For Quick Alerts
  ALLOW NOTIFICATIONS  
  For Daily Alerts

  ನಟನ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ; ಗಾಯಕಿ ಮೀಶಾಗೆ 3 ವರ್ಷ ಜೈಲು ಶಿಕ್ಷೆ

  |

  ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಅಲಿ ಜಾಫರ್ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಪಾಕಿಸ್ತಾನದ ಖ್ಯಾತ ಗಾಯಕಿ ಹಾಗೂ ನಟಿ ಮೀಶಾ ಶಫಿ ಅವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

  2018ರಲ್ಲಿ #MeToo ಚಳುವಳಿ ಇಡೀ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅನೇಕ ಸೆಲೆಬ್ರಿಟಿಗಳು ತಾವು ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗಪಡಿಸಿದ್ದರು. ಈ ಆಂದೋಲನದಲ್ಲಿ ಅನೇಕ ಕಲಾವಿದರು, ಗಾಯಕರು, ನಿರ್ಮಾಪಕರು ಆರೋಪಿಗಳಾಗಿದ್ದರು. ಆರೋಪಿಗಳ ಸತ್ಯಾಸತ್ಯತೆಯ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತಿದೆ. ಅದೇ ಸಮಯದಲ್ಲಿ ಗಾಯಕಿ ಮೀಶಾ ಶಫಿ, ನಾಯಕ ಅಲಿ ಜಾಫರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು.

  ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ವೇಶ್ಯಾವಾಟಿಕೆಗೆ ನೂಕುತ್ತಿದ್ದವನ ಬಂಧನ

  ಹಾಡಿನ ರೆಕಾರ್ಡಿಂಗ್ ವೇಳೆ ಸ್ಟುಡಿಯೋದಲ್ಲಿ ಜಾಫರ್ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಮೀಶಾ ಆರೋಪಿಸಿದ್ದರು. ಆದರೆ ಮೀಶಾ ಆರೋಪವನ್ನು ನಟ ಜಾಫರ್ ತಳ್ಳಿಹಾಕಿ, ಮೀಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

  ಮೀಶಾ ವಿರುದ್ಧ ಜಾಫರ್ ನಡೆಸಿದ್ದ ಕಾನೂನಾತ್ಮಕ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಪಾಕ್ ನ್ಯಾಯಾಲಯ, ಮೀಶಾ ಶಫಿ ಆರೋಪ ಆಧಾರ ರಹಿತ ಎಂದು ಹೇಳಿದೆ. ಸುಳ್ಳು ಆರೋಪ ಮಾಡಿ, ನಟನ ಪ್ರತಿಷ್ಠೆಗೆ ಧಕ್ಕೆ ತಂದ ಕಾರಣ ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಫಿ, ಈ ಸಮಾಜದಲ್ಲಿ ಯಾವ ಮಹಿಳೆಯರಿಗೆ ನ್ಯಾಯ ಸಿಕ್ಕಿದೆ ಹೇಳಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಯಶ್ ಬದಲು ಆಗಮಿಸಿದ ಮ್ಯಾನೇಜರ್ | Yash | Filmibeat Kannada

  ಮೀಶಾ ಶಫಿ ಆರೋಪದಲ್ಲಿ ನನ್ನ ಉದ್ಯಮದ ಸಹೋದ್ಯೋಗಿ ಅಲಿ ಜಾಫರ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಒಂದಕ್ಕಿಂತ ಹೆಚ್ಚು ಬಾರಿ ಕಿರುಕುಳ ಅನುಭವಿಸಿದ್ದೀನಿ. ಈ ಘಟನೆ ನಾನು ಚಿಕ್ಕವಳಾಗಿದ್ದಾಗ ನಡೆದಿದ್ದಲ್ಲ. ಅಥವಾ ನಾನು ಉದ್ಯಮಕ್ಕೆ ಪ್ರವೇಶ ಮಾಡಿದಾಗ ನಡೆದಿದ್ದಲ್ಲ. ನಾನು ಸಶಕ್ತಳಾದ ಮೇಲೆ ಆದ ಘಟನೆ. ನಾನು ಇಬ್ಬರು ಮಕ್ಕಳ ತಾಯಿಯಾದ ಮೇಲೆ ನಡೆದ ಘಟನೆ' ಎಂದು ದೀರ್ಘವಾಗಿ ಆರೋಪ ಮಾಡಿದ್ದರು.

  English summary
  Pakistani singer Meesha Shafi faces 3 years of jail for falsely accusing Ali Zafar of sexual harassment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X