For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಕೊಂದ ಕೃಷ್ಣಮೃಗಕ್ಕೆ ಸ್ಮಾರಕ ನಿರ್ಮಿಸಲಿರುವ ಬಿಶ್ಣೋಯ್ ಜನ

  |

  ಬಾಲಿವುಡ್‌ನ ಬ್ಯಾಡ್‌ ಬಾಯ್ ಸಲ್ಮಾನ್ ಮಾಡಿರುವ ಕುಕೃತ್ಯಗಳುಗಳು ಒಂದೆರಡಲ್ಲ. ಹಲವು ಗುರುತರ ಆರೋಪಗಳು ಸಲ್ಮಾನ್ ಖಾನ್ ಮೇಲಿವೆ. ಆದರೆ ಹಣ ಬಲ, ನ್ಯಾಯ ವ್ಯವಸ್ಥೆಯ ಹುಳುಕುಗಳನ್ನು ಬಳಸಿಕೊಂಡು ಸಲ್ಮಾನ್ ಖಾನ್ ಜೈಲು ಶಿಕ್ಷೆಯಿಂದ ಇಷ್ಟು ದಿನ ದೂರ ಉಳಿಯಲಯ ಯಶಸ್ವಿಯಾಗಿದ್ದಾರೆ.

  ಕುಡಿದು ವಾಹನ ಚಲಾಯಿಸಿ ಫುಟ್‌ಪಾತ್ ಮೇಲೆ ಮಲಗಿರುವವರನ್ನು ಕೊಂದಿದ್ದು, ಐಶ್ವರ್ಯಾ ರೈ ಮನೆಯ ಬಳಿ ಕುಡಿದು ಗಲಾಟೆ ಮಾಡಿದ್ದು, ವಿವೇಕ್ ಒಬೆರಾಯ್‌ಗೆ ನೂರಾರು ಬಾರಿ ಕರೆ ಮಾಡಿ ಕೊಲ್ಲುವುದಾಗಿ ಧಮ್ಕಿ ಹಾಕಿದ್ದು, ಮತ್ತು ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಮೋಜಿಗಾಗಿ ಭೇಟೆ ಆಡಿದ್ದು ಹೀಗೆ ಸಲ್ಮಾನ್ ಖಾನ್‌ ಮೇಲಿರುವ ಆರೋಪಗಳ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ.

  ಇದರಲ್ಲಿ ಕುಡಿದು ವಾಹನ ಚಲಾಯಿಸಿ ಪಾದಾಚಾರಿ ರಸ್ತೆಯ ಮೇಲೆ ಮಲಗಿದ್ದವರ ಕೊಂದಿದ್ದು ಹಾಗೂ ಕೃಷ್ಣಮೃಗ ಭೇಟೆ ಪ್ರಕರಣಗಳೆರಡೂ ತೀವ್ರ ಸುದ್ದಿಯಾಗಿದ್ದವು. ಎರಡರಲ್ಲಿಯೂ ಜೀವ ಹಾನಿ ಸಂಭವಿಸಿತ್ತು.


  ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ 2018ರಲ್ಲಿಯೇ ಸಲ್ಮಾನ್ ಖಾನ್‌ಗೆ ಐದು ವರ್ಷ ಶಿಕ್ಷೆ ಹಾಗೂ 2.50 ಲಕ್ಷ ಜುಲ್ಮಾನೆ ವಿಧಿಸಲಾಗಿದೆ. ಆದರೆ ಜೋಧ್‌ಪುರ ಸೆಷನ್ಸ್‌ ನ್ಯಾಯಾಲಯದ ಈ ಆದೇಶವನ್ನು ಸಲ್ಮಾನ್ ಖಾನ್ ಪ್ರಶ್ನೆ ಮಾಡಿದ್ದಾರೆ. ವಿಚಾರಣೆ ಇನ್ನೂ ಚಾಲ್ತಿಯಲ್ಲಿರುವ ಕಾರಣ ಸಲ್ಮಾನ್ ಖಾನ್ ಇನ್ನೂ ಹೊರಗೆ ಆರಾಮವಾಗಿ ಸುತ್ತಾಡುತ್ತಿದ್ದಾರೆ.

  ಆದರೆ ಇದೀಗ ಬಿಶ್ನೋಯ್ ಸಮುದಾಯದವರು ಸಲ್ಮಾನ್ ಖಾನ್ ಕೊಂದ ಕೃಷ್ಣಮೃಗದ ನೆನಪಿಗೆ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದೆ.

  ಸಲ್ಮಾನ್ ಖಾನ್ 1998 ರಲ್ಲಿ ಕೃಷ್ಣಮೃಗ ಭೇಟೆಯಾಡಿದ ರಾಜಸ್ಥಾನದ ಜೋದ್‌ಪುರದ ಸ್ಥಳದಲ್ಲಿಯೇ ಬಿಶ್ಣೋಯ್ ಸಮುದಾಯವು ಕೃಷ್ಣಮೃಗದ ಸ್ಮಾರಕ ನಿರ್ಮಾಣ ಮಾಡಲಿದ್ದು, ಜೊತೆಗೆ ಗಾಯಗೊಂಡ ಪ್ರಾಣಿಗಳ ಆರೈಕೆ, ಸಂರಕ್ಷಣೆಗೆ ಕೇಂದ್ರವೊಂದನ್ನು ಸ್ಥಾಪಿಸಲಿವೆ.

  ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಸುಲಭವಾಗಿ ತಪ್ಪಿಸಿಕೊಳ್ಳದಂತೆ ತಡೆ ಹಿಡಿದಿರುವ ಶ್ರೇಯ ಬಿಶ್ಣೋಯ್ ಸಮುದಾಯಕ್ಕೆ ಸೇರಬೇಕು. ಬಿಶ್ಣೋಯ್ ಸಮುದಾಯದವರು ಕೃಷ್ಣಮೃಗಗಳನ್ನು ತಮ್ಮ ದೇವರೆಂದು, ತಮ್ಮ ಸಮುದಾಯದ ಮೊದಲ ಗುರುವಾದ ಗುರು ಜಂಬೇಶ್ವರ್ ಅಥವಾ ಜಂಬಾಜಿಯ ಅವತಾರ ಎಂದು ನಂಬುತ್ತಾರೆ. ಹಾಗಾಗಿ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಭೇಟೆ ಆಡಿದಾಗ ಬಿಶ್ಣೋಯ್ ಸಮುದಾಯವು ತೀವ್ರವಾಗಿ ಖಂಡಿಸಿತು. ಮತ್ತು 1998ರಿಂದಲೂ ಸಲ್ಮಾನ್ ಖಾನ್‌ಗೆ ಶಿಕ್ಷೆ ಕೊಡಿಸಲೆಂದು ಶತಪ್ರಯತ್ನ ಮಾಡುತ್ತಲೇ ಇದೆ.

  ಬಿಶ್ಣೋಯ್ ಸಮುದಾಯವು ಪ್ರಕೃತಿ ಪ್ರೇಮವುಳ್ಳ ಸಮುದಾಯ. ಪ್ರಾಣಿಗಳ, ನಿಸರ್ಗದ ರಕ್ಷಣೆಗೆ ಜೀವವನ್ನೂ ಕೊಡಲು ಸಿದ್ಧವಿರುವ ಸಮುದಾಯ. ಅವರ ಗುರು ಜಂಬಾಜಿ ಆದೇಶದಂತೆ ಈ ಸಮುದಾಯವು ಪ್ರಾಣಿಗಳನ್ನು ಉಳಿಸಲು ತಮ್ಮ ಜೀವದಾನ ಮಾಡಲು ಸಹ ತಯಾರು. ಜೊತೆಗೆ ಪ್ರಕೃತಿ ಉಳಿಸುವುದರಲ್ಲಿಯೂ ಈ ಸಮುದಾಯ ಸದಾ ಮುಂದು. ರಾಜಸ್ಥಾನದಲ್ಲಿ ಅರಣ್ಯ ರಕ್ಷಣೆಯ ಹೊಣೆಯನ್ನು ಈ ಸಮುದಾಯವೇ ಹೊತ್ತುಕೊಂಡಿದೆ. ಅರಣ್ಯ ಇಲಾಖೆಗೆ ಹೆಗಲಿಗೆ ಹೆಗಲು ಕೊಟ್ಟು ಈ ಸಮುದಾಯ ಕೆಲಸ ಮಾಡುತ್ತಿದೆ.

  English summary
  Memorial to Black buck which is killed by Salman Khan in Rajastan's Jodhpur in 1998. Bishnoi community people building this memorial for black buck.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X