ಅತಿ ಲಾಭದಾಯಕ ಮನೊರಂಜನಾ ಉದ್ಯಮ! 2030ರ ವೇಳೆಗೆ 7.50 ಲಕ್ಷ ಕೋಟಿ!

ಮನೊರಂಜನಾ ಉದ್ಯಮ ಅತಿ ಲಾಭದಾಯಕ ಉದ್ಯಮಗಳಲ್ಲಿ ಪ್ರಮುಖವಾದುದು. ಭಾರತದಲ್ಲಿ ಅಂತೂ ಮನೊರಂಜನಾ ಉದ್ಯಮ ಲಕ್ಷಾಂತರ ಕೋಟಿ ವಹಿವಾಟಿನ ಉದ್ಯಮವಾಗಿದೆ.

ಪ್ರಸ್ತುತ ಪ್ರತಿ ವರ್ಷ ಸುಮಾರು 2-3 ಲಕ್ಷ ಕೋಟಿ ವಹಿವಾಟು ಭಾರತದ ಮನೊರಂಜನಾ ಉದ್ಯಮದಲ್ಲಿ ನಡೆಯುತ್ತಿದೆ. ಸಾವಿರಾರು ಮಂದಿಗೆ ಉದ್ಯೋಗವನ್ನೂ ಸಹ ಈ ಉದ್ಯಮ ನೀಡಿದೆ. ಮನೊರಂಜನಾ ಉದ್ಯಮವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆ ಇದ್ದು, ಈ ಬಗ್ಗೆ ಸ್ವತಃ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

''ಮಾಧ್ಯಮ ಮತ್ತು ಮನರಂಜನೆಯ ಚಿತ್ರಣ ಬದಲಾವಣೆಯ ಸಾಧ್ಯತೆ'' ಕುರಿತಾದ ಸೆಮಿನಾರ್‌ನಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಭಾರತದ ಮನೊರಂಜನಾ ಉದ್ಯಮವು 'ಸೂರ್ಯ ಮುಳುಗದ' ಉದ್ಯಮವಾಗಿದೆ. 2025 ರ ವೇಳೆಗೆ ಈ ಉದ್ಯಮವು ಪ್ರತಿ ವರ್ಷ 4 ಲಕ್ಷ ಕೋಟಿ ವಹಿವಾಟು ನಡೆಸಲಿದೆ. 2030ರ ವೇಳೆಗೆ 7.50 ಲಕ್ಷ ಕೋಟಿ ಉದ್ಯಮವಾಗಿ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ ಎಂದಿದ್ದಾರೆ.

Media And Entertainment Industry Will Generate 7.50 Lakh Crore By 2030: Anurag Thakur

ಒಕ್ಕೂಟ ಸರ್ಕಾರವು ದೇಶದ ಅತಿ ವೇಗವಾಗಿ ಪ್ರಗತಿ ಸಾಧಿಸುವ 12 ಉದ್ಯಮಗಳನ್ನು ಗುರುತಿಸಿದ್ದು, ಅವುಗಳಲ್ಲಿ ಆಡಿಯೋ ಮತ್ತು ವಿಡಿಯೋ ಉದ್ಯಮವೂ ಇದೆ. ಈ ಉದ್ಯಮದ ಪರಿಣಾಮಕಾರಿ ಪ್ರಗತಿಗೆ ಕೇಂದ್ರ ಸರ್ಕಾರವು ಸಹಕಾರ ನೀಡಲಿದೆ ಎಂದಿದ್ದಾರೆ.

ಈ ಉದ್ಯಮದಲ್ಲಿ ಹಲವಾರು ಉದ್ಯೋಗ ಅವಕಾಶಗಳು ಇವೆ. ವಿಡಿಯೋ ಎಡಿಟಿಂಗ್, ಕಲರ್ ಗ್ರೇಡಿಂಗ್, ವಿಷ್ಯುಲ್ ಎಫೆಕ್ಟ್, ಸೌಂಡ್ ಡಿಸೈನ್, ರೋಟೋಸ್ಕೋಪಿಂಗ್, 3ಡಿ ಮಾಡೆಲಿಂಗ್ ಇನ್ನೂ ಅನೇಕ ಉದ್ಯೋಗಾವಕಾಶಗಳು ಇವೆ. ಪ್ರತಿ ಉದ್ಯೋಗಕ್ಕೂ ಅದರದ್ದೇ ಆದ ಕೌಶಲ, ತಂತ್ರಜ್ಞಾನ ಹಾಗೂ ಶಿಕ್ಷಣದ ಅವಶ್ಯಕತೆ ಇದೆ ಹಾಗಾಗಿ ಉದ್ಯಮವು ಉದ್ಯೋಗಾವಕಾಶದ ಜೊತೆಗೆ ಕೌಶಲ್ಯ ಕಲಿಸುವ ಬಗ್ಗೆಯೂ ಆಲೋಚಿಸಬೇಕಿದೆ'' ಎಂದಿದ್ದಾರೆ.

ಭಾರತ ಸರ್ಕಾರ ಸಹ ಖಾಸಗಿಯವರ ಸಹ ಭಾಗಿತ್ವದಲ್ಲಿ ಭಾರತದ ಯುವಕರು ಹೊಸ ತಂತ್ರಜ್ಞಾನದ ಸಂಪೂರ್ಣ ಜ್ಞಾನ ಕಲಿತಿರಬೇಕೆಂಬ ಉದ್ದೇಶದಿಂದ ಕೌಶಲ್ಯ ಕಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗುಣಮಟ್ಟದ ಕಂಟೆಂಟ್ ನಿರ್ಮಾಣ ಮಾಡುವುದು, ಅದು ಸುಲಭವಾಗಿ ಲಭಿಸುವಂತೆ ಮಾಡುವುದು ಹಾಗೂ ಅದಕ್ಕಾಗಿ ಕಾಯುವ ಪ್ರೇಕ್ಷಕರನ್ನು ತಯಾರು ಮಾಡಿದರೆ ಈ ಉದ್ಯಮದಲ್ಲಿ ಪ್ರತಿಯೊಬ್ಬನೂ ಯಶಸ್ವಿಯಾಗುತ್ತಾನೆ ಎಂದಿದ್ದಾರೆ ಸಚಿವ ಅನುರಾಗ್ ಠಾಕೂರ್.

More from Filmibeat

English summary
Central information and broadcast minister Anurag Thakur said Entertainment industry will generate 7.50 lakh crore rs by 2030. 4 lakh crore rs by 2025.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X