ಖ್ಯಾತ ಗಾಯಕ ಮಿಕಾ ಸಿಂಗ್ ಮನೆಯಲ್ಲಿ ಕಳ್ಳತನ: ಚಿನ್ನಾಭರಣ, ಹಣ ಲೂಟಿ

By Harshitha

ಬಾಲಿವುಡ್ ನಟ ಅಮರೀಶ್ ಪುರಿ ತಂಗಿ ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ನಿನ್ನೆಯಷ್ಟೇ ಸುದ್ದಿ ಆಗಿತ್ತು. ಇದೀಗ ಅದೇ ಬಾಲಿವುಡ್ ಲೋಕದ ಖ್ಯಾತ ಗಾಯಕ ಮಿಕಾ ಸಿಂಗ್ ಮನೆಯಲ್ಲಿ ದರೋಡೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಂಬೈನಲ್ಲಿ ಇರುವ ಮಿಕಾ ಸಿಂಗ್ ಮನೆಯಲ್ಲಿ ಜುಲೈ 29 ರಂದು ಕಳ್ಳತನ ನಡೆದಿದೆ. ಒಂದು ಲಕ್ಷ ರೂಪಾಯಿ ನಗದು ಹಾಗೂ ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕೊಳ್ಳೆ ಹೊಡೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಿಕಾ ಸಿಂಗ್ ಮ್ಯಾನೇಜರ್ Oshiwara ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಅನ್ವಯ ಎಫ್.ಐ.ಆರ್ ದಾಖಲಾಗಿದೆ. ಮಿಕಾ ಸಿಂಗ್ ಗೆ ಪರಿಚಯ ಇದ್ದ ಅಂಕಿತ್ ಎಂಬುವರೇ ಕಳ್ಳತನ ಎಸಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

Mika Singhs Mumbai house robbed, Jewellery and Cash stolen

ಪ್ರಕರಣದ ಸಂಬಂಧ ಮಿಕಾ ಮನೆಯ ಸಿಸಿಟಿವಿ ಫುಟೇಜ್ ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ಫುಟೇಜ್ ನಲ್ಲಿ, ಮಿಕಾ ಸಿಂಗ್ ಮನೆಯೊಳಗೆ ಅಂಕಿತ್ ಹೋಗಿ ಬರುವುದು ಸೆರೆ ಆಗಿದೆ. ಇದಲ್ಲದೇ, ಸದ್ಯ ಅಂಕಿತ್ ನಾಪತ್ತೆ ಆಗಿರುವುದರಿಂದ ಅವರ ಮೇಲೆ ಪೊಲೀಸರಿಗೆ ಡೌಟ್ ಬಂದಿದೆ.

ಕಳ್ಳತನ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆದಿದ್ದು, ಅಂದಿನಿಂದ ಅಂಕಿತ್ ನ ಹುಡುಕಲು ಮಿಕಾ ಸಿಂಗ್ ಪ್ರಯತ್ನ ಪಡುತ್ತಿದ್ದಾರೆ. ಆದ್ರೆ, ಅಂಕಿತ್ ಪತ್ತೆ ಆಗಿಲ್ಲ. ಆಗಾಗ ಮಿಕ್ ಸಿಂಗ್ ಮನೆಗೆ ಅಂಕಿತ್ ಬಂದು-ಹೋಗುತ್ತಿದ್ದರಿಂದ, ಸೆಕ್ಯೂರಿಟಿ ಕೂಡ ಅವರನ್ನ ತಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಐಪಿಸಿ ಸೆಕ್ಷನ್ 381 ರ ಪ್ರಕಾರ, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿ, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

More from Filmibeat

English summary
Bollywood Singer Mika Singh's Mumbai house robbed, Jewellery and Cash stolen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X