ಮನೆಯಲ್ಲಿ ಕಟ್ಟುನಿಟ್ಟಿನ ವಾತಾವರಣ ಇದ್ದರೂ ಅನ್ಯ ಧರ್ಮದ ಯುವಕನನ್ನು ಮದುವೆಯಾದ ನಟಿ..!
ಶ್ರೀಮಂತರು, ಬಡವರು, ವಿದ್ಯಾವಂತರು, ಅವಿದ್ಯಾವಂತರು, ಯಾರೇ ಆಗಲಿ ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು, ಬದುಕಬೇಕು ಎಂದು ಆಶಿಸುತ್ತಾರೆ. ತಾವು ಅನುಭವಿಸಿದ ಕಷ್ಟಗಳನ್ನು ಅವರು ಅನುಭವಿಸಬಾರದು ಎಂದು ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ,ವಿದ್ಯಾಭ್ಯಾಸಕ್ಕೆ ಶ್ರಮ ಹಾಕುತ್ತಾರೆ.
ಇನ್ನೂ ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿ ಕೂಡ ಪೋಷಕರಲ್ಲಿ ಆತಂಕ ಇದ್ದೇ ಇರುತ್ತೆ. ಅದರಲ್ಲಿಯೂ ಬದಲಾದ ಈ ಕಾಲದಲ್ಲಿ ಬೆಳೆಯುವ ತಮ್ಮ ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೆ ಎಂದು ಅನೇಕರು ತಮ್ಮ ಮಕ್ಕಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಎಲ್ಲಿಯೇ ಇದ್ದರೂ ಸರಿ ಮನೆಗೆ ರಾತ್ರಿ ಇಷ್ಟು ಗಂಟೆಗೆಲ್ಲಾ ಬಂದು ಬಿಡಬೇಕೆಂದು ನಿಯಮಗಳನ್ನು ಹೇರುತ್ತಾರೆ. ಶಿಸ್ತನ್ನು ಕಲಿಸಿ ಹೀಗೆ ಇರಬೇಕು ಹೀಗೆ ಬದುಕಬೇಕೆಂದು ಹೇಳಿ ಕೊಡುತ್ತಾರೆ. ಸ್ಟಾರ್ ಮಕ್ಕಳು ಕೂಡ ಇದರಿಂದ ಹೊರತಾಗಿರಲ್ಲ. ಉದಾಹರಣೆಗೆ ಸೋನಾಕ್ಷಿ ಸಿನ್ಹಾ.

ಹೌದು, ಸಾಮಾನ್ಯವಾಗಿ ಸೆಲೆಬ್ರೆಟಿಗಳ ಮಕ್ಕಳು ಅಂದರೆ ಅವರು ಕೇಳಿದ್ದೆಲ್ಲವೂ ಸಿಗುತ್ತೆ ಅವರ ಬದುಕು ಸಖತ್ ಜಾಲಿಯಾಗಿರುತ್ತೆ ಎನ್ನುವ ಕಲ್ಪನೆ ಅನೇಕರದ್ದು. ಆದರೆ, ಇದೆಲ್ಲ ಶುದ್ದ ಸುಳ್ಳು ಎಂದು ಸೋನಾಕ್ಷಿ ಸಿನ್ಹಾ ತಮ್ಮ ಬದುಕಿನ ಕಥೆಯನ್ನು ಹೇಳಿದ್ದಾರೆ. ಈ ಕುರಿತು ಹೌಟರ್ ಫ್ಲೈಗೆ ಸಂದರ್ಶನವನ್ನು ನೀಡಿರುವ ಸೋನಾಕ್ಷಿ ಸಿನ್ಹಾ ನಮ್ಮ ಮನೆಯಲ್ಲಿ ರಾತ್ರಿ 01-30ರವರೆಗೆ ದಿನನಿತ್ಯ ಕರ್ಫ್ಯೂ ವಾತಾವರಣ ಇರುತ್ತಿತ್ತು ಎಂದು ಹೇಳಿದ್ದಾರೆ.
ನನ್ನ 32ನೇ ವಯಸ್ಸಿನವರೆಗೆ ಈ ವಾತಾವರಣ ಒಂದು ದಿನಾ ಕೂಡ ಬದಲಾಗಿಲ್ಲ ಎಂದಿರುವ ಸೋನಾಕ್ಷಿ ಸಿನ್ಹಾ ನಮ್ಮ ಮನೆಯ ಈ ನೀತಿ ನಿಯಮಗಳಿಂದ ಜಹೀರ್‌ಗೆ ದೊಡ್ಡ ಸಮಸ್ಯೆಯಾಗುತ್ತಿತ್ತು ಎಂದು ಹೇಳಿದ್ದಾರೆ. ನಾನು ಈ ನಿಯಮ ಉಲ್ಲಂಘನೆ ಮಾಡಿದಾಗೆಲ್ಲ, ಮನೆಗೆ ತಡವಾಗಿ ಹೋದಾಗೆಲ್ಲ, ನಾನು ಬೈಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ತಂದೆ ಮತ್ತು ತಾಯಿ ಐದನೇ ಮಹಡಿಯಲ್ಲಿ ವಾಸ ಮಾಡುತ್ತಿದ್ದರು, ನಾನು ಹನ್ನೊಂದನೇ ಮಹಡಿಯಲ್ಲಿ ವಾಸ ಮಾಡುತ್ತಿದ್ದೆ, ಆದರೆ.. ಶ್ರೀಝಾ ಎಂಬ ಪ್ರಾಮಾಣಿಕ ಟೆಲಿಫೋನ್ ಆಪರೇಟರ್ ನಾನು ತಡರಾತ್ರಿ ಮನೆಗೆ ಬಂದ ತಕ್ಷಣ ನಮ್ಮ ತಾಯಿಗೆ ಕರ ಮಾಡಿ ನಿಮ್ಮ ರಾಜಕುಮಾರಿ ಮನೆಗೆ ಬಂದಳು ಎಂದು ಸಂದೇಶವನ್ನು ನೀಡುತ್ತಿದ್ದರು ಎಂದು ಹೇಳಿದ್ದಾರೆ. ನಾನೆಷ್ಟೋ ಸಲ ನನ್ನ ತಂದೆ-ತಾಯಿಗೆ ವಿಚಾರ ಹೇಳಬೇಡಿ ಎಂದರೂ ಕೇಳದ ಅವರು ದಿನನಿತ್ಯ ನಾನು ಬರುವ ಸಮಯವನ್ನು ತಿಳಿಸುತ್ತಿದ್ದರು ಎಂದು ಹೇಳಿದ್ದಾರೆ. ಅದು ಮನೆಯಲ್ಲ ರಾಮಾಯಣ ಎಂಬ ಭದ್ರ ಕೋಟೆಯಾಗಿತ್ತು ಎಂದು ಹೇಳಿರುವ ಸೋನಾಕ್ಷಿ ಸಿನ್ಹಾ ಇದು ನನ್ನೊಬ್ಬಳ ಕಥೆ ಅಲ್ಲ ಇದು ಮನೆ ಮನೆ ಕಥೆ ಎಂದು ಹೇಳಿದ್ದಾರೆ. ಬಹುತೇಕ ಭಾರತೀಯರ ಮನೆಗಳಲ್ಲಿ ಇದೇ ತರಹದ ವಾತಾವರಣ ಇರುತ್ತೆ ಎಂದು ಹೇಳಿದ್ದಾರೆ. ಇನ್ನು ನನ್ನ ತಾಯಿ ನನಗೆ ಬೈದರೂ ಕೂಡ ನನ್ನ ತಂದೆ ಒಂದು ದಿನವೂ ನನ್ನ ಮೇಲೆ ಕೂಗಾಡಿಲ್ಲ ಎಂದು ಕೂಡ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.
ಸೋನಾಕ್ಷಿ ಸಿನ್ಹಾ ಅವರ ಈ ಮಾತುಗಳನ್ನು ಕೇಳಿ ಸದ್ಯ ಅನೇಕರು, ಇವರ ಮದುವೆ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ಮನೆಯಲ್ಲಿ ಅಷ್ಟೊಂದು ಕಟ್ಟು ನಿಟ್ಟಿನ ವಾತಾವರಣ ಇದ್ದರೂ ನೀವು ಅದ್ಹೇಗೆ ಜಹೀರ್ ಇಕ್ಬಾಲ್ ಜೊತೆ ಮದುವೆಯಾದ್ರೀ ಎಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಜಹೀರ್ ಅವರನ್ನು ಪ್ರೀತಿಸುವಾಗ ಮನೆಯಲ್ಲಿ ಈ ವಿಚಾರ ಗೊತ್ತಾದರೆ ಏನಾಗಬಹುದು ಎನ್ನುವ ಚಿಂತೆ ನಿಮ್ಮನ್ನು ಕಾಡಿತ್ತಾ ಎಂದು ಕೂಡ ಕೆಲವರು ಸೋನಾಕ್ಷಿ ಅವರಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ.


Click it and Unblock the Notifications











