ಸುರಕ್ಷತೆಗಾಗಿ ಪುರುಷರು 2 ಕಾಂಡೋಮ್ ಬಳಸಬಹುದಾ? ಬೇಡ ಎಂದಿದ್ದೇಕೆ ರಕುಲ್?

ದೆಹಲಿ ಬೆಡಗಿ ರಕುಲ್ ಪ್ರೀತ್ ಸಿಂಗ್ ಸದ್ಯ ಬಾಲಿವುಡ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಕನ್ನಡದ 'ಗಿಲ್ಲಿ' ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬೆಡಗಿ ಮುಂದೆ ಟಾಲಿವುಡ್‌ನಲ್ಲಿ ಸಕ್ಸಸ್ ಕಂಡರು. ರಕುಲ್ ನಟನೆಯ 'ಛತ್ರಿವಾಲಿ' ಸಿನಿಮಾ ಇತ್ತೀಚೆಗೆ ನೇರವಾಗಿ ಓಟಿಟಿಗೆ ಬಂದಿದೆ.

ಸೋಶಿಯಲ್ ಕಾಮಿಡಿ ಎಂಟರ್‌ಟೈನರ್ 'ಛತ್ರಿವಾಲಿ' ಚಿತ್ರದಲ್ಲಿ ರಕುಲ್ ಕಾಂಡೋಮ್ ಟೆಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ತೇಜಸ್ ಡೊಸ್ಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜನವರಿ 20ಕ್ಕೆ ಸಿನಿಮಾ ನೇರವಾಗಿ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಅಂದಹಾಗೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಲೈಂಗಿಕ ಶಿಕ್ಷಣದ ಬಗ್ಗೆ ಈ ಚಿತ್ರದಲ್ಲಿ ಚರ್ಚಿಸಲಾಗಿದೆ. ಇದೇ ಸಿನಿಮಾ ವಿಚಾರವಾಗಿ ರಕುಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಬೋಲ್ಡ್ ಪ್ರಶ್ನೆಗಳಿಗೆ ಅಷ್ಟೇ ಬೋಲ್ಡ್ ಉತ್ತರ ಕೊಟ್ಟಿದ್ದಾರೆ.

ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಕೆಲವರು ಸಾಕಷ್ಟು ಅನುಮಾನಗಳು ಇರುತ್ತವೆ. ಅದೇ ರೀತಿ ಸಾಕಷ್ಟು ಊಹಾಪೋಹಗಳು ಇರುತ್ತವೆ ಎಂದು ದೆಹಲಿ ಬೆಡಗಿ ಹೇಳಿದ್ದಾರೆ. ಅದೇ ವಿಚಾರವನ್ನು ನಾವು 'ಛತ್ರಿವಾಲಿ' ಚಿತ್ರದಲ್ಲಿ ಚರ್ಚಿಸಿದ್ದೇವೆ ಎಂದಿದ್ದಾರೆ.

2 ಕಾಂಡೋಮ್ ಬಳಕೆ ಬೇಡ

2 ಕಾಂಡೋಮ್ ಬಳಕೆ ಬೇಡ

"ಲೈಂಗಿಕ ಕ್ರಿಯೆಯಿಂದ ಹರಡುವ ಕಾಯಿಲೆಗಳು ಹಾಗೂ ಗರ್ಭಧಾರಣೆಯನ್ನು ತಡೆಯಲು ಸುರಕ್ಷತೆಗಾಗಿ ಪುರುಷರು 2 ಕಾಂಡೋಮ್ ಬಳಸಬಹುದಾ? ಎನ್ನುವ ಪ್ರಶ್ನೆಗೆ ರಕುಲ್ ಬೇಡ ಎಂದಿದ್ದಾರೆ. "ಇದು ಒಳ್ಳೆಯ ಆಲೋಚನೆಯಲ್ಲ. ಏಕೆಂದರೆ ಎರಡು ಕಾಂಡೋಮ್‌ಗಳು ಬಳಸುವುದರಿಂದ ಎರಡರ ನಡುವೆ ತಿಕ್ಕಾಟ ಉಂಟಾಗಿ ಹರಿದು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದನ್ನು ಅನುಸರಿಸಬಾರದು. ಅಷ್ಟೆಲ್ಲಾ ಸುರಕ್ಷತೆ ಬಗ್ಗೆ ಯೋಚಿಸುವುದಾದರೆ ಮಹಿಳೆಯರು ಫೀಮೇಲ್ ಕಾಂಡೋಮ್ ಬಳಸಬಹುದು. ಗರ್ಭ ನಿರೋಧಕ ಮಾತ್ರೆ ಸೇವಿಸಬಹುದು, IUD ರೀತಿಯ ಗರ್ಭನಿರೋಧಕ ಪರಿಕರಗಳನ್ನು ಬಳಸಬಹುದು" ಎಂದಿದ್ದಾರೆ.

ಸರೋಗಸಿ ಬಗ್ಗೆಯೂ ರಕುಲ್ ಚರ್ಚೆ

ಸರೋಗಸಿ ಬಗ್ಗೆಯೂ ರಕುಲ್ ಚರ್ಚೆ

ಇನ್ನು ಸಾರೋಗಸಿ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಪ್ರಶ್ನೆಗಳಿಗೆ ರಕುಲ್ ಉತ್ತರಿಸಿದ್ದಾರೆ. ಸಾರೋಗಸಿ ಈಗ ದೇಶದಲ್ಲಿ ಹಾಟ್ ಟಾಪಿಕ್ ಆಗಿದೆ. ಅದು ಮಕ್ಕಳನ್ನು ಬಯಸುವ ಹಾಗೂ ಬಾಡಿಗೆ ತಾಯಿಯ ಆಯ್ಕೆಯ ವಿಚಾರದ ಮೇಲೆ ನಿಂತಿದೆ ಎಂದಿದ್ದಾರೆ. ಅದೇ ರೀತಿ ಲೈಂಗಿಕ ಕ್ರಿಯೆ ಬಗ್ಗೆ ಇರುವ ತಪ್ಪು ಕಲ್ಪನೆಗಳು, ತಪ್ಪು ನಂಬಿಕೆಗಳ ಕುರಿತು ರಕುಲ್ ಪ್ರೀತ್‌ಸಿಂಗ್ ಮಾತನಾಡಿದ್ದಾರೆ.

 'ಛತ್ರಿವಾಲಿ' ಸಿನಿಮಾ ಕಥೆ ಏನು?

'ಛತ್ರಿವಾಲಿ' ಸಿನಿಮಾ ಕಥೆ ಏನು?

ಸಾನ್ಯಾ ಧಿಂಗ್ರಾ (ರಕುಲ್ ಪ್ರೀತ್ ಸಿಂಗ್) ಕೆಮಿಸ್ಟ್ರಿ ಪದವೀಧರೆ. ಮನೆ ಬಳಿ ಮಕ್ಕಳಿಗೆ ಟ್ಯೂಷನ್‌ ಮಾಡುವ ಜೊತೆಗೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುತ್ತಾಳೆ. ಆಗ ಕಾಂಡೋಮ್ ಕಂಪನಿಯಲ್ಲಿ ಟೆಸ್ಟರ್‌ ಆಗಿ (ಕಾಂಡೋಮ್ ಕ್ವಾಲಿಟಿ ಮ್ಯಾನೇಜರ್‌ಗಾ) ಕೆಲಸ ಅರಸಿ ಬರುತ್ತದೆ. ಮೊದಲು ಆ ಕೆಲಸ ಬೇಡ ಎನ್ನುತ್ತಾಳೆ. ಆದರೆ ಕೆಲ ದಿನಗಳ ನಂತರ ಹಣಕ್ಕಾಗಿ ಬೇರೆ ವಿಧಿ ಇಲ್ಲದೇ ಒಪ್ಪಿಕೊಳ್ಳಬೇಕಾಗುತ್ತದೆ. ಕಾಂಡೋಮ್ ಕಂಪನಿಯಲ್ಲಿ ಕ್ವಾಲಿಟಿ ಹೆಡ್ ಕೆಲಸ ಮಾಡುತ್ತಿರುವ ವಿಷಯ ಮುಚ್ಚಿಟ್ಟು ರಿಷಿ ಕಾರ್ಲ (ಸುಮಿತ್ ವ್ಯಾಸ್)ನ ಮದುವೆ ಆಗುತ್ತಾಳೆ. ಹಣಕ್ಕಾಗಿ ಕಾಂಡೋಮ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರೂ ಸಾನ್ಯಾಗೆ ಕಾಂಡೋಮ್ ಇಂಪಾರ್ಟೆನ್ಸ್ ಯಾವಾಗ, ಹೇಗೆ ತಿಳಿಯಿತು? ಮಡದಿ ಕೆಲಸದ ಬಗ್ಗೆ ತಿಳಿದ ಮೇಲೆ ರಿಷಿ ಪ್ರತಿಕ್ರಿಯೆ ಏನು? ಕಾಂಡೋಮ್ ಕಂಪನಿಯಲ್ಲಿ ಕೆಲಸ ಮಾಡುವ ಸಾನ್ಯ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಲು ಏಕೆ ಮುಂದಾಗುತ್ತಾಳೆ? ಎನ್ನುವುದೇ ಸಿನಿಮಾ ಕಥೆ.

ರಕುಲ್ ಕ್ರೇಜ್ ಕಮ್ಮಿ ಆಯ್ತು

ರಕುಲ್ ಕ್ರೇಜ್ ಕಮ್ಮಿ ಆಯ್ತು

ರಕುಲ್ ಪ್ರೀತ್‌ ಸಿಂಗ್ ಕೈಯಲ್ಲಿ ಮೂರ್ನಾಲ್ಕು ಪ್ರಾಜೆಕ್ಟ್‌ಗಳಿವೆ. 'ಅಯಲಾನ್' ಎನ್ನುವ ತಮಿಳು ಸಿನಿಮಾ ಜೊತೆಗೆ ಕಮಲ್ ಹಾಸನ್ ಜೊತೆ 'ಇಂಡಿಯನ್- 2' ಚಿತ್ರದಲ್ಲಿ ನಟಿಸ್ತಿದ್ದಾರೆ. ಮತ್ತೊಂದು ತೆಲುಗು- ತಮಿಳು ದ್ವಿಭಾಷಾ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಆದರೆ ಸೌತ್‌ನಲ್ಲಿ ರಕುಲ್ ಕ್ರೇಜ್‌ ಕಮ್ಮಿ ಆಗಿದೆ. ಹೊಸ ನಟಿಯರು ಆರ್ಭಟದ ನಡುವೆ ದೆಹಲಿ ಬೆಡಗಿ ಹವಾ ನಡೀತ್ತಿಲ್ಲ.

More from Filmibeat

English summary
Men should wear 2 condoms for extra protection? Chhatriwali actress Rakul advised that is a bad idea. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X