ಮಧ್ಯರಾತ್ರಿ 3 ಗಂಟೆಗೆ ನಟಿಯ ಮನೆ ಬಾಗಿಲು ಬಡೆದ ಆಗುಂತಕರು, ಬೆಚ್ಚಿಬಿದ್ದ ಗ್ಲಾಮರ್ ಲೋಕದ ವಿವಾದಿತ ಚೆಲುವೆ
ಬಾಲಿವುಡ್ ಅಂಗಳದ ಅತ್ಯಂತ ಚರ್ಚಿತ ನಟಿ ಎಂದರೆ ಅದು ಉರ್ಫಿ ಜಾವೇದ್. ಸದಾ ಕಾಲ ತಮ್ಮ ವಿಭಿನ್ನ ಉಡುಗೆ ಹಾಗೂ ನೇರ ಮಾತುಗಳಿಂದಲೇ ಇವರು ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಉರ್ಫಿ ಯಾವುದೇ ಫ್ಯಾಷನ್ ವಿಚಾರಕ್ಕೆ ಸುದ್ದಿಯಾಗಿಲ್ಲ. ಬದಲಾಗಿ ಅವರು ಎದುರಿಸಿದ ಒಂದು ಘೋರ ಘಟನೆ ಇಡೀ ಚಿತ್ರರಂಗವನ್ನೇ ನಡುಗುವಂತೆ ಮಾಡಿದೆ.
ಹೌದು, ಸಾಮಾನ್ಯವಾಗಿ ಉರ್ಫಿ ಜಾವೇದ್ ಯಾವುದೇ ಟೀಕೆಗಳಿಗೂ ಅಂಜುವವರಲ್ಲ. ಎಷ್ಟೇ ವಿರೋಧ ಬಂದರೂ ಅವರು ಅಚಲವಾಗಿ ಇರುತ್ತಿದ್ದರು. ಆದರೆ ಈ ಘಟನೆಯು ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ. ಮೊದಲ ಬಾರಿಗೆ ಅವರು ತಮ್ಮ ಸುರಕ್ಷತೆಯ ಬಗ್ಗೆ ತೀವ್ರವಾದ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ.

ಈ ಘಟನೆಯ ಬಗ್ಗೆ ಉರ್ಫಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾದ ಪೋಸ್ಟ್ ಹಾಕಿದ್ದಾರೆ. "ನನ್ನ ಜೀವನದಲ್ಲಿ ಇಂತಹ ದಿನ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ" ಎಂದು ಅವರು ನೋವಿನಿಂದ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ರಾತ್ರಿ ಉರ್ಫಿ ಜಾವೇದ್ ಮನೆಯ ಮುಂದೆ ನಡೆದಿದ್ದೇನು ಎಂಬುದು ಸದ್ಯದ ಕುತೂಹಲ.
ಸರಿಯಾಗಿ ಮಧ್ಯರಾತ್ರಿ 3 ಗಂಟೆಗೆ ನಡೆದಿದ್ದೇನು?
ಅದು ಬೆಳಗಿನ ಜಾವ 3 ಗಂಟೆಯ ಸಮಯ. ಇಡೀ ಜಗತ್ತೇ ಗಾಢ ನಿದ್ದೆಯಲ್ಲಿದ್ದಾಗ ಉರ್ಫಿ ಜಾವೇದ್ ಮನೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ. ಅವರು ಬಂದಿದ್ದಷ್ಟೇ ಅಲ್ಲದೆ, ಉರ್ಫಿ ಮನೆಯ ಡೋರ್ ಬೆಲ್ ಅನ್ನು ಸತತವಾಗಿ ಬಾರಿಸಲು ಶುರು ಮಾಡಿದ್ದಾರೆ. ನಿದ್ದೆಯಲ್ಲಿದ್ದ ನಟಿ ಈ ಸದ್ದಿಗೆ ಬೆಚ್ಚಿಬಿದ್ದಿದ್ದಾರೆ.
ಮನೆಯ ಹೊರಗೆ ನಿಂತಿದ್ದ ಆ ವ್ಯಕ್ತಿಗಳು ಉರ್ಫಿ ಹೊರಗೆ ಬರಲೇಬೇಕು ಎಂದು ಪಟ್ಟು ಹಿಡಿದಿದ್ದರು. ಅಷ್ಟು ಹೊತ್ತಿನಲ್ಲಿ ಅಪರಿಚಿತರು ಬಂದಿದ್ದನ್ನು ನೋಡಿ ಉರ್ಫಿ ಆತಂಕಗೊಂಡಿದ್ದರು. ಅವರು ಹೊರಗೆ ಹೋಗಲು ನಿರಾಕರಿಸಿದರೂ ಆ ವ್ಯಕ್ತಿಗಳು ಅಲ್ಲಿಂದ ಕದಲಿಲ್ಲ. ಇದರಿಂದಾಗಿ ನಟಿಗೆ ಏನು ಮಾಡಬೇಕೆಂದು ತೋಚದೆ ಮನೆಯ ಒಳಗೇ ಭಯದಿಂದ ಕಾಲ ಕಳೆದಿದ್ದಾರೆ.
ರಾಜಕೀಯ ಪ್ರಭಾವದ ಬೆದರಿಕೆ...
ಆ ಇಬ್ಬರು ವ್ಯಕ್ತಿಗಳು ಸಾಮಾನ್ಯರಂತೆ ನಡೆದುಕೊಳ್ಳುತ್ತಿರಲಿಲ್ಲ. ಉರ್ಫಿ ಜಾವೇದ್ ಮನೆಯ ಬಾಗಿಲು ಬಡಿಯುತ್ತಾ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೆ ತಮಗೆ ದೊಡ್ಡ ಮಟ್ಟದ ರಾಜಕೀಯ ಸಂಪರ್ಕ ಇದೆ ಎಂದು ಅವರು ಕೂಗಾಡುತ್ತಿದ್ದರು. "ನಮಗೆ ರಾಜಕೀಯ ನಾಯಕರ ಬೆಂಬಲವಿದೆ, ನಾವೇನು ಬೇಕಾದರೂ ಮಾಡುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಘಟನೆಯಿಂದಾಗಿ ಉರ್ಫಿ ತೀವ್ರವಾಗಿ ನೊಂದಿದ್ದಾರೆ. ಪೋಲಿಸರ ಹಸ್ತಕ್ಷೇಪದ ನಂತರವೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದು ಕಷ್ಟವಾಗಿತ್ತು. ಆ ವ್ಯಕ್ತಿಗಳ ವರ್ತನೆಯಿಂದಾಗಿ ಉರ್ಫಿ ಅವರಿಗೆ ತಮ್ಮ ಮನೆಯಲ್ಲಿ ತಮಗೆ ರಕ್ಷಣೆ ಇಲ್ಲ ಎಂಬ ಭಾವನೆ ಮೂಡಿದೆ. ಒಬ್ಬ ಮಹಿಳೆಗೆ ಇಷ್ಟು ಕಿರುಕುಳ ನೀಡಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ವಸತಿ ಸಂಘಕ್ಕೆ ಅಧಿಕೃತ ದೂರು...
ಪೋಲಿಸರಿಗೆ ಮಾಹಿತಿ ನೀಡಿದ ನಂತರವೂ ಕಿರಿಕಿರಿ ನಿಲ್ಲದ ಕಾರಣ ಉರ್ಫಿ ಈಗ ತಮ್ಮ ವಸತಿ ಸಂಘಕ್ಕೆ ದೂರು ನೀಡಿದ್ದಾರೆ. ತಮ್ಮ ಕಟ್ಟಡದ ಭದ್ರತೆಯ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಮಧ್ಯರಾತ್ರಿ ಅಷ್ಟು ಸುಲಭವಾಗಿ ಮನೆಯ ಬಾಗಿಲಿಗೆ ಬಂದಿದ್ದು ಹೇಗೆ ಎಂಬುದು ಅವರ ಪ್ರಶ್ನೆಯಾಗಿದೆ.
"ನನಗೆ ಈಗ ಸುರಕ್ಷಿತವಾಗಿ ಇಲ್ಲ ಅನಿಸುತ್ತಿದೆ" ಎಂದು ಹೇಳಿದ್ದಾರೆ. ಒಬ್ಬ ಸೆಲೆಬ್ರಿಟಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರೂ, ಖಾಸಗಿ ಬದುಕಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ಈ ಪ್ರಕರಣದ ಬಗ್ಗೆ ಈಗ ತನಿಖೆ ನಡೆಯುತ್ತಿದ್ದು ಆ ಇಬ್ಬರು ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.
ಸಿನಿಮಾ ಲೋಕದ ಕರಾಳ ಮುಖ...
ಯಾವುದೇ ವ್ಯಕ್ತಿಯ ಖಾಸಗಿ ಜೀವನಕ್ಕೆ ಗೌರವ ನೀಡುವುದು ಎಲ್ಲರ ಕರ್ತವ್ಯ. ಉರ್ಫಿ ಜಾವೇದ್ ಈ ಸ್ಥಿತಿ ನಿಜಕ್ಕೂ ಕಳವಳಕಾರಿ. ಸದಾ ನಗುನಗುತ್ತಾ ಇರುತ್ತಿದ್ದ ನಟಿ ಇಷ್ಟರ ಮಟ್ಟಿಗೆ ಭಯಗೊಂಡಿದ್ದಾರೆ ಎಂದರೆ ಅಲ್ಲಿ ನಡೆದ ಘಟನೆ ಎಷ್ಟು ಗಂಭೀರವಾಗಿತ್ತು ಎಂಬುದು ತಿಳಿಯುತ್ತದೆ. ಪೋಲಿಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿ ಎನ್ನುವುದೇ ಎಲ್ಲರ ಆಶಯ.


Click it and Unblock the Notifications











