ಮದುವೆಯಾದ ವರ್ಷಕ್ಕೆ ಡಿವೋರ್ಸ್ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದ ಬಿಂದಾಸ್ ಚೆಲುವೆ

ಗ್ಲಾಮರ್ ಪ್ರಪಂಚದಲ್ಲಿ ಮಿಂಚಿದವರು ಇದ್ದಕ್ಕಿದಂತೆ ಮರೆಯಾಗಿಬಿಡುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಸಾಕಷ್ಟು ಜನ ನಟಿಯರು ಮದುವೆ ಬಳಿಕ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ. ಕೆಲವರು ಬಹಳ ದಿನಗಳ ಬಳಿಕ ಪೋಷಕ ಪಾತ್ರಗಳಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಇದೆ.

ಇತ್ತೀಚೆಗೆ ಸ್ಟಾರ್ ನಟಿಯರು ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಮದುವೆ ಆಗೋದು, ಆ ಬಳಿಕ ಕೂಡ ಚಿತ್ರರಂಗದಲ್ಲಿ ಮುಂದುವರೆಯೋದು ಕಾಮನ್ ಆಗಿಬಿಟ್ಟಿದೆ. ಕೆಲ ನಟಿಯರು ತಳುಕು ಬಳುಕಿನ ಲೋಕದಿಂದ ದೂರಾಗಿ ಏಕ್‌ದಮ್ ಸನ್ಯಾಸತ್ವ ಸ್ವೀಕರಿಸಿರುವ ಉದಾಹಣೆಗಳಿವೆ. ಬಳಿಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಗ್ಲಾಮರಸ್ ಫೋಟೊ, ವೀಡಿಯೋಗಳನ್ನು ತೆಗೆದುಬಿಟ್ಟಿದ್ದಾರೆ.

Meet bollywood bold actress who turned a nun

ಬಾಲಿವುಡ್ ನಟಿ ಸೋಫಿಯಾ ಹಯಾತ್ ಮದುವೆಯಾದ ವರ್ಷಕ್ಕೆ ಡಿವೋರ್ಸ್ ಪಡೆದಿದ್ದರು. ಬಳಿಕ ದಿಢೀರನೆ ಬಣ್ಣದ ಲೋಕ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದರು. ನಿರೂಪಕಿಯಾಗಿ, ನಟಿಯಾಗಿ, ಗಾಯಕಿಯಾಗಿ ಆಕೆ ಹೆಸರು ಮಾಡಿದ್ದರು. ಬಿಕಿನಿ ತೊಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆಗೂ ಈಕೆಯ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು.

ಜೂನ್ 2016 ರಲ್ಲಿ, ಹಯಾತ್ ಇದ್ದಕ್ಕಿದ್ದಂತೆ ತಾನು ಆಧ್ಯಾತ್ಮಿಕತೆಯನ್ನು ಸ್ವೀಕರಿಸಿದ್ದೇನೆ ಮತ್ತು ಸನ್ಯಾಸಿನಿಯಾಗಿದ್ದೇನೆ ಎಂದು ಘೋಷಿಸಿದ್ದರು. ಗಯಾ ಸೋಫಿಯಾ ಮದರ್ ಎಂದು ತಮ್ಮ ಹೆಸರು ಬದಲಿಸಿಕೊಂಡಿದ್ದರು. ಬಾಲಿವುಡ್ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ಸೋಫಿಯಾ ಹಯಾತ್ ಕಮಾಲ್ ಮಾಡಿದ್ದರು. ಹಿಂದಿ ಬಿಗ್‌ಬಾಸ್ -7 ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. 84ನೇ ದಿನ ಎಲಿಮಿನೇಟ್ ಆಗಿ ಹೊರ ಬಂದಿದ್ದರು.

ಬ್ರಿಟನ್‌ನಲ್ಲಿ ಮುಸ್ಲಿಂ ಕುಟುಂಬದಲ್ಲಿ ಸೋಫಿಯಾ ಜನಿಸಿದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಆಕೆ ಬ್ರಿಟನ್ ತೊರೆದು ಭಾರತಕ್ಕೆ ಬಂದರು. 2008 ರಲ್ಲಿ, 'ಕ್ಯಾಶ್ ಮತ್ತು ಕರಿ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಬಳಿಕ 'ಸಿಕ್ಸ್ ಎಕ್' ಹಾಗೂ 'ಅಕ್ಸರ್- 2' ಚಿತ್ರಗಳಲ್ಲಿ ನಟಿಸಿದರು. 2013 ರಲ್ಲಿ, FHM ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಆಕೆಯ ಹೆಸರು ಇತ್ತು. 2017ರಲ್ಲಿ ರೊಮೇನಿಯನ್ ಉದ್ಯಮಿಯನ್ನು ಮದುವೆಯಾದ ಸೋಫಿಯಾ ಒಂದು ವರ್ಷಕ್ಕೆ ಡಿವೋರ್ಸ್ ಪಡೆದಿದ್ದರು.

Meet bollywood bold actress who turned a nun

ಕೆಲ ದಿನ ಒಂಟಿಯಾಗಿದ್ದ ಸೋಫಿಯಾ ಗ್ಲಾಮರ್ ಜಗತ್ತನ್ನು ತೊರೆದು ಆಧ್ಯಾತ್ಮ ಜಗತ್ತಿಗೆ ಕಾಲಿಟ್ಟರು. ಕ್ಯಾಥೋಲಿಕ್ ಸನ್ಯಾಸಿನಿ ಆಗಿದ್ದರು. ಭೌತಿಕ ಆನಂದಕ್ಕಿಂತ ಆಧ್ಯಾತ್ಮಿಕ ಮಾರ್ಗವು ಉತ್ತಮ" ಎಂದು ಈ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದರು. ಇತ್ತೀಚೆಗೆ ಆಕೆಯ ಇನ್‌ಸ್ಟಾಗ್ರಾಂ ಅಕೌಂಟ್ ಡಿಲೀಟ್ ಆಗಿತ್ತು. ಕೆಲ ವರ್ಷಗಳ ಹಿಂದೆ ಕನ್ನಡದ ಖ್ಯಾತ ನಟಿ ಮಹಾಲಕ್ಷ್ಮಿ ಸನ್ಯಾಸತ್ವ ಸ್ವೀಕರಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಮಹಾಲಕ್ಷ್ಮಿ ಆಧ್ಯಾತ್ಮದ ಕಡೆಗೆ ವಾಲಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಮತ್ತೆ ಆಕೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ನಾನು ಸನ್ಯಾಸಿನಿ ಆಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. "ನನಗೆ ಮದುವೆ ಆಗಿದೆ. ನನಗೆ ಒಳ್ಳೆ ಕುಟುಂಬ ಇದೆ. ನಾನು ಹೌಸ್ ವೈಫ್, ನಾನು ಸನ್ಯಾಸಿನಿಯಲ್ಲ. ನಾನು ಚೆನ್ನೈನ ಚರ್ಚ್‌ನಲ್ಲಿ ಕೆಲಸ ಮಾಡುತ್ತಿರುವುದು ನಿಜ. ಆದರೆ ಸನ್ಯಾಸಿನಿ ಅಲ್ಲ ಎಂದು ಹೇಳಿದ್ದರು.

More from Filmibeat

English summary
Famous actress converted into a catholic nun;
Read more about: bollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X