ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಸಿಡಿದೆದ್ದ ನಟಿ ಸಿಮ್ರನ್ ಸೂರಿ.!

ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಅದೆಷ್ಟು ಮಹಿಳೆಯರಿಗೆ ಸಿಟ್ಟು ಇದ್ಯೋ ಏನೋ.. ಎಲ್ಲರೂ ಒಬ್ಬೊಬ್ಬರಾಗಿ ಸಾಜಿದ್ ಖಾನ್ ಮೇಲೆ ಬಾಣ ಬಿಡುತ್ತಿದ್ದಾರೆ. ಸಾಜಿದ್ ಖಾನ್ ರಿಂದ ಅನುಭವಿಸಿದ ಯಾತನೆಯನ್ನ ಇಷ್ಟು ದಿನ ಮುಚ್ಚಿಟ್ಟುಕೊಂಡಿದ್ದ ನಟಿಯರು ಇದೀಗ ತುಟಿ ಎರಡು ಮಾಡುತ್ತಿದ್ದಾರೆ.

ಸಾಜಿದ್ ಖಾನ್ ಮುಖವಾಡವನ್ನ ಈಗಾಗಲೇ ನಟಿ ಸಲೋನಿ ಛೋಪ್ರಾ, ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ, ನಟಿ ರೇಚಲ್ ವೈಟ್ ಮತ್ತು ನಟಿ ಮಂದನಾ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮಹಿಳೆಯರ ಜೊತೆಗಿನ ಸಾಜಿದ್ ಖಾನ್ ವರ್ತನೆ ಬೇಸರ ತರಿಸುತ್ತೆ ಅಂತ ಬಿಪಾಶಾ ಬಸು ಕೂಡ ಹೇಳಿದ್ದಾರೆ. ಇದೀಗ ಸಾಜಿದ್ ಖಾನ್ ವಿರುದ್ಧ ನಟಿ ಸಿಮ್ರನ್ ಸೂರಿ ಕೂಡ ಸಿಡಿದೆದ್ದಿದ್ದಾರೆ. ಮುಂದೆ ಓದಿರಿ...

'ಹಿಮ್ಮತ್ ವಾಲಾ' ಕಾಸ್ಟಿಂಗ್ ಸಂದರ್ಭ

'ಹಿಮ್ಮತ್ ವಾಲಾ' ಕಾಸ್ಟಿಂಗ್ ಸಂದರ್ಭ

'ಹಿಮ್ಮತ್ ವಾಲಾ' ಚಿತ್ರದ ಕಾಸ್ಟಿಂಗ್ ಸಂದರ್ಭದಲ್ಲಿ ಸಾಜಿದ್ ಖಾನ್ ನಿಂದ ಸಿಮ್ರನ್ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರಂತೆ. ಮನೆಯಲ್ಲೇ ಆಡಿಷನ್ ಮಾಡಿದ ಸಾಜಿದ್ ಖಾನ್, ಸಿಮ್ರನ್ ಬಟ್ಟೆ ಕಳಚಲು ಹೇಳಿದ್ನಂತೆ.

ಅಂದು ಯಾರೂ ನಂಬುತ್ತಿರಲಿಲ್ಲ

ಅಂದು ಯಾರೂ ನಂಬುತ್ತಿರಲಿಲ್ಲ

ಬಟ್ಟೆ ಬಿಚ್ಚಲು ಸಿಮ್ರನ್ ಒಲ್ಲೆ ಎಂದಾಗ, ಸಿಮ್ರನ್ ತೊಟ್ಟಿದ ಬಟ್ಟೆಯನ್ನ ಸಾಜಿದ್ ಖಾನ್ ಕಳಚಿದನಂತೆ. ಈ ಘಟನೆ ಆದ್ಮೇಲೆ, ಸಾಜಿದ್ ಖಾನ್ ಫೋನ್ ನಂಬರ್ ನ ಸಿಮ್ರನ್ ಡಿಲೀಟ್ ಮಾಡಿದ್ದಾರೆ. ''ಅವತ್ತೇ ಈ ಘಟನೆಯನ್ನ ವಿವರಿಸಿದ್ದರೆ ಯಾರೂ ನನ್ನ ಮಾತನ್ನ ನಂಬುತ್ತಿರಲಿಲ್ಲ'' ಎಂದು ಸಿಮ್ರನ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಐದನೇ ಆರೋಪ

ಐದನೇ ಆರೋಪ

ಇದು ಸಾಜಿದ್ ಖಾನ್ ವಿರುದ್ಧ ಕೇಳಿಬರುತ್ತಿರುವ ಐದನೇ ಆರೋಪ. #ಮೀಟೂ ಅಭಿಯಾನದಿಂದ ಬಾಲಿವುಡ್ ನಲ್ಲಿ ಸಾಜಿದ್ ಖಾನ್ ಮಾನ ಮೂರು ಕಾಸಿಗೆ ಹರಾಜಾಗಿದೆ.

ಹೌಸ್ ಫುಲ್-4 ಚಿತ್ರದಿಂದ ಔಟ್

ಹೌಸ್ ಫುಲ್-4 ಚಿತ್ರದಿಂದ ಔಟ್

ತಮ್ಮ ವಿರುದ್ಧ ಆರೋಪಗಳು ಕೇಳಿಬರುತ್ತಿದ್ದಂತೆಯೇ, ನೈತಿಕ ಹೊಣೆ ಹೊತ್ತು 'ಹೌಸ್ ಫುಲ್-4' ಚಿತ್ರದ ನಿರ್ದೇಶಕನ ಸ್ಥಾನದಿಂದ ಸಾಜಿದ್ ಖಾನ್ ಕೆಳಕ್ಕೆ ಇಳಿದಿದ್ದಾರೆ.

More from Filmibeat

English summary
MeToo: Bollywood Actress Simran Suri accuses Director Sajid Khan of sexual Harassment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X