For Quick Alerts
  ALLOW NOTIFICATIONS  
  For Daily Alerts

  'ಬೆಂಗಳೂರಿನಲ್ಲಿ ಬೆಡ್ ಸಿಕ್ಕಿಲ್ಲ': ಇಬ್ಬರು ಸಂಬಂಧಿಕರನ್ನು ಕಳೆದುಕೊಂಡ ಮೀರಾ ಚೋಪ್ರಾ

  |

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸೋದರಿ ಸಂಬಂಧಿ ಮೀರಾ ಚೋಪ್ರಾ ತಮ್ಮ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

  ಇಡೀ ದೇಶ ಕೊರೊನಾ ವೈರಸ್ ಅಂತಹ ಸಾಂಕ್ರಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ಅಗತ್ಯ ಬೆಡ್, ಆಕ್ಸಿಜನ್ ಹಾಗೂ ವೈದ್ಯಕೀಯ ಸೌಲಭ್ಯಗಳು ಇಲ್ಲ. ಇದರಿಂದಲೇ ಅನೇಕ ಸಾವು ಸಂಭವಿಸುತ್ತಿದೆ. ನನ್ನ ಇಬ್ಬರು ಸಂಬಂಧಿಕರನ್ನು ಸಹ ಆ ಕಾರಣಕ್ಕಾಗಿಯೇ ಕಳೆದುಕೊಳ್ಳಬೇಕಾಯಿತು ಎಂದು ನಟಿ ಮೀರಾ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  'ಪ್ರಿಯಾಂಕಾ ಚೋಪ್ರಾರಿಂದ ನನಗೆ ಯಾವುದೇ ಸಹಾಯ ಆಗಿಲ್ಲ': ಸಹೋದರಿ ಮೀರಾ'ಪ್ರಿಯಾಂಕಾ ಚೋಪ್ರಾರಿಂದ ನನಗೆ ಯಾವುದೇ ಸಹಾಯ ಆಗಿಲ್ಲ': ಸಹೋದರಿ ಮೀರಾ

  ಬೆಂಗಳೂರಿನಲ್ಲಿ ಐಸಿಯು ಬೆಡ್ ಸಿಕ್ಕಿಲ್ಲ

  ಬೆಂಗಳೂರಿನಲ್ಲಿ ಐಸಿಯು ಬೆಡ್ ಸಿಕ್ಕಿಲ್ಲ

  ''ಕೇವಲ ಹತ್ತು ದಿನದಲ್ಲಿ ನನ್ನ ಇಬ್ಬರು ಸಂಬಂಧಿಕರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಬ್ಬ ಸಹೋದರಿಗೆ ಎರಡು ದಿನಗಳಾದರೂ ಐಸಿಯು ಬೆಡ್ ಸಿಗಲಿಲ್ಲ. ಮತ್ತೊಬ್ಬರು ಆಕ್ಸಿಜನ್ ಮಟ್ಟ ಕುಸಿತಗೊಂಡು ಮೃತಪಟ್ಟಿದ್ದಾರೆ. ಇಬ್ಬರಿಗೂ ವಯಸ್ಸು ಸುಮಾರು 40 ವರ್ಷ ಆಗಿತ್ತು'' ಎಂದು ಮೀರಾ ಚೋಪ್ರಾ ಅಳಲು ತೋಡಿಕೊಂಡಿದ್ದಾರೆ.

  ಭವಿಷ್ಯದ ಭಯ ಕಾಡುತ್ತಿದೆ

  ಭವಿಷ್ಯದ ಭಯ ಕಾಡುತ್ತಿದೆ

  'ನನಗೆ ಇನ್ನು ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ನನ್ನ ಕುಟುಂಬದಲ್ಲಿ ಕಳೆದ 10 ದಿನಗಳಲ್ಲಿ ಎರಡು ಸಾವುಗಳು ಸಂಭವಿಸಿವೆ. ಇದು ನನ್ನ ಭರವಸೆಯನ್ನು ಕಸಿದುಕೊಂಡಿದೆ. ಇದು ತುಂಬಾ ದುಃಖಕರ ಮತ್ತು ಖಿನ್ನತೆ ಉಂಟು ಮಾಡಿದೆ. ಅವರನ್ನು ಉಳಿಸಲು ನಾವು ಏನನ್ನೂ ಮಾಡಲಾಗಲಿಲ್ಲ. ಮುಂದೆ ಏನಾಗಬಹುದು ಎಂಬ ಬಗ್ಗೆ ನಾನು ನಿರಂತರ ಭಯದಲ್ಲಿದ್ದೇನೆ' ಎಂದು ಮೀರಾ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದಾರೆ.

  ಆಮ್ಲಜನಕದ ಕೊರತೆಯಿಂದ ಗರ್ಭಿಣಿ ಸಾವು

  ಆಮ್ಲಜನಕದ ಕೊರತೆಯಿಂದ ಗರ್ಭಿಣಿ ಸಾವು

  'ಗರ್ಭಿಣಿ ಮಹಿಳೆಯರು ಆಮ್ಲಜನಕದ ಕೊರತೆಯಿಂದ ಹೆರಿಗೆಯಾದ ನಂತರ ಸಾಯುತ್ತಿದ್ದಾರೆ. ಈ ನವಜಾತ ಶಿಶುವಿಗೆ ನಾವು ಯಾವ ಜೀವನವನ್ನು ನೀಡುತ್ತಿದ್ದೇವೆ? ನನ್ನ ಟ್ವಿಟ್ಟರ್‌ನಲ್ಲಿ ಭಯಾನಕ ಕಥೆಗಳನ್ನು ಓದುತ್ತಿದ್ದೇನೆ. ಕೆಲವೊಮ್ಮೆ ಟ್ವಿಟ್ಟರ್‌ನಿಂದ ದೂರವಿರುವುದು ಉತ್ತಮ ಎನಿಸುತ್ತದೆ. ಆದರೆ ಹೆಚ್ಚಿನ ಜನರಿಗೆ ಸಂದೇಶವನ್ನು ರವಾನಿಸುವ ಮೂಲಕ ನಾನು ಯಾರಿಗಾದರೂ ಸಹಾಯ ಮಾಡಬಹುದೆಂದು ನಾನು ಭಾವಿಸುತ್ತೇನೆ'' ಎಂದು ನಟಿ ಅಸಹಾಯಕತೆ ತೋಡಿಕೊಂಡಿದ್ದಾರೆ.

  :ನಟಿ ರೇಖಾ‌ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ಮುರಿದು ಬಿದ್ದಿದ್ದು ಯಾಕೆ? | Filmibeat Kannada
  ಪ್ರಿಯಾಂಕಾ ತಂಗಿ ಎಂದು ಅವಕಾಶ ಸಿಕ್ಕಿಲ್ಲ

  ಪ್ರಿಯಾಂಕಾ ತಂಗಿ ಎಂದು ಅವಕಾಶ ಸಿಕ್ಕಿಲ್ಲ

  ಇತ್ತೀಚಿಗಷ್ಟೆ ಜೂಮ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಮೀರಾ ಚೋಪ್ರಾ 'ನಾನು ಬಾಲಿವುಡ್‌ನಲ್ಲಿ ನಟಿಸಲು ಬಂದಾಗ ಮಾತ್ರ ಪ್ರಿಯಾಂಕಾ ಚೋಪ್ರಾಳ ಸಹೋದರಿ ಕೂಡ ಬರುತ್ತಿದ್ದಾಳೆ ಎನ್ನುವ ಸುದ್ದಿ ಕೇಳ್ಪಟ್ಟೆ. ಆದರೆ ಪ್ರಿಯಾಂಕಾ ತಂಗಿ ಎನ್ನುವ ಕಾರಣಕ್ಕೆ ನಿರ್ಮಾಪಕರು ನನ್ನನ್ನು ಯಾರೂ ಆಯ್ಕೆ ಮಾಡಿಕೊಂಡಿಲ್ಲ' ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್ನು ಬಂಗಾರಂ, ಜಾಂಬವಂ, ಮರುಧಾಮಲೈ, ಕಲೈ, ವನಾ, ಜಗನ್ಮೋಹಿನಿ ಮತ್ತು ಕಿಲಾಡಿ ಅಂತಹ ಚಿತ್ರಗಳಲ್ಲಿ ಮೀರಾ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ 'ಸೆಕ್ಷನ್-375' ವೆಬ್-ಸರಣಿ ನಟಿಸಿದರು. ಇದರಲ್ಲಿ ರಿಚಾ ಚಡ್ಡಾ, ಅಕ್ಷಯ್ ಖನ್ನಾ ಮತ್ತು ರಾಹುಲ್ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

  English summary
  Actress Meera Chopra Lost Her Two Cousins Due To lack of medical infrastructure.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X