ ಎಲ್ಲಾ ಪಿವಿಆಎರ್, ಐನಾಕ್ಸ್, ಕಾರ್ನಿವಾಲ್, ಗೋಪಾಲನ್ ಹಾಗೂ ಸಿನಿಪೊಲಿಸ್ ಬಹುಪರದೆಗಳಲ್ಲಿ ಇಂದು ಟಿಕೆಟ್‌ಗಳನ್ನು ಕೇವಲ 75 ರೂಪಾಯಿಗಳಿಗೆ ಮಾರಾಟ ಮಾಡಲು ನಿಶ್ಚಯಿಸಿತ್ತು. ಕೊರೊನಾ ವೈರಸ್ ಕಾರಣದಿಂದಾಗಿ ಮುಚ್ಚಿದ್ದ ಚಿತ್ರಮಂದಿರಗಳು ಕೊರೊನಾ ಹಾವಳಿ ತಣ್ಣಗಾದ ನಂತರ ಪುನರಾರಂಭಗೊಂಡಿದ್ದವು ಹಾಗೂ ಈ ಸಂದರ್ಭದಲ್ಲಿ ಮತ್ತೆ ಚಿತ್ರಮಂದಿರಗಳಿಗೆ ಬಂದು ತಮ್ಮ ಕೈಹಿಡಿದ ಸಿನಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಈ ಯೋಜನೆಯನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ರೂಪಿಸಿತ್ತು.

ಆದರೆ, ಬ್ರಹ್ಮಾಸ್ತ್ರ ಸಿನಿಮಾ ಕಳೆದ ವಾರವಷ್ಟೇ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಕಲೆಕ್ಷನ್ ತಗ್ಗಬಾರದು ಎಂಬ ಕಾರಣದಿಂದಾಗಿ ಈ ಸಿನಿಮಾ ದಿನವನ್ನು ಸೆಪ್ಟೆಂಬರ್ 16ರಿಂದ 23ಕ್ಕೆ ಚಿತ್ರ ನಿರ್ಮಾಪಕರ ಕೋರಿಕೆಯ ಮೇರೆಗೆ ಮುಂದೂಡಿತ್ತು. ಹೀಗಾಗಿ ಕೆಲ ಸಿನಿ ಪ್ರೇಕ್ಷಕರಲ್ಲಿ ಈ ದಿಢೀರ್ ನಿರ್ಧಾರ ಬೇಸರವನ್ನೂ ಸಹ ಮೂಡಿಸಿತ್ತು. ಅಷ್ಟೇ ಅಲ್ಲದೇ ಇಂದು ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹತ್ತಾರು ಚಿತ್ರಗಳು ಬಿಡುಗಡೆಯಾಗಿದ್ದವು. ಈ ಚಿತ್ರಗಳಿಗೆ ಸಿನಿಮಾ ದಿನ ಮುಂದೂಡಿಕೆಯಾದದ್ದು ತುಸು ಹೆಚ್ಚಿನ ಕಲೆಕ್ಷನ್ ಮಾಡಿಕೊಳ್ಳುವಲ್ಲಿ ಅನುವು ಮಾಡಿಕೊಟ್ಟಿದೆ.

ಹೀಗಿರುವಾದ ಇಂದು ಬಿಡುಗಡೆಯಾದ ಹಿಂದಿ ಸಿನಿಮಾ 'ಮಟ್ಟೋ ಕಿ ಸೈಕಿಲ್' ಮಾತ್ರ 75 ರೂಪಾಯಿಗಳಿಗೆ ಟಿಕೆಟ್ ದರವನ್ನು ಕೆಲ ಆಯ್ದ ಪಿವಿಆರ್ ಚಿತ್ರಮಂದಿರಗಳಲ್ಲಿ ನಿಗದಿಪಡಿಸಿದೆ. ಹೌದು, ಚಿತ್ರದ ನಟ ಪ್ರಕಾಶ್ ಜಾ ಈ ಮಾಹಿತಿಯನ್ನು ಹಂಚಿಕೊಂಡಿದ್ದು ಈ ಕುರಿತಾಗಿ ಪಿವಿಆರ್ ಜತೆ ಮಾತನಾಡಿದ್ದೆ ಹಾಗೂ ಕೆಲ ಆಯ್ದ ಚಿತ್ರಮಂದಿರಗಳಲ್ಲಿ 75 ರೂಪಾಯಿ ಟಿಕೆಟ್ ದರ ನಿಗದಿಪಡಿಸಲು ಸಮ್ಮತಿಸಿದೆ ಎಂದು ಹೇಳಿಕೆ ನೀಡಿದರು.

ಇನ್ನು ಇಂದು ಮಾತ್ರವಲ್ಲದೇ ಶನಿವಾರ ಹಾಗೂ ಭಾನುವಾರವೂ ಸಹ ಕೆಲ ಆಯ್ದು ಪಿವಿಆರ್‌ಗಳಲ್ಲಿ ಮಟ್ಟೋ ಕಿ ಸೈಕಿಲ್ ಚಿತ್ರದ ಟಿಕೆಟ್‌ಗಳು 75 ರೂಪಾಯಿಗೆ ಲಭ್ಯವಿದೆ.

More from Filmibeat

English summary
Matto Ki Sykil tickets to be sold for 75 rupees at PVR despite postponing national cinema day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X