For Quick Alerts
    ALLOW NOTIFICATIONS  
    For Daily Alerts

    ರಣ್ವೀರ್ ಸಿಂಗ್ ವಿಚಿತ್ರ ಕಾಸ್ಟೂಮ್ ಗಳ ಡಿಸೈನರ್ ಈಕೆಯೇ

    |

    ಬಾಲಿವುಡ್ ನ ಬಾಜಿರಾವ್ ರಣ್ವೀರ್ ಸಿಂಗ್ ತಮ್ಮ ಪಾತ್ರಗಳ ಮೂಲಕ ಮಾತ್ರವಲ್ಲದೆ, ತಮ್ಮ ಕಾಸ್ಟೂಮ್ ಮೂಲಕವೂ ಗಮನ ಸೆಳೆಯುತ್ತಾರೆ. ರಣ್ವೀರ್ ಧರಿಸುವ ಡಿಫರೆಂಟ್ ಬಟ್ಟೆಗಳು ಆಕರ್ಷಣೆಗೆ ಕಾರಣ ಆಗುತ್ತವೆ.

    ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎಲ್ಲರೂ ರಣ್ವೀರ್ ಕಡೆ ನೋಡುತ್ತಾರೆ. ಕಾರಣ ಅವರ ಡಿಫರೆಂಟ್ ಡ್ರೆಸ್. ಎಲ್ಲರಿಗಿಂತ ವಿಭಿನ್ನವಾಗಿ ಕಾಣುವ ಅವರು ಕಾರ್ಯಕ್ರಮದ ಕೇಂದ್ರ ಬಿಂದುವಾಗುತ್ತಾರೆ. ಸೋಷಿಯಲ್ ಮೀಡಿಯಾದಲ್ಲಂತು ರಣ್ವೀರ್ ಧರಿಸುವ ಬಟ್ಟೆಗಳು ಎಷ್ಟೋ ಬಾರಿ ಟ್ರೋಲ್ ಆಗಿವೆ.

    ಉಪೇಂದ್ರ ಸ್ಟೈಲ್ ನಲ್ಲಿ 'ಗಲ್ಲಿ ಬಾಯ್' ರಣ್ವೀರ್ ಸಿಂಗ್

    ರಣ್ವೀರ್ ಟ್ರೆಂಡ್ ಹಿಂದೆ ಓಡುವುದಿಲ್ಲ, ಎಲ್ಲಿಯೂ ನೋಡಿರದ, ಯಾರು ಊಹೆ ಮಾಡಿದರದ ಬಟ್ಟೆಯನ್ನು ರಣ್ವೀರ್ ಹಾಕಿಕೊಳ್ಳುತ್ತಾರೆ. ರಣ್ವೀರ್ ಸಿಂಗ್ ಸ್ಟೈಲ್ ನೋಡಿ ಅನೇಕರು ತಲೆ ಕೆಡಿಸಿಕೊಳ್ಳುತ್ತಾರೆ. ಈ ರೀತಿಯ ಬಟ್ಟೆಯನ್ನು ಯಾರು ಡಿಸೈನ್ ಮಾಡಿದ್ದು ಎನ್ನುತ್ತಾರೆ. ಅಂದಹಾಗೆ, ಸ್ಟೈಲ್ ಹಿಂದೆ ಇರುವವರು, ಅವರ ಕಾಸ್ಟೂಮ್ ಡಿಸೈನ್ ಮಾಡುವವರು ನಿಟಶಾ ಗೌರವ್.

    ಡಿಸೈನರ್ ನಿಟಶಾ ಗೌರವ್

    ಡಿಸೈನರ್ ನಿಟಶಾ ಗೌರವ್

    ರಣ್ವೀರ್ ಸಿಂಗ್ ಕಾಸ್ಟೂಮ್ ಡಿಸೈನ್ ಮಾಡುವುದು ಡಿಸೈನರ್ ನಿಟಶಾ ಗೌರವ್. ತುಂಬ ವರ್ಷಗಳಿಂದ ಇವರೇ ರಣ್ವೀರ್ ಸ್ಟೈಲ್ ಪ್ಲಾನ್ ಮಾಡುತ್ತಿದ್ದಾರೆ. ನ್ಯೂಯಾರ್ಕ್ ಹಾಗೂ ಲಂಡನ್ ನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಬಾಲಿವುಡ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ರಣ್ವೀರ್ ಸಿನಿಮಾಗಳಿಗೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಿಗೆ ಹಾಗೂ ದಿನನಿತ್ಯದ ಕಾಸ್ಟೂಮ್ ಗಳನ್ನು ಇವರೇ ನೋಡಿಕೊಳ್ಳುತ್ತಾರೆ.

    ಫಿಲ್ಮ್ ಫೇರ್ ಮೂಲಕ ಪರಿಚಯ

    ಫಿಲ್ಮ್ ಫೇರ್ ಮೂಲಕ ಪರಿಚಯ

    ನಿಟಶಾ ಗೌರವ್ ಮೊದಲು ರಣ್ವೀರ್ ಸಿಂಗ್ ರನ್ನು ಭೇಟಿ ಮಾಡಿದ್ದು, ಫಿಲ್ಮ್ ಫೇರ್ ಕಾರ್ಯಕ್ರಮದಿಂದ. ಆಗಿನ್ನು ರಣ್ವೀರ್ ಒಂದೇ ಸಿನಿಮಾ ಮಾಡಿದ್ದರು. 'ಬ್ಯಾಡ್ ಬಜಾ ಭಾರತ್' ಸಿನಿಮಾದ ಫಿಲ್ಮ್ ಫೇರ್ ಗಾಗಿ ಪ್ರೊಮೊ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ನಿಟಶಾ ಗೌರವ್ ಪರಿಚಯ ರಣ್ವೀರ್ ಸಿಂಗ್ ಗೆ ಆಯ್ತು. ಸರಳ ಬಟ್ಟೆಯಲ್ಲಿಯೇ ಪ್ರೊಮೋ ತಯಾರಾಯ್ತು. ಇದರ ನಂತರ ಮತ್ತೊಂದು ಫೋಟೋ ಶೂಟ್ ಮಾಡಿಕೊಡಿ ಎಂದು ರಣ್ವೀರ್ ಕೇಳಿದ್ದರು.

    ರಣ್ವೀರ್ ವಿಚಿತ್ರ ಕಾಸ್ಟೂಮ್ ನೋಡಿ ಭಯದಿಂದ ಕಣ್ಣೀರು ಹಾಕಿದ ಮಗು

    ರಣ್ವೀರ್ ಸ್ಟೈಲ್ ಗೆ ಕಾರಣ ನಿಟಶಾ ಗೌರವ್

    ರಣ್ವೀರ್ ಸ್ಟೈಲ್ ಗೆ ಕಾರಣ ನಿಟಶಾ ಗೌರವ್

    ರಣ್ವೀರ್ ಗಾಗಿ ನಿಟಶಾ ಗೌರವ್ ಕಾಸ್ಟೂಮ್ ಡಿಸೈನ್ ಮಾಡಿ, ಫೋಟೋ ಶೂಟ್ ಮಾಡಿಸಿದರು. ಅಲ್ಲಿಂದ ನಿಟಶಾ ಗೌರವ್ ಹಾಗೂ ರಣ್ವೀರ್ ಸ್ನೇಹ ಶುರುವಾಗಿದೆ. ಇಂದಿನ ವರೆಗೆ ಇವರೇ ರಣ್ವೀರ್ ಗೆ ಕಾಸ್ಟೂಮ್ ಡಿಸೈನ್ ಮಾಡುತ್ತಾರೆ. ನಿಟಶಾ ಕಾಸ್ಟೂಮ್ ರಣ್ವೀರ್ ಗೆ ಸಮಾದಾನ ಅನಿಸುತ್ತದೆ. ತಮ್ಮ ಸ್ಟೈಲ್ ಬಗ್ಗೆ ಬರುವ ಒಳ್ಳೆಯ ಪ್ರತಿಕ್ರಿಯೆಯನ್ನು ನಿಟಶಾ ಗೌರವ್ ಗೆ ರಣ್ವೀರ್ ನೀಡುತ್ತಾರೆ.

    ತನಗೆ ಖುಷಿ ನೀಡುವ ಬಟ್ಟೆ ಧರಿಸುತ್ತಾರೆ ರಣ್ವೀರ್

    ತನಗೆ ಖುಷಿ ನೀಡುವ ಬಟ್ಟೆ ಧರಿಸುತ್ತಾರೆ ರಣ್ವೀರ್

    ಬಣ್ಣ ಬಣ್ಣದ ಬಟ್ಟೆ ಧರಿಸುವುದು ಅಂದರೆ, ರಣ್ವೀರ್ ಗೆ ಬಹಳ ಇಷ್ಟವಂತೆ. ನಾನು ಹಾಕುವ ಬಟ್ಟೆ ಡಿಫರೆಂಟ್ ಆಗಿರಬೇಕು, ಔಟ್ ಆಫ್ ಬಾಕ್ಸ್ ಇರಬೇಕು ಎಂದು ಇಷ್ಟ ಪಡುತ್ತಾರಂತೆ. ನಾನು ಈ ಬಟ್ಟೆ ಹಾಕಿದರೆ, ಯಾರಾದ್ರೂ, ಏನಾದ್ರೂ ಅಂದುಕೊಳ್ಳುತ್ತಾರೆ ಎನ್ನುವ ಬಗ್ಗೆ ಯೋಚನೆ ಮಾಡುವುದಿಲ್ಲವಂತೆ. ತಮಗೆ ಖುಷಿ ಎನಿಸುವ ಬಟ್ಟೆಯನ್ನು ಧರಿಸುತ್ತಾರಂತೆ

    English summary
    Meet Ranveer Singh costume designer Nitasha Gaurav.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
    X