ಗಂಡನ ಜೊತೆ ಮಲಗಲ್ಲ ಬಿಪಾಶಾ ಬಸು, ಬಾಂಬ್ ಸಿಡಿಸಿದ ಖ್ಯಾತ ಗಾಯಕ..!
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ.
ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ, ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು.ಇದಕ್ಕೆ ಇನ್ನೊಂದು ಉದಾಹರಣೆಯನ್ನು ಮಿಕಾ ಸಿಂಗ್ ಹೇಳಿದ್ದಾರೆ.

ಹೌದು, ತಮ್ಮ ಕಂಠದಿಂದನೇ ಮೋಡಿ ಮಾಡಿರುವ ಮಿಕಾ ಸಿಂಗ್ ತಾವು ಚಿತ್ರ ನಿರ್ಮಾಣಕ್ಕಿಳಿದಾಗ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಬಿಪಾಶಾ ಬಸು ಮತ್ತು ಆಕೆಯ ಗಂಡ ಕರಣ್ ಸಿಂಗ್ ಗ್ರೋವರ್ ನೀಡಿದ ಕಾಟಕ್ಕೆ ತಾವು ಕಂಗಾಲ್ ಆಗಿ ಹೋಗಿದ್ದಾಗಿ ಹೇಳಿದ್ದಾರೆ. ಇನ್ನೆಂದು ನಾನು ಚಿತ್ರ ನಿರ್ಮಾಣ ಮಾಡಬಾರದು ಎನ್ನುವ ತೀರ್ಮಾನಕ್ಕೆ ಬರಲು ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಕಾರಣವೆಂದು ಹೇಳಿದ್ದಾರೆ.
ಕಡಕ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಿಕಾ ಸಿಂಗ್, ಗಾಯಕನಾಗಿ ನಾನು ಖುಷಿಯಾಗಿದ್ದೆ. ಆದರೆ 2020ರಲ್ಲಿ ಚಿತ್ರವನ್ನು ನಿರ್ಮಾಣ ಮಾಡುವ ಆಲೋಚನೆ ನನಗೆ ಬಂತು. ಹಾಗಂಥ ನಾನು ಯಥೇಚ್ಛವಾಗಿ ದುಡ್ಡು ಸುರಿಯಲು ಸುತಾರಾಂ ರೆಡಿಯಿರಲಿಲ್ಲ ಎಂದಿದ್ದಾರೆ. ನಿರ್ಮಾಪಕರ ಕಷ್ಟ ಮತ್ತು ನಷ್ಟದ ಅರಿವು ನನಗೆ ಇದ್ದಿದ್ದರಿಂದ ನಾನು ಕಡಿಮೆ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾದೆ, ಹಾರರ್ ಚಿತ್ರಗಳನ್ನು ಮಾಡಿ ಗೆದ್ದಿರುವ ವಿಕ್ರಂ ಭಟ್ ಅವರ ಬಳಿ ಚಿತ್ರದ ನಿರ್ದೇಶನವನ್ನು ಮಾಡಿಸಲು ಮುಂದಾದೆ ಎಂದಿರುವ ಮಿಕಾ ಸಿಂಗ್ ಆ ನಂತರ ಬಿಪಾಷಾ ಅವರ ಗಂಡ ಕರಣ್ ಸಿಂಗ್ ಗ್ರೋವರ್‌ನ ಆಯ್ಕೆ ಮಾಡಿಕೊಳ್ಳುವ ತೀರ್ಮಾನವನ್ನು ನಾವು ಮಾಡಿದೆವು ಎಂದು ಹೇಳಿದ್ದಾರೆ.
ಕರಣ್ ಸಿಂಗ್ ಗ್ರೋವರ್ ಎದುರು ಹೊಸ ನಾಯಕಿಯನ್ನು ಪರಿಚಯಿಸುವ ಆಸೆ ನನಗೆ ಇತ್ತು, ಆದರೆ ಈ ಸಮಯದಲ್ಲಿ ಬಿಪಾಶಾ ಬಸು ನಾಯಕಿಯ ಪಾತ್ರವನ್ನು ತಾವು ಮಾಡುವುದಾಗಿ ಹಠ ಮಾಡಿದರು. ಒತ್ತಾಯ ಮಾಡಿದರು ಎಂದಿರುವ ಮಿಕಾ ಸಿಂಗ್ ಇಬ್ಬರ ಸಂಭಾವನೆ ನನ್ನ ಬಜೆಟ್‌ನಲ್ಲಿತ್ತು ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರು ಗಂಡ ಹೆಂಡ್ತಿಯಾದ ಕಾರಣ ತೆರೆಯ ಮೇಲೆ ಜೋಡಿ ಚೆನ್ನಾಗಿ ಕಾಣುತ್ತೆ ಎಂದುಕೊಂಡು ನಾನು ಒಪ್ಪಿಕೊಂಡೆ ಎಂದು ಹೇಳಿದ್ದಾರೆ. ನನ್ನ ಬದುಕಿನ ಅತ್ಯಂತ ತಪ್ಪು ನಿರ್ಧಾರ ಇದಾಗಿತ್ತು ಎಂದು ಹೇಳಿದ್ದಾರೆ.
ಚಿತ್ರದ ಚಿತ್ರೀಕರಣ ಆರಂಭವಾದ ನಂತರ ಇಬ್ಬರು ಕಾಡಲು ನನಗೆ ಶುರು ಮಾಡಿದರು ಎಂದಿರುವ ಮಿಕಾ ಸಿಂಗ್ ಚಿತ್ರದ ಚಿತ್ರೀಕರಣಕ್ಕೆ ನಾನು ಇಲ್ಲಿಂದ 50 ಜನರನ್ನು ಕರೆದುಕೊಂಡು ಹೋಗಿದ್ದೆ ಆದರೆ ನನ್ನ ಹಣೆಬರಹಕ್ಕೆ ನಾವು ಒಂದು ತಿಂಗಳು ಎಂದುಕೊಂಡು ಹೋಗಿದ್ದೇವು ಆದರೆ ಅಲ್ಲಿ ಎರಡು ತಿಂಗಳಾಯ್ತು ಎಂದಿದ್ದಾರೆ. ಇನ್ನು ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಗಂಡ ಹೆಂಡ್ತಿಯಾದ ಕಾರಣ ನಾನು ಹೊಟೇಲ್‌ನಲ್ಲಿ ಇಬ್ಬರಿಗೂ ಒಂದೇ ರೂಮ್ ಬುಕ್ ಮಾಡಿದ್ದೆ ಎಂದಿರುವ ಮಿಕಾ ಸಿಂಗ್ ಗಂಡ ಹೆಂಡತಿಯಾದರೂ ಒಂದೇ ರೂಮ್‌ನಲ್ಲಿ ಮಲಗದ ಇಬ್ಬರು ಪ್ರತೈಕವಾದ ರೂಮ್ ಬೇಕೆಂದು ಬೇಡಿಕೆಯನ್ನು ಇಟ್ಟರು ಎಂದಿದ್ದಾರೆ. ಈ ಹೊಟೇಲ್ ಚೆನ್ನಾಗಿಲ್ಲ ನಮಗೆ ಬೇರೆ ಹೋಟೆಲ್‌ನಲ್ಲಿ ರೂಮ್ ವ್ಯವಸ್ಥೆ ಮಾಡಿಕೊಡಬೇಕೆಂದು ಪೀಡಿಸಲು ಶುರು ಮಾಡಿದರು ಎಂದಿದ್ದಾರೆ. ಇಷ್ಟೇ ಅಲ್ಲ ಮೊದಲೇ ಮಾಡಿಕೊಂಡ ಕಾಂಟ್ರ್ಯಾಕ್ಟ್‌ನಲ್ಲಿ ಲಿಪ್ ಲಾಕ್ ಸನ್ನಿವೇಶ ಚಿತ್ರದಲ್ಲಿದೆ ಎಂದು ನಾವು ನಮೂದಿಸಿದ್ವಿ ಆಗ ಒಪ್ಪಿಕೊಂಡ ಇಬ್ಬರು ಆ ನಂತರ ಗಂಡ ಹೆಂಡ್ತಿಯಾದರು ಕೂಡ ಲಿಪ್ ಲಾಕ್ ಸನ್ನಿವೇಶವನ್ನು ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಂತಿದ್ದರು ಎಂದು ಕೂಡ ಮಿಕಾ ಸಿಂಗ್ ಹೇಳಿದ್ದಾರೆ.
ಮುಂದುವರೆದು ನಿರ್ಮಾಪಕನಾಗಿ ನಾನು ಇದೆಲ್ಲವನ್ನೂ ಸಹಿಸಿಕೊಂಡೇ ಬಂದೆ ಎಂದಿರುವ ಮಿಕಾ ಸಿಂಗ್ ಚಿತ್ರದ ಡಬ್ಬಿಂಗ್ ಸಮಯದಲ್ಲಿ ರಾಗ ಎಳೆಯಲು ಇಬ್ಬರು ಶುರು ಮಾಡಿದರು ಎಂದಿದ್ದಾರೆ. ದಿನ ನಿತ್ಯ ನಾವು ಅಲ್ಲಿ ಇವರಿಗಾಗಿ ಕಾಯುತ್ತಿದ್ದರೆ ಇವರು ಫೋನ್ ಮಾಡಿ ಗಂಟಲು ಸಮಸ್ಯೆ, ಆ ಸಮಸ್ಯೆ ಈ ಸಮಸ್ಯೆಯೆಂದು ದಿನಕ್ಕೊಂದು ನೆಪ ಹೇಳಲು ಶುರು ಮಾಡಿದ್ದರು ಎಂದು ಹೇಳಿದ್ದಾರೆ. ಇವರ ಈ ವರ್ತನೆಗಳಿಂದ ನನಗೆ ಜೀವನದಲ್ಲಿ ಜಿಗುಪ್ಸೆ ಬಂದಂತೆ ಆಗಿತ್ತು ಎಂದು ಹೇಳಿದ್ದಾರೆ. ಚಿತ್ರವನ್ನು ಬಿಡುಗಡೆ ಮಾಡಿದರೆ ಸಾಕು ಎಂದು ನನಗೆ ಅನ್ಸಿತ್ತು ಎಂದು ಹೇಳಿದ್ದಾರೆ. ಅಂದ್ಹಾಗೇ ಮಿಕಾ ಸಿಂಗ್ ನಿರ್ಮಾಣದ ಈ ಚಿತ್ರದ ಹೆಸರು ಡೆಂಜರಸ್. ಚಿತ್ರಮಂದಿರಕ್ಕೆ ಬಾರದ ಈ ಚಿತ್ರ ನೇರವಾಗಿ MX ಪ್ಲೇಯರ್‌ನಲ್ಲಿ ತೆರೆಗೆ ಬಂದಿತ್ತು.


Click it and Unblock the Notifications