15 ವರ್ಷ,ನಿರಂತರ ಸೋಲು,ಆದರೂ ಈ ರವಿಚಂದ್ರನ್‌ ನಾಯಕಿಯ ಬಳಿ ಇದೆ 4600 ಕೋಟಿ ರೂಪಾಯಿ ಸಂಪತ್ತು...!

ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕಿಯರ ಆಯಸ್ಸು ಹೆಚ್ಚೆಂದರೆ ಅವರಿಗೆ ಮೂವತ್ತು ವರ್ಷವಾಗುವವರೆಗೆ ಮಾತ್ರ ಅನ್ನುವ ಮಾತು ಇದೆ. ಬೆರಳಣಿಕೆಯಷ್ಟು ನಾಯಕಿಯರನ್ನು ಹೊರತು ಪಡಿಸಿದರೆ ಬಹುತೇಕ ನಾಯಕಿಯರ ವಿಚಾರದಲ್ಲಿ ಈ ಮಾತು ನಿಜ ಎಂದು ಸಾಬೀತು ಆಗಿದೆ. ಇನ್ನೂ ಕೇವಲ ಅವಕಾಶ ಮಾತ್ರ ಅಲ್ಲ ಸಂಭಾವನೆಯಲ್ಲಿ ಕೂಡ ತಾರತಮ್ಯ ಮಾಡಲಾಗುತ್ತೆ. ನಾಯಕರಿಗೆ ಹೆಚ್ಚಿನ ಹಣ ನೀಡುವ ಚಿತ್ರರಂಗ ಅವರನ್ನು ತಲೆ ಮೇಲೆ ಹೊತ್ತು ಮೆರವಣಿಗೆಯನ್ನು ಮಾಡುತ್ತೆ.

ಇಂತಹ ಚಿತ್ರರಂಗದಲ್ಲಿ ಕೆಲಸ ಮಾಡಿ ಕೀರ್ತಿಯ ಶಿಖರಕ್ಕೇರಿ ಆ ನಂತರ ಚಿತ್ರರಂಗದಿಂದ ದೂರವಾದ ನಾಯಕಿಯ ಬಳಿ 4600 ಕೋಟಿ ಆಸ್ತಿ ಇದೆ ಅಂದರೆ ನೀವು ನಂಬ್ತೀರಾ. ನಂಬ್ಲೇಬೇಕು. ಯಾಕೆಂದರೆ ಇದು ನಿಜಾ. ಆ ನಾಯಕಿ ಬೇರೆ ಯಾರು ಅಲ್ಲ ಬದಲಿಗೆ ಜೂಹಿ ಚಾವ್ಲಾ ಅನ್ನುವುದೇ ಈ ಕ್ಷಣದ ವಿಶೇಷ.

Meet India s richest actress valued at Rs 4 600 crore who hasn t had a hit in 15 years


ಹೌದು, 1000 ಕೋಟಿ ರೂಪಾಯಿಗಿಂತ ಹೆಚ್ಚಿನ ನಿವ್ವಳ ಸಂಪತ್ತು ಹೊಂದಿರುವ ಭಾರತೀಯರ ಪಟ್ಟಿಯನ್ನು ಹುರುನ್ ಇಂಡಿಯಾ ಪ್ರತಿ ವರ್ಷ ಬಿಡುಗಡೆ ಮಾಡುತ್ತೆ. ಅದ್ರಂತೆ ಈಗ 2024ರ 1539ಜನರ ಶ್ರೀಮಂತರ ಪಟ್ಟಿಯನ್ನು ಹುರುನ್ ಇಂಡಿಯಾ ಬಿಡುಗಡೆ ಮಾಡಿದೆ. ಇಲ್ಲಿ ಉದ್ಯಮಿಗಳ ಆಸ್ತಿಯಷ್ಟೇ ಅಲ್ಲ ತಾರೆಯರ ಆಸ್ತಿ-ಪಾಸ್ತಿಯ ವಿವರ ಹಂಚಿಕೊಳ್ಳಲಾಗುತ್ತೆ.

ಆ ಪೈಕಿ ಮನರಂಜನೆಯ ಪ್ರಪಂಚದಲ್ಲಿ ₹7,300 ಕೋಟಿ ರೂಪಾಯಿಯನ್ನು ಹೊಂದಿರುವ ಶಾರುಖ್ ಖಾನ್ ನಂಬರ್ ಓನ್ ಶ್ರೀಮಂತ ಹೀರೋ ಎಂಬ ಹೆಗ್ಗಳಿಕೆ ಪಾತ್ರವಾದರೆ. 4600 ಕೋಟಿಯ ಒಡತಿ ಜೂಹಿ ಚಾವ್ಲಾ ನಂಬರ್ ಓನ್ ಶ್ರೀಮಂತ ಮಹಿಳೆಯ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೂಲಕ ಭಾರತದ ಶ್ರೀಮಂತ ನಟಿಯಾಗಿ ಹೊರ ಹೊಮ್ಮಿದ್ದಾರೆ. ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು ಎಂಬ ಕೀರ್ತಿಗೆ ಕೂಡ ಜೂಹಿ ಚಾವ್ಲಾ ಪಾತ್ರವಾಗಿದ್ದಾರೆ.

meet-indias-richest-actress-valued-at-rs-4-600-crore-who-hasnt-had-a-hit-in-15-years

ಅಂದ್ಹಾಗೇ 90ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಮೆರೆದವರು ಜೂಹಿ ಚಾವ್ಲಾ. ಸುಲ್ತಾನತ್ ಎಂಬ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶ ಮಾಡಿದ ಜೂಹಿ ಅವರನ್ನು ಆ ನಂತರ ನಮ್ಮ ಕನ್ನಡದ ಕ್ರೇಜಿ ಸ್ಟಾರ್ ಡಾ.ವಿ.ರವಿಚಂದ್ರನ್, ಪ್ರೇಮ ಲೋಕ ಚಿತ್ರಕ್ಕಾಗಿ ಕನ್ನಡಕ್ಕೆ ಕರೆತಂದರು. ಹನ್ನೊಂದು ಹಾಡುಗಳಿದ್ದ ಪ್ರೇಮಲೋಕದಲ್ಲಿ ನಿಂಬೆ ಹಣ್ಣಿನಂತೆ ಇದ್ದ ಜೂಹಿ ಕನ್ನಡಿಗರ ಹೃದಯ ಗೆದ್ದಿದ್ದರು. ಮಿಂಚಿದರು. ಆ ನಂತರ ಬಾಲಿವುಡ್ ಎಂಬ ಮಾಯಾನಗರಿಯಲ್ಲಿ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಇಂಥಾ ಜೂಹಿ ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಒಂದೇ ಒಂದು ಗೆಲುವು ಕಂಡಿಲ್ಲ. ಇನ್ನೂ ನಾಯಕಿಯಾಗಿ ಚಿತ್ರರಂಗದಲ್ಲಿ ಜೂಹಿ ಚಾವ್ಲಾ ಸಕ್ರಿಯವಾಗಿ ಇದ್ದಿದ್ದು ಕೇವಲ ಹತ್ತು ವರ್ಷ ಮಾತ್ರ. ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ್ಲೇ ಜಯ್ ಮೆಹ್ತಾ ಜೊತೆ ಮದುವೆಯಾದ ಜೂಹಿ 2000ನೇ ಇಸ್ವಿಯ ನಂತರ ಪೋಷಕ ಪಾತ್ರಕ್ಕೆ ಸೀಮಿತವಾಗಿದ್ದರು. ಆದರೂ ಜೂಹಿ ಭಾರತದ ಶ್ರೀಮಂತ ನಾಯಕಿಯ ಪಟ್ಟವನ್ನು ಅಲಂಕರಿಸಿದ್ದಾರೆ. ಐಶ್ವರ್ಯ ರೈ .. ಪ್ರಿಯಾಂಕ ಚೋಪ್ರಾ ..ಆಲಿಯಾ ಭಟ್.. ದೀಪಿಕಾ ಪಡುಕೋಣೆ.. ಕತ್ರಿನಾ ಕೈಫ್ ಸೇರಿ ಅಂದಿನ ಮತ್ತು ಇಂದಿನ ನಾಯಕಯರಿಗೆಲ್ಲ ಸೆಡ್ಡು ಹೊಡೆದಿದ್ದಾರೆ.

meet-indias-richest-actress-valued-at-rs-4-600-crore-who-hasnt-had-a-hit-in-15-years

ಹೀಗಾಗಿ ಸಹಜವಾಗಿ ಇದೆಲ್ಲ ಹೇಗೆ ಸಾಧ್ಯ, ಚಿತ್ರರಂಗದಿಂದ ದೂರ ಇರುವ ನಾಯಕಿ ಬಳಿ 4600 ಕೋಟಿ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಶಾರುಖ್ ಖಾನ್ ಎಂಬ ಉತ್ತರ ಕೇಳಿ ಬರುತ್ತೆ.

ಹೌದು, ಶಾರುಖ್ ಮತ್ತು ಜೂಹಿ ಮೊದಲಿಂದ ಅತ್ಯಾಪ್ತರು. ಇವರ ಸ್ನೇಹಕ್ಕೆ ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸ್‌ ಸಾಕ್ಷಿ. ಶಾರುಖ್ ಜೊತೆ ಸೇರಿ ಕ್ರಿಕೆಟ್‌ನಲ್ಲಿ ಕೂಡ ಹಣ ಹೂಡಿರುವ ಜೂಹಿ ಚಾವ್ಲಾ ಹಿಂದೆ ಇದೇ ಶಾರುಖ್ ಖಾನ್ ಒಡೆತನದಲ್ಲಿದ್ದ ಡ್ರೀಮ್ಸ್ ಅನ್‌ಲಿಮಿಟೆಡ್ ಸಂಸ್ಥೆಯಲ್ಲಿ ಕೂಡ ಹಣ ಹೂಡಿದ್ದರು. ಸದ್ಯ ಶಾರುಖ್ ಖಾನ್ ಅವರ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಕೂಡ ಜೂಹಿ ಹಣ ಹೂಡಿದ್ದಾರೆ. ಹೀಗಾಗಿ ಮುಖಕ್ಕೆ ಬಣ್ಣ ಹಚ್ಚದೆ ಇದ್ದರೂ ನಿರ್ಮಾಪಕಿಯಾಗಿ, ಉದ್ಯಮಿಯಾಗಿ ಜೂಹಿ ಸಕ್ಸಸ್ ಕಂಡಿದ್ದಾರೆ. ಅವರ ಸಕ್ಸಸ್ ಸಿಕ್ರೆಟ್ ಇದೇ ಎಂಬ ಮಾತು ಸದ್ಯಕ್ಕೆ ಹಿಂದಿ ಉದ್ಯಮದಲ್ಲಿ ಕೇಳಿ ಬರುತ್ತಿದೆ.

More from Filmibeat

Read more about: juhi chawla net worth bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X