Mike Tyson: 'ಲೈಗರ್' ಚಿತ್ರತಂಡಕ್ಕೆ ನಾನು ಗ್ರೇಟ್ ಫುಲ್ ಎಂದ ಮೈಕ್ ಟೈಸನ್, ಇಲ್ಲಿದೆ ಕಾರಣ!

ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. 'ಲೈಗರ್' ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ವಿಜಯ್ ದೇವರಕೊಂಡ ಸದ್ಯ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿದ್ದು, ಅದರಲ್ಲಿ ಒಂದು 'ಕಿಂಗ್ ಆಫ್ ದಿ ರಿಂಗ್', ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ 'ಲೈಗರ್' ಸಿನಿಮಾದಲ್ಲಿ ಒಂದು ಗೆಸ್ಟ್ ರೋಲ್ ಪ್ಲೇ ಮಾಡುತ್ತಿದ್ದಾರೆ.

ಪ್ರಥಮ ಬಾರಿಗೆ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರೋ ಟೈಸನ್ ಪಾತ್ರ ಚಿಕ್ಕದ್ದೇ ಆದರೂ, ಅದರ ತೂಕ ತುಂಬಾ ಹೆಚ್ಚಿದೆ. ಕಳೆದ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಮೈಕ್ ಟೈಸನ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿವೀಲ್ ಮಾಡಿದೆ. ಮೈಕ್ ಟೈಸನ್ ಲುಕ್ ಸಖತ್ ವೈರಲ್ ಕೂಡ ಆಗಿತ್ತು. ಇದೀಗ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ರಿಲೀಸ್‌ಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಜೊತೆಗೆ ಒಬ್ಬೊರಾಗೇ ಚಿತ್ರದ ಡಬ್ಬಿಂಗ್ ಕಂಪ್ಲೀಟ್ ಮಾಡುತ್ತಿದ್ದು, ಮೈಕ್ ಟೈಸನ್ ಕೂಡ ತನ್ನ ಭಾಗದ ಸೀನ್‌ಗಳನ್ನು ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.

ಭಾಷೆ ಬಾರದಿದ್ದರೂ ತನ್ನ ಪಾತ್ರಕ್ಕೆ ಸ್ವತಃ ಮೈಕ್ ಟೈಸನ್ ವಾಯ್ಸ್ ಡಬ್ ಮಾಡಿದ್ದಾರೆ. ಇದಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡ ಮಾಡಿಕೊಂಡಿದ್ದರಂತೆ. ಮೊದಲೇ ಡೈಲಾಗ್‌ಗಳನ್ನು ಇಂಗ್ಲಿಷ್‌ನಲ್ಲಿ ಬರೆದಿಟ್ಟುಕೊಂಡು ಡಬ್ಬಿಂಗ್‌ಗೆ ಮೂರು ದಿನದ ಮೊದಲೇ ಪ್ರ್ಯಾಕ್ಟೀಸ್ ಮಾಡಿದ್ದಾರಂತೆ. ಕೊನೆಗೂ ಇಂದು (ಏಪ್ರಿಲ್ 03) ಡಬ್ಬಿಂಗ್ ಅನ್ನು ಸಕ್ಸಸ್‌ಫುಲ್‌ ಮಾಡಿ ಮುಗಿಸಿರುವ ಮೈಕ್ ಟೈಸನ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕೊನೆಗೂ ನನ್ನ ಜವಾಬ್ದಾರಿಯನ್ನು ಮುಗಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Mike Tyson wraps up dubbing for Vijay Deverakondas Liger

'ಲೈಗರ್' ಚಿತ್ರ ಆರಂಭವಾದಾಗಿನಿಂದಲೂ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿದೆ. ಹಾಗೇ ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ಕೂಡ ಆಗಿರೋದರಿಂದ ನಿರೀಕ್ಷೆ ಇನ್ನೂ ಹೆಚ್ಚಿದೆ. ಜೊತೆಗೆ ಚಿತ್ರದಲ್ಲಿ ದೊಡ್ಡ ದೊಡ್ಡ ತಾರಾಗಣವೇ ಇದ್ದು ಮೈಕ್ ಟೈಸನ್ ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರೋದು ವಿಶೇಷ. ಈ ಹಿಂದೆ ರಿಲೀಸ್ ಆಗಿದ್ದ ಪೋಸ್ಟರ್‌ನಲ್ಲಿ ಟೈಸನ್ ರಗಡ್ ಆಗಿ ಕಾಣಿಸಿಕೊಂಡಿದ್ದರು. ಕೈನಲ್ಲಿ ಬೆಂಕಿ ಚೆಂಡು, ಕಪ್ಪು ಸೂಟ್ ಧರಿಸಿಕೊಂಡಿರುವ ಮೈಕ್ ಟೈಸನ್ ಡಿಫರೆಂಟ್ ಲುಕ್‌ನಲ್ಲಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ರು. ತನ್ನ ಬಾಕ್ಸಿಂಗ್ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮತ್ತು ಹೆಸರು ಸಂಪಾದಿಸಿರುವ ಮೈಕ್ ಟೈಸನ್ ಲೈಗರ್ ಚಿತ್ರದ ಕ್ಲೈಮ್ಯಾಕ್ಸ್ ಸೀನ್‌ನಲ್ಲಷ್ಟೆ ಕಾಣಿಸಿಕೊಳ್ಳಲಿದ್ದಾರೆ. ಒಂದೆರೆಡು ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ಮೈಕ್ ಟೈಸನ್ ದೊಡ್ಡ ಮೊತ್ತವನ್ನೆ ಜೇಬಿಗಿಳಿಸಿಕೊಂಡಿದ್ದಾರೆ.

Mike Tyson wraps up dubbing for Vijay Deverakondas Liger

ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಬಾಲಿವುಡ್ ನಟಿ ಅನನ್ಯ ಪಾಂಡೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಹಿಂದಿ ಹಾಗೂ ತೆಲುಗಿನ ಜೊತೆಗೆ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲೂ ತೆರೆ ಕಾಣಲಿದೆ. ವಿಜಯ್​ ದೇವರಕೊಂಡ ಅಭಿನಯದ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ ಇದಾಗಿದೆ. ಪೂರಿ ಜಗನ್ನಾಥ್, ಚಾರ್ಮಿ ಮತ್ತು ಧರ್ಮಾ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿರುವ ಚಿತ್ರವಿದು. 'ಲೈಗರ್' ಸಿನಿಮಾಗೆ ಮೊದಲು ಫೈಟರ್ ಎಂದು ಟೈಟಲ್ ಇಡಲಾಗಿತ್ತು. ಆದರೆ ಹೃತಿಕ್ ರೋಷನ್ ಅಭಿನಯದ ಚಿತ್ರಕ್ಕೆ ಈ ಹೆಸರನ್ನು ಇಟ್ಟಿದ್ದರಿಂದ, ಪೂರಿ ಜಗನ್ನಾಥ್ ಈ ಸಿನಿಮಾಗೆ 'ಲೈಗರ್' ಎಂದು ಟೈಟಲ್ ಫಿಕ್ಸ್ ಮಾಡಿದ್ದರು.

More from Filmibeat

English summary
Mike Tyson will be seen playing a very important role in the film. The latest update is Mike Tyson has completed dubbing for the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X