14 ವರ್ಷ, 09 ಫ್ಲಾಪ್ , ಆದರೂ 15 ಕೋಟಿ ಸಂಭಾವನೆ ಪಡೆಯುವ ಈ ನಾಯಕಿ ಯಾರು..?

ಸತತ ಪರಿಶ್ರಮ ಮತ್ತು ಕೆಲಸದ ಮೇಲೇ ಪ್ರೀತಿ ಇದ್ದರೆ ಗೆಲುವು ಅನ್ನೋದು ಕಾಲು ಮುರ್ಕೊಂಡು ಕೂತಿರುತ್ತೆ. ಇದಕ್ಕೆ ಶ್ರದ್ಧಾ ಕಪೂರ್ ಅತ್ಯುತ್ತಮ ಉದಾಹರಣೆ. ಹೌದು, ಶಕ್ತಿ ಕಪೂರ್ ಮಗಳಾದರೂ ತಮ್ಮದೇ ಛಾಪು ಮೂಡಿಸಿದವರು ಶ್ರದ್ಧಾ ಕಪೂರ್. ನಿಜಾ .. ಸ್ಟಾರ್ ಗಳ ಮಕ್ಕಳಿಗೆ ಚಿತ್ರರಂಗದ ಬಾಗಿಲು ಮೊದಲೇ ತೆರೆದಿರುತ್ತೆ. ಅವಕಾಶ ಸುಲಭವಾಗಿಯೂ ಸಿಗುತ್ತೆ. ಶ್ರದ್ಧಾ ವಿಚಾರದಲ್ಲಿ ಆಗಿದ್ದು ಇದೆ. ಆದರೆ, ಶ್ರದ್ಧಾಗೆ ಅವಕಾಶ ಸುಲಭಕ್ಕೆ ಸಿಕ್ಕಿತಾದರೂ ಗೆಲುವು ಸಿಗಲಿಲ್ಲ.

ಹೌದು, ಅಸಲಿಗೆ ಆಶಿಕಿ-02 ಶ್ರದ್ಧಾ ಕಪೂರ್ ಅಭಿನಯದ ಮೊದಲ ಸಿನಿಮಾ ಎಂದು ಬಹುತೇಕರು ಅಂದುಕೊಂಡಿದ್ಧಾರೆ. ಆದರೆ, ಆಶಿಕಿ 02 ಚಿತ್ರಕ್ಕೂ ಮುನ್ನ ಶ್ರದ್ಧಾ ಕಪೂರ್ ತೀನ್ ಪತ್ತಿ ಎಂಬ ಚಿತ್ರದಲ್ಲಿ ಆಕ್ಟ್ ಮಾಡಿದ್ದರು. ಮೊದಲ ಚಿತ್ರದಲ್ಲಿಯೇ ಅಮಿತಾಬ್ ಬಚ್ಚನ್, ಆರ್ ಮಾಧವನ್ ಅವರಂತಹ ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದರು. ಆದರೆ, ಚಿತ್ರ ಗೆಲ್ಲಲಿಲ್ಲ. ಶ್ರದ್ಧಾಗೆ ಆ ನಂತರ ಅವಕಾಶವೂ ಸಿಗಲಿಲ್ಲ. ತೀನ್ ಪತ್ತಿ ಚಿತ್ರದ ನಂತರ ಮೂರು ವರ್ಷ ಖಾಲಿ ಕುಳಿತುಕೊಂಡಿದ್ದರು ಶ್ರದ್ಧಾ ಕಪೂರ್. ಆಗ ಸಿಕ್ಕಿದ್ದೇ ಆಶಿಕಿ -02.

meet-the-actress-who-despite-9-flops-in-14-years-commands-15-crore-per-film-and-has-a-120-crore-net

ಆಶಿಕಿ-02 ಚಿತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದು, ಆ ನಂತರ.. ಏಕ್ ವಿಲನ್, ಹೈದರ್, ಎಬಿಸಿಡಿ 2, ಚೀಚೋರೆ, ಭಾಘಿ, ಸ್ತ್ರೀ, ಹೀಗೆ ಒಂದಾದ ಮೇಲೊಂದು ಸಿನಿಮಾಗಳ ಮೂಲಕ ತಮ್ಮ ಅಭಿನಯ ಸಾಮರ್ಥ್ಯವನ್ನು ಸಾಬೀತು ಮಾಡಿದ ಶ್ರದ್ಧಾ ಕಪೂರ್, ಕೇವಲ ಗೆಲುವನ್ನಷ್ಟೇ ಅಲ್ಲ ಸೋಲನ್ನೂ ನೋಡಿದ್ದಾರೆ. ಹಸೀನಾ ಪಾರ್ಕರ್, ಓಕೆ ಜಾನು, ಬತ್ತಿ ಗುಲ್ ಮೀಟರ್ ಚಾಲು, ಹೀಗೆ ಒಂಬತ್ತು ಫ್ಲಾಪ್ ಸಿನಿಮಾಗಳನ್ನೂ ಕೊಟ್ಟಿದ್ದಾರೆ. ಆದರೂ ಶ್ರದ್ಧಾ ಕಪೂರ್ ಬೇಡಿಕೆ ಕುಗ್ಗಿಲ್ಲ. ಬದಲಿಗೆ ಸ್ತ್ರೀ 2 ಚಿತ್ರದ ಅದ್ವೀತಿಯ ಯಶಸ್ಸಿನ ನಂತರ ಶ್ರದ್ಧಾ ಬೇಡಿಕೆ ಇನ್ನೂ ಹೆಚ್ಚಾಗಿದೆ.

ಇಂಥಾ ಶ್ರದ್ಧಾ ಕಪೂರ್ ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು ಅನ್ನುವ ಕುತೂಹಲ ಸದ್ಯಕ್ಕೆ ಅನೇಕರಲ್ಲಿದೆ. ಇದಕ್ಕೆ ಉತ್ತರ ಎನ್ನುವಂತೆ ಶ್ರದ್ಧಾ ಕಪೂರ್ ಚಿತ್ರವೊಂದಕ್ಕೆ 15 ಕೋಟಿಯನ್ನು ಪಡೆಯುತ್ತಾರೆ ಎಂಬ ಮಾತು ಸದ್ಯಕ್ಕೆ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇನ್ನೂ ಶ್ರದ್ಧಾ ಕಪೂರ್ ಮುಂಬೈನಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಸಮುದ್ರದತ್ತ ಮುಖ ಮಾಡಿರುವ ಮನೆ ಯಾವ ಅರಮನೆಕ್ಕಿಂತ ಕಡಿಮೆ ಇಲ್ಲ. ಇದಕ್ಕೆ ಶ್ರದ್ಧಾ ಕಪೂರ್ ಅರವತ್ತು ಕೋಟಿಯನ್ನು ಖರ್ಚು ಮಾಡಿದ್ಧಾರೆ.

meet-the-actress-who-despite-9-flops-in-14-years-commands-15-crore-per-film-and-has-a-120-crore-net

ಇದಿಷ್ಟೇ ಅಲ್ಲದೇ ಶ್ರದ್ಧಾ ಕಪೂರ್ 120 ಕೋಟಿ ಆಸ್ತಿಯ ಒಡತಿಯೂ ಹೌದು. ಇವೆಲ್ಲವನ್ನೂ ಶ್ರದ್ಧಾ ಅವರ ತಂದೆ ಶಕ್ತಿ ಕಪೂರ್ ಅವರಿಂದ ಬಳುವಳಿಯಾಗಿ ಪಡೆದಿದ್ದಲ್ಲ. ಬದಲಿಗೆ ಖುದ್ದು ಬೆವರು ಸುರಿಸಿ ಇಷ್ಟೊಂದು ಹಣವನ್ನು ಶ್ರದ್ಧಾ ಕಪೂರ್ ಗಳಿಸಿದ್ಧಾರೆ.

ಇನ್ನೂ ಶ್ರದ್ಧಾ ಕಪೂರ್ ಜನಪ್ರಿಯತೆಗೆ ಮೊನ್ನೆಯಷ್ಟೇ ಇನ್ನೊಂದು ಸಾಕ್ಷಿ ಸಿಕ್ಕಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೇ ಶ್ರದ್ಧಾ ಕಪೂರ್ ಹಿಂದಿಕ್ಕಿದ್ಧಾರೆ. ಪ್ರಿಯಾಂಕ ಚೋಪ್ರಾ ಒಬ್ಬರನ್ನೂ ಹಿಂದಿಕ್ಕಿದರೆ ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತದ ನಟಿ ಎನ್ನುವ ಹೆಗ್ಗಳಿಕೆಗೆ ಕೂಡ ಶ್ರದ್ಧಾ ಕಪೂರ್ ಪಾತ್ರವಾಗಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X