'ಇವರನ್ನು' ಪ್ರಿಯಾಂಕ ಅನ್ಕೊಂಡ್ರಾ, ಖಂಡಿತ ಅಲ್ವೇ ಅಲ್ಲ.!
ಪ್ರಪಂಚದಲ್ಲಿ ಒಂದೇ ತರ ಹೋಲಿಕೆ ಇರುವವರು ಏಳು ಮಂದಿ ಇರುತ್ತಾರೆ ಅಂತ ಎಲ್ಲರೂ ಹೇಳುತ್ತಾರೆ. ಕಾಮನ್ ಆಗಿ ಹಾಗೆ ಯಾರಾದ್ರೂ ಸಾಮಾನ್ಯ ವ್ಯಕ್ತಿಗಳು ಇದ್ದರೂ ಕೂಡ ಅವರೆಲ್ಲಾ ಜಾಸ್ತಿ ಸುದ್ದಿಗೆ ಬರೋದಿಲ್ಲ. ಆದರೆ ಅದೇ ಸೆಲೆಬ್ರಿಟಿಗಳು ಏನಾದ್ರೂ ಆ ತರ ಇದ್ರೆ ಮಾತ್ರ ಇಡೀ ಊರಿಗೆ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತದೆ.
ಇದಕ್ಕೆ ಉತ್ತಮ ನಿದರ್ಶನ ಅಂದ್ರೆ ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಬಹುಬೇಡಿಕೆಯುಳ್ಳ ನಟಿ ಪ್ರಿಯಾಂಕ ಚೋಪ್ರಾ ಅವರು. ಇದೀಗ ಥೇಟ್ ನಟಿ ಪ್ರಿಯಾಂಕ ಚೋಪ್ರಾ ಅವರನ್ನೇ ಹೋಲುವಂತಹ ಹುಡುಗಿಯೊಬ್ಬಳು ಮಾಧ್ಯಮದ ಕಣ್ಣಿಗೆ ಬಿದ್ದಿದ್ದು, ದೂರದ ಕೆನಡಾದ ವ್ಯಾಂಕೂವರ್ ನಲ್ಲಿ.[ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?]

ಪ್ರಿಯಾಂಕ ಚೋಪ್ರಾ ಅವರ ತದ್ರೂಪಿಯಂತಿರುವ ಈಕೆಯ ಹೆಸರು ನವಪ್ರೀತ್ ಬಂಗಾ. ಸುಮಾರು 21 ವರ್ಷ ವಯಸ್ಸಿನ ಈಕೆ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿರುವ ಭಿನ್ನ-ವಿಭಿನ್ನ ಫೋಟೋಗಳು ಪಕ್ಕಾ ಪಿಗ್ಗಿ ಅವರನ್ನೇ ಹೋಲುತ್ತಿದ್ದು, ಎಲ್ಲರೂ ಒಂದು ಕ್ಷಣ ದಂಗಾಗಿದ್ದಾರೆ.[ನಿಮ್ಗೊತ್ತಾ? ಪಿಗ್ಗಿ ಕೂಡ ಹಲವು ಬಾರಿ ಆತ್ಮಹತ್ಯೆಗೆ ಟ್ರೈ ಮಾಡಿದ್ದರಂತೆ]

ಆರೋಗ್ಯ ಮತ್ತು ಫಿಟ್ನೆಸ್ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ 'ಬ್ರೌನ್ ಗರ್ಲ್ ಲಿಫ್ಟ್ಸ್' ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಮಿಸ್ ಬಂಗಾ ಅವರು ಪಿಗ್ಗಿ ತರಾನೇ ತರ-ತರದ ಬಟ್ಟೆ ಧರಿಸಿ ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದವರು ಇದೀಗ ಸಾಲು-ಸಾಲು ಕಾಮೆಂಟ್ ಮಾಡುತ್ತಿದ್ದಾರೆ.['ಆಸ್ಕರ್ ಪ್ರಶಸ್ತಿ'ಯಲ್ಲಿ ಮಿಂಚಲು ಪಿಗ್ಗಿ ಮಾಡಿದ ಖರ್ಚೆಷ್ಟು?]

ಕೆಲವರು 'ಪ್ರಿಯಾಂಕ ತರಾನೇ ಕಾಣಿಸುತ್ತಿದ್ದೀರಾ' ಅಂದ್ರೆ ಇನ್ನೂ ಕೆಲವರು 'ಪ್ರಿಯಾಂಕ ಕಾರ್ಬನ್ ಕಾಪಿ' ಎಂಬಿತ್ಯಾದಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಇದಕ್ಕೆ ತಕ್ಕಂತೆ ಮಿಸ್ ಬಾಂಗಾ ಅವರು 'ಬಾಜೀರಾಬ್ ಮಸ್ತಾನಿ' ಚಿತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಕಾಶೀಭಾಯಿಯಾಗಿ ಹಾಕಿದ್ದ ಕಾಸ್ಟ್ಯೂಮ್ ಹಾಕಿ ಫೋಟೋ ಕ್ಲಿಕ್ಕಿಸಿಕೊಂಡು ಪಿಗ್ಗಿ ಅಭಿಮಾನಿಗಳಿಗೆ ಮತ್ತಷ್ಟು ಕನ್ ಫ್ಯೂಸ್ ಆಗುವಂತೆ ಮಾಡಿದ್ದಾರೆ.


Click it and Unblock the Notifications