ಸನ್ನಿ ಲಿಯೋನ್ ಗೆ ಕಾಂಪಿಟೇಶನ್ ಕೊಡಲು ಬಂದ ಮತ್ತೊಬ್ಬ ನೀಲಿ ಚಿತ್ರ ತಾರೆ
ನೀಲಿ ಚಿತ್ರಗಳಲ್ಲಿ ನಟಿಸಿ ಹಣ, ಖ್ಯಾತಿ ಗಳಿಸಿದ್ದ ಸನ್ನಿ ಲಿಯೋನ್ ನೀಲಿ ಚಿತ್ರಗಳ ಸಹವಾಸ ಬಿಟ್ಟು ಬಾಲಿವುಡ್ ನಲ್ಲಿ ನೆಲೆ ನಿಲ್ಲಲು ಬಂದರು. ಅದರಲ್ಲಿ ಬಹುತೇಕ ಯಶಸ್ವಿಯೂ ಆದರು.
ನೀಲಿ ಜಗತ್ತಿನಿಂದ ಹೊರಗೆ ಬಂದು ಶುದ್ಧ ನಟಿಯಾಗಬೇಕು ಎಂಬ ಆಸೆಯಿಂದ ಸನ್ನಿ ಲಿಯೋನ್ ಭಾರತಕ್ಕೆ ಬಂದರು. ಬಾಲಿವುಡ್‌ನಲ್ಲಿ ಅವಕಾಶಗಳೂ ಸಹ ದೊರೆಯಿತು, ಆದರೆ ಇಲ್ಲೂ ಸಹ ಅವರ ದೊರೆತಿದ್ದು 'ಸಾಫ್ಟ್ ಪಾರ್ನ್' ನಂಥಹಾ ಪಾತ್ರಗಳೇ.
ಏನೇ ಆಗಲಿ ಸನ್ನಿ ಲಿಯೋನ್ ಈಗ ನೀಲಿ ಚಿತ್ರತಾರೆ ಅಲ್ಲ ಬದಲಿಗೆ ಬಾಲಿವುಡ್ ನಟಿ. ಆದರೆ ಈಗ ಅವರಿಗೆ ಕಾಂಪಿಟೇಶನ್ ಕೊಡಲು ನೀಲಿ ಚಿತ್ರ ಜಗತ್ತಿನಿಂದ ಮತ್ತೊಬ್ಬ ನಟಿ ಬಂದಿದ್ದಾರೆ.
ಮಿಯಾ ಮಾಲ್ಕೊವಾ ಎಂಬ ಬಿಳಿ ತೊಗಲಿನ ನೀಲಿ ಚಿತ್ರಗಳ ನಟಿ ಭಾರತೀಯ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ಇಲ್ಲಿಯೇ ಉಳಿದು ನಟಿಯಾಗುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಅದು ಸಾಧ್ಯವಾಗುತ್ತದೆಯೇ?

ಅಮೆರಿಕದ ಪಾರ್ನ್ ಉದ್ಯಮದಲ್ಲಿ ನಟಿ
ಮಿಯಾ ಮಾಲ್ಕೊವಾ ಫ್ರೆಂಚ್ ಕೆನೆಡಿಯನ್-ಜರ್ಮನ್ ಹಿನ್ನೆಲೆಯುಳ್ಳ ಅಮೆರಿಕನ್ ಪಾರ್ನ್ ಇಂಡಸ್ಟ್ರಿಯ ಪಾರ್ನ್ ನಟಿ. ಈಕೆ ಕ್ಲೈಮ್ಯಾಕ್ಸ್ ಎಂಬ ಸಿನಿಮಾದಲ್ಲಿ ನಟಿಸಿದ್ದು, ಮುಂದೆ ಇನ್ನಷ್ಟು ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಪಾರ್ನ್ ನಟಿಯನ್ನು ಫೀಚರ್ ಸಿನಿಮಾಕ್ಕೆ ತಂದ ಶ್ರೇಯ ರಾಮ್ ಗೋಪಾಲ್ ವರ್ಮಾ ಅವರದ್ದು.

ಗಾಡ್ ಸೆಕ್ಸ್ ಆಂಡ್ ಟ್ರುತ್ ಡಾಕ್ಯುಮೆಂಟರಿ
ಸ್ವತಃ ಮಿಯಾ ಮಾಲ್ಕೊವಾ ಪಾರ್ನ್ ಸಿನಿಮಾಗಳ ಅಭಿಮಾನಿಯಾಗಿರುವ ರಾಮ್ ಗೋಪಾಲ್ ವರ್ಮಾ, ಮೊದಲಿಗೆ 2018 ರಲ್ಲಿ 'ಗಾಡ್ ಸೆಕ್ಸ್ ಆಂಡ್ ಟ್ರುತ್' ಎಂಬ ಪಾರ್ನ್ ಡಾಕ್ಯುಮೆಂಟರಿ ತೆರೆಗೆ ತಂದಿದ್ದರು. ಆದರೆ ಇದು ಹೇಳಿಕೊಳ್ಳುವಂತಹಾ ಹೆಸರು ಗಳಿಸಲಿಲ್ಲ.

ಕ್ಲೈಮ್ಯಾಕ್ಸ್ ಸಿನಿಮಾದ ನಾಯಕಿ ಮಿಯಾ ಮಾಲ್ಕೊವಾ
ಆದರೆ ಈಗ ಮಿಯಾ ಮಾಲ್ಕೊವಾರನ್ನು ಈಗ ಫೀಚರ್ ಫಿಲ್ಮ್ ನ ನಾಯಕಿಯನ್ನಾಗಿ ಪರಿಚಯಿಸಿದ್ದು, 'ಕ್ಲೈಮ್ಯಾಕ್ಸ್' ಎಂಬ ಸಿನಿಮಾವನ್ನು ರಾಮ್‌ಗೋಪಾಲ್ ವರ್ಮಾ ನಿರ್ಮಿಸಿದ್ದಾರೆ. ಈ ಸಿನಿಮಾ ಜೂನ್ 6 ರಂದು ರಾಮ್‌ಗೋಪಾಲ್ ವರ್ಮಾ ಆಪ್ ಮತ್ತು ಆರ್‌ಜಿವಿ ವರ್ಲ್ಡ್ ಎಂಬ ವೆಬ್‌ಸೈಟ್‌ನಲ್ಲಿ ಬಿಡುಗಡೆ ಆಗಲಿದೆ. 100 ರೂಪಾಯಿ ಪಾವತಿಸಿ ಸಿನಿಮಾ ನೋಡಬಹುದಾಗಿದೆ.

ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದೆ
ಈಗಾಗಲೇ ಕ್ಲೈಮ್ಯಾಕ್ಸ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್ ಹಾಟ್ ಆಗಿ ಮಾಲ್ಕೊವಾ ಕಾಣಿಸಿಕೊಂಡಿದ್ದಾರೆ. ದೆವ್ವ ಮತ್ತು ಲೈಂಗಿಕತೆಯ ಕತೆಯನ್ನು ಇದು ಒಳಗೊಂಡಿದೆ ಎಂಬುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.


Click it and Unblock the Notifications











