ನಿರ್ದೇಶಕ ಸಾಜಿದ್ ಖಾನ್ 'ಕಾಮುಕ' ಎಂದ ದಿಯಾ ಮಿರ್ಜಾ.!
ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ದನಿಯೆತ್ತುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಸಾಜಿದ್ ಖಾನ್ ಕಾಮ ಪುರಾಣವನ್ನ ನಟಿ ಸಲೋನಿ ಛೋಪ್ರಾ, ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ, ನಟಿ ರೇಚಲ್ ವೈಟ್, ನಟಿ ಮಂದನಾ ಹಾಗೂ ನಟಿ ಸಿಮ್ರನ್ ಸೂರಿ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ.
ಮಹಿಳೆಯರ ಜೊತೆಗಿನ ಸಾಜಿದ್ ಖಾನ್ ವರ್ತನೆ ಬೇಸರ ತರಿಸುತ್ತೆ ಎಂದು ಬಿಪಾಶಾ ಬಸು ಕೂಡ ಹೇಳಿದ್ದರು. ಇದೀಗ ''ಸಾಜಿದ್ ಖಾನ್ ಕಾಮುಕ, ಹೆಣ್ಣುಬಾಕ'' ಅಂತ ದಿಯಾ ಮಿರ್ಜಾ ಹೇಳಿಕೆ ನೀಡಿದ್ದಾರೆ.
''ಸಲೋನಿ ಛೋಪ್ರಾ ಹಾಗೂ ಇತರೆ ನೊಂದ ಹುಡುಗಿಯರ ಕಥೆ ಕೇಳಿ ನಾನು ಆಘಾತಗೊಂಡಿದ್ದೇನೆ. ಸಾಜಿದ್ ಖಾನ್ ಕಾಮುಕ.. ಹೆಣ್ಣುಬಾಕ.. ಅನ್ನೋದು ನಿಜ. ಇಂಥವರಿಂದ ನಾನು ಸದಾ ದೂರ ಉಳಿದಿದ್ದೇನೆ'' ಎಂದಿದ್ದಾರೆ ನಟಿ ದಿಯಾ ಮಿರ್ಜಾ.

ಸಾಜಿದ್ ಖಾನ್ ಪುರಾಣಗಳು ಒಂದೊಂದಾಗಿಯೇ ಹೊರಗೆ ಬರುತ್ತಿರುವುದರಿಂದ, ಸಹೋದರಿ ಫರಾ ಖಾನ್ ಕೂಡ ಶಾಕ್ ಆಗಿದ್ದಾರೆ.
ಸಾಜಿದ್ ಖಾನ್ ವಿರುದ್ಧ ಆರೋಪಗಳ ಸುರಿಮಳೆಯಾಗಿರುವುದರಿಂದ 'ಹೌಸ್ ಫುಲ್-4' ಚಿತ್ರದ ನಿರ್ದೇಶಕನ ಸ್ಥಾನದಿಂದ ಸಾಜಿದ್ ಖಾನ್ ಕೆಳಕ್ಕೆ ಇಳಿದಿದ್ದಾರೆ. ಸತ್ಯ ಹೊರಗೆ ಬರುವವರೆಗೂ ಯಾವುದೇ ತೀರ್ಮಾನಕ್ಕೆ ಬರಬೇಡಿ ಅಂತ ಸಾಜಿದ್ ಖಾನ್ ಮನವಿ ಮಾಡಿದ್ದಾರೆ.


Click it and Unblock the Notifications











