ಫೆಮಿನಿಸಂ ಎನ್ನುವುದೆಲ್ಲ ಉಪಯೋಗವಿಲ್ಲ, ಹೆಣ್ಣು-ಗಂಡು ಸಮಾನರಲ್ಲ ಎಂದ ಬಾಲಿವುಡ್ ಹಿರಿಯ ನಟಿ!
ಪ್ರಸಿದ್ಧ ಬಾಲಿವುಡ್ ಮತ್ತು ಕಿರುರೆತೆ ನಟಿ ನೀನಾ ಗುಪ್ತಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಡಿಎಉವ ಹೇಳಿಕೆಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಸ್ತ್ರೀವಾದದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಗಂಡು ಮತ್ತು ಹೆಣ್ಣು ಸಮಾನರಲ್ಲ ಎಂದು ಹೇಳಿಕೆ ನೀಡಿದ್ದಾರೆ.
ರಣವೀರ್ ಅಲಹಬಾದಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ ನಟಿ ನೀನಾ ಗುಪ್ತಾ, ಈ ಫೆಮಿನಿಸಂ ಎನ್ನುವುದು 'ಫಾಲ್ತು' (ನಿಷ್ಪ್ರಯೋಜಕ) ಎಂದು ಕರೆದಿದ್ದಾರೆ. ಜೊತೆಗೆ ಪುರುಷರು ಮತ್ತು ಮಹಿಳೆಯರ ನಡುವಿನ ಹೊಲಿಕೆ ಸರಿಯಲ್ಲ. ಅವರಿಬ್ಬರ ನಡುವಿನ ಸಮಾನತೆಯ ಪರಿಕಲ್ಪನೆಯನ್ನು ನಂಬುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಗಂಡು ಮತ್ತು ಹೆಣ್ಣು ಸಮಾನರಲ್ಲ!
ಗಂಡು ಮತ್ತು ಹೆಣ್ಣು ಸಮಾನರಲ್ಲ ಎಂದು ಹೇಳಿಕೆ ನೀಡಿದ್ದು, ಇಬ್ಬರು ಸಮಾನರು ಎಂದು ನಾನು ನಂಬುವುದಿಲ್ಲ. ಮಹಿಳೆಯರಿಗೆ ಪುರುಷರ ಅಗತ್ಯವಿದೆ ಎಂದು ಹೇಳಿದ್ದಾರೆ. ಜೊತೆಗೆ ಯಾವಾಗ ಗಂಡಸರು ಕೂಡ ಗರ್ಭ ಧರಿಸಲು ಪ್ರಾರಂಭಿಸುತ್ತಾರೋ ಆಗ ಅವರು ಮಹಿಳೆಯರಿಗೆ ಸಮಾನರಾಗುತ್ತಾರೆ ಎಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ನೀನಾ ಗುಪ್ತಾ ಹಿಂದಿಯಲ್ಲಿ, "ಫಾಲ್ಟು ಫೆಮಿನಿಸಂ' (ಉಪಯೋಗವಿಲ್ಲದ ಸ್ತ್ರೀವಾದ) ಅಥವಾ 'ಮಹಿಳೆಯರು ಪುರುಷರಿಗೆ ಸಮಾನರು' ಎಂಬ ಕಲ್ಪನೆಯನ್ನು ನಂಬುವ ಅಗತ್ಯವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಬದಲಾಗಿ, ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವತ್ತ ಗಮನಹರಿಸಿ. ನಿಮ್ಮ ಕೆಲಸಕ್ಕೆ ಹೆಚ್ಚು ಗಮನ ನೀಡಿ. ನೀವು ಗೃಹಿಣಿಯಾಗಿದ್ದರೆ, ಅದನ್ನು ಕೀಳಾಗಿ ನೋಡಬೇಡಿ, ಇದು ಕೂಡ ಪ್ರಮುಖ ಪಾತ್ರ" ಎಂದು ಹೇಳಿದ್ದಾರೆ.
"ನಿಮ್ಮ ನಿಮ್ಮ ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳಿ, ನಿಮ್ಮನ್ನು ನೀವು ಸಣ್ಣವರು ಎಂದು ತಿಳಿದುಕೊಳ್ಳುವುದನ್ನು ಮೊದಲಿ ಬಿಟ್ಟುಬಿಡಿ. ಇನ್ನೊಂದು ವಿಷಯವಂದರೆ, ಪುರುಷರು ಮತ್ತು ಮಹಿಳೆಯರು ಸಮಾನರಲ್ಲ. ಪುರುಷರು ಗರ್ಭಿಣಿಯಾಗಲು ಪ್ರಾರಂಭಿಸಿದ ದಿನ, ಆ ದಿನ ನಾವು ಸಮಾನರಾಗುತ್ತೇವೆ" ಎಂದು ನೀನಾ ಗುಪ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೆಣ್ಣಿಗೆ ಗಂಡಿನ ಅವಶ್ಯಕತೆಯಿದೆ!
ಇನ್ನು, ಹೆಣ್ಣಿಗೆ ಗಂಡಿನ ಅವಶ್ಯಕತೆಯಿದೆ ಎಂದು ಹೇಳಿರುವ ನೀನಾ ಗುಪ್ತಾ, ತನ್ನ ಜೀವನದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. "ಹೆಣ್ಣಿಗೆ ಒಬ್ಬ ಗಂಡು ಬೇಕು. ನಾನು ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ. ನಾನು ಒಮ್ಮೆ ಬೆಳಗ್ಗೆ 6 ಗಂಟೆಗೆ ಫ್ಲೈಟ್ ಹಿಡಿಯಬೇಕಿತ್ತು. ಆ ಸಮಯದಲ್ಲಿ ನನಗೆ ಬಾಯ್ ಫ್ರೆಂಡ್ ಇರಲಿಲ್ಲ. ಬೆಳಗಿನ ಜಾವ 4 ಗಂಟೆಗೆ ಮನೆಯಿಂದ ಹೊರಗೆ ಬಂದೆ. ಕತ್ತಲಾಗಿತ್ತು. ಒಬ್ಬ ವ್ಯಕ್ತಿ ನನ್ನನ್ನು ಫಾಲೋ ಮಾಡಲು ಪ್ರಾರಂಭಿಸಿದನು. ನಾನು ತುಂಬಾ ಹೆದರುತ್ತಿದ್ದೆ. ನಾನು ಮನೆಗೆ ವಾಪಸ್ ಹೊದೆ. ಫ್ಲೈಟ್ ಮಿಸ್ ಆಯಿತು. ಮರುದಿನ ನಾನು ಅದೇ ಫ್ಲೈಟ್ ಬುಕ್ ಮಾಡಿದೆ. ಆದರೆ, ನನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡೆ. ಅವರು ನನ್ನನ್ನು ಡ್ರಾಪ್ ಮಾಡಿದರು. ಹೀಗಾಗಿ ನನಗೆ ಒಬ್ಬ ಗಂಡಸಿನ ಅವಶ್ಯಕತೆಯಿದೆ" ಎಂದಿದ್ದಾರೆ.
ನೀನಾ ಗುಪ್ತಾ
ಹಿರಿಯ ನಟಿ ನೀನಾ ಗುಪ್ತ ಹಲವು ಬಾಲಿವುಡ್ ಸಿನಿಮಾ, ಕಿರುತೆರೆಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಶ್ರೀಮತಿ ಚಟರ್ಜಿ ವರ್ಸಸ್ ನಾರ್ವೆ ಮತ್ತು ವಿಶಾಲ್ ಭಾರದ್ವಾಜ್ ಅವರ ವೆಬ್ ಸರಣಿ ಚಾರ್ಲಿ ಚೋಪ್ರಾ ಮತ್ತು ದಿ ಮಿಸ್ಟರಿ ಆಫ್ ಸೋಲಾಂಗ್ ವ್ಯಾಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಲಸ್ಟ್ ಸ್ಟೋರೀಸ್ 2 ನಲ್ಲಿ ಸಹ ನಟಿಸಿದ್ದಾರೆ.


Click it and Unblock the Notifications











