ಎರಡನೇ ಮದುವೆಯಾದ ಮಾಜಿ ನೀಲಿ ತಾರೆ ಮಿಯಾ ಖಲೀಫಾ
ಮಾಜಿ ನೀಲಿ ತಾರೆ ಮಿಯಾ ಖಲೀಫಾ ಮತ್ತೆ ಸುದ್ದಿಯಲ್ಲಿದ್ದಾರೆ. ಕೊರೊನಾ ಲಾಕ್ ಡೌನ್ ನಡುವೆಯೂ ಮಿಯಾ ಖಲೀಫಾ ಎರಡನೇ ಮದುವೆ ಆಗಿದ್ದಾರೆ. ಲಾಕ್ ಡೌನ್ ಹಿನ್ನಲೆ ಮದುವೆ ಮುಂದೂಡಿರುವ ಬಗ್ಗೆ ಮಾಹಿತಿ ನೀಡಿದ್ದ ಮಿಯಾ ಖಲೀಫಾ, ಈಗ ಲಾಕ್ ಡೌನ್ ನಲ್ಲಿಯೇ ಮದುವೆ ಆಗಿ ಸುದ್ದಿಯಾಗಿದ್ದಾರೆ.
Recommended Video
ಪಾರ್ನ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ನಟಿ ಮಿಯಾ ಖಲೀಫಾ, ವಿಡಿಯೋಗಳು ಟಾಪ್ ಟ್ರೆಂಡಿಂಗ್ ನಲ್ಲಿವೆ. ಕೇವಲ 3 ತಿಂಗಳು ಮಾತ್ರ ಪಾರ್ನ್ ನಟಿಯಾಗಿ ಕಾಣಿಸಿಕೊಂಡರು ಈಕೆಯ ವಿಡಿಯೋಗಳು ಟಾಪ್ ಸರ್ಚಿಂಗ್ ನಲ್ಲಿವೆ. 2018ರಲ್ಲಿ ಅತೀ ಹೆಚ್ಚು ಸರ್ಚ್ ಆದ ಪಾರ್ನ್ ನಟಿ ಮಿಯಾ ಖಲೀಫಾ.
ಈ ನಟಿ ಈಗ ಬಹುಕಾಲದ ಪ್ರಿಯತಮ ರಾಬರ್ಟ್ ಜೊತೆ ಎರಡನೇ ಮದುವೆ ಆಗಿದ್ದಾರೆ. ಮದುವೆ ವಿಚಾರ ಮಿಯಾ ಹಂಚಿಕೊಂಡಿರುವ ವಿಡಿಯೋ ಬಹಿರಂಗ ಪಡಿಸಿದೆ. ಕೊರೊನಾ ವೈರಸ್ ಹಾವಳಿಯ ಪರಿಣಾಮ ಮದುವೆಯನ್ನು ಜೂನ್ ಗೆ ಮುಂದೂಡಿದ್ದರು ಮಿಯಾ. ಆದರೀಗಲೆ ಮದುವೆ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಿಯಾ, "ನನ್ನ ಗಂಡ ರಜೆಯಲ್ಲಿ ನನ್ನ ಜೊತೆ ಹೀಗೆ ಹ್ಯಾಂಗ್ ಔಟ್ ಮಾಡುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಈ ಮೊದಲು ಮಿಯಾ ಸ್ಕೂಲ್ ಬಾಯ್ ಫ್ರೆಂಡ್ ಜೊತೆ 2011ರಲ್ಲಿ ಮದುವೆ ಆಗಿದ್ದರು. ನಾಲ್ಕು ವರ್ಷದ ನಂತರ ಅಂದರೆ 2014ರಲ್ಲಿ ಇಬ್ಬರು ಬೇರೆ ಬೇರೆ ಆಗಿದ್ದಾರೆ. ಆ ನಂತರ ಮಿಯಾ ರಾಬರ್ಟ್ ಜೊತೆ ಪ್ರೀತಿಯ ಬಲೆಯಲ್ಲಿ ಸಿಲುಕ್ಕಿದ್ದರು. ಈಗ ಇಬ್ಬರು ಹಸೆಮಣೆ ಏರಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪಾರ್ನ್ ಲೋಕ ತ್ಯಜಿಸಿರುವ ಮಿಯಾ ಖಲೀಪಾ ಈಗ ಸ್ಪೋರ್ಟ್ಸ್ ಚಾನಲ್ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











