ಕಣ್ಣ ಮುಂದೆಯೇ ಕಿರುಕುಳ ಕೊಡ್ತಿದ್ರೂ, ಈ ನಟ ಸುಮ್ಮನೆ ಇದ್ರಂತೆ.!
#ಮೀಟೂ ಅಭಿಯಾನ ಚಿತ್ರರಂಗದಲ್ಲಿ ಚಂಡಮಾರುತದಂತೆ ಬೀಸುತ್ತಿದೆ. ಖ್ಯಾತನಾಮರ ಮುಖವಾಡವನ್ನ ಕಳಚುತ್ತಿದೆ. ಪ್ರತಿ ನಿತ್ಯ ಒಬ್ಬರಲ್ಲಾ ಒಬ್ಬರು ತಮಗಾದ ಕರಾಳ ಅನುಭವವನ್ನು ಬಹಿರಂಗ ಪಡಿಸುತ್ತಿದ್ದಾರೆ.
#ಮೀಟೂ ಅಭಿಯಾನದಿಂದ ಸುಭಾಷ್ ಘಾಯ್, ಸಾಜಿದ್ ಖಾನ್, ನಾನಾ ಪಾಟೇಕರ್, ಅಲೋಕ್ ನಾಥ್, ಕೈಲಾಶ್ ಖೇರ್, ವಿಕಾಸ್ ಬಾಹ್ಲ್ ಸೇರಿದಂತೆ ಹಲವರ ಬಂಡವಾಳ ಬಯಲಾಗಿದೆ.
ಇದೀಗ ಇದೇ #ಮೀಟೂ ಅಭಿಯಾನಕ್ಕೆ ನಟಿ ಚಿತ್ರಾಂಗದ ಸಿಂಗ್ ಕೈಜೋಡಿಸಿದ್ದಾರೆ. ಎರಡು ವರ್ಷಗಳ ಹಿಂದೆ.. ಅಂದ್ರೆ 2017 ರಲ್ಲಿ ತಾವು ಅನುಭವಿಸಿದ ಯಮಯಾತನೆಯನ್ನ ಚಿತ್ರಾಂಗದ ಸಿಂಗ್ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...

2017 ರಲ್ಲಿ ನಡೆದ ಘಟನೆ
2017 ರಲ್ಲಿ 'ಬಾಬುಮೋಷಾಯಿ ಬಂದೂಕ್ ಬಾಝ್' ಚಿತ್ರದ ಶೂಟಿಂಗ್ ವೇಳೆ ನಿರ್ಮಾಪಕ ಹಾಗೂ ನಿರ್ದೇಶಕ ಚಿತ್ರಾಂಗದ ಸಿಂಗ್ ಗೆ ಕಿರುಕುಳ ನೀಡಿದ್ದರಂತೆ. ಚಿತ್ರಾಂಗದ ಸಿಂಗ್ ಒಪ್ಪಿಗೆ ಇಲ್ಲದೇ ಇದ್ದರೂ, ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳನ್ನ ನಿರ್ದೇಶಕ ಸೇರಿಸಿದ್ದರಂತೆ.

ಸುಮ್ಮನೆ ಕೂತಿದ್ದ ನವಾಝುದ್ದೀನ್
ಚಿತ್ರದ ನಾಯಕನ ಜೊತೆಗೆ ಹಸಿಬಿಸಿ ದೃಶ್ಯದಲ್ಲಿ ನಟಿಸಲು ಚಿತ್ರಾಂಗದ ಸಿಂಗ್ ಗೆ ನಿರ್ದೇಶಕ ಒತ್ತಾಯ ಮಾಡಿದ್ದಾರೆ. ಆಕೆ ಆಗಲ್ಲ ಅಂದಾಗ ಬೆದರಿಕೆ ಹಾಕಿದ್ದಾರೆ. ಇದನ್ನೆಲ್ಲ ನೋಡಿಕೊಂಡು ನಟ ನವಾಝುದ್ದೀನ್ ಸಿದ್ದಿಖಿ ಸುಮ್ಮನೆ ಕೂತಿದ್ದರಂತೆ.

ಚಿತ್ರಾಂಗದ ಪರ ನವಾಝುದ್ದೀನ್ ದನಿ ಎತ್ತಲಿಲ್ಲ
''ಕಣ್ಣೆದುರಿಗೆ ಮಹಿಳೆಗೆ ಕಿರುಕುಳ ನೀಡುತ್ತಿದ್ದರೂ, ನವಾಝುದ್ದೀನ್ ಸುಮ್ಮನಿದ್ದರು. ಮಹಿಳೆ ಪರ ಆತ ದನಿ ಎತ್ತಲಿಲ್ಲ. ಅಧಿಕಾರದಲ್ಲಿ ಇರುವ ಕೆಲ ಗಂಡಸರು ಮಹಿಳೆಯರಿಗೆ ಸಪೋರ್ಟ್ ಮಾಡಲ್ಲ. ಬದಲಾಗಿ ಕಿರುಕುಳ ನೀಡಲು ಉತ್ತೇಜನ ನೀಡುತ್ತಾರೆ'' ಎಂದು ನಟಿ ಚಿತ್ರಾಂಗದ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

'ಬಾಝಾರ್' ಚಿತ್ರದಲ್ಲಿ ಚಿತ್ರಾಂಗದ
''ಅಂದು ನವಾಝುದ್ದೀನ್ ನನಗೆ ಸಪೋರ್ಟ್ ಮಾಡಬಹುದಿತ್ತು. ಆದ್ರೆ, ಮಾಡಲಿಲ್ಲ'' ಎನ್ನುವ ನೋವಿನಿಂದ ನುಡಿಯುವ ಚಿತ್ರಾಂಗದ ಸಿಂಗ್ ಇದೀಗ ಸೈಫ್ ಅಲಿ ಖಾನ್ ಜೊತೆಗೆ 'ಬಾಝಾರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications










