For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದಂದು ಬೀಚ್‌ನಲ್ಲಿ ಬೆತ್ತಲಾಗಿ ಓಡಿದ ಬಾಲಿವುಡ್ ನಟ!

  |

  ಬಾಲಿವುಡ್ ಖ್ಯಾತ ನಟ, ಚಿರಯುವಕ ಮಿಲಿಂದ್ ಸೋಮನ್ ಹುಟ್ಟಹಬ್ಬ ಇಂದು (ನವೆಂಬರ್ 04). ತಮ್ಮ 55 ನೇ ವರ್ಷದ ಹುಟ್ಟುಹಬ್ಬವನ್ನು ಬಹಳಾ 'ಭಿನ್ನ'ವಾಗಿ ಆಚರಿಸಿಕೊಂಡಿದ್ದಾರೆ ಮಿಲಿಂದ್.

  ವರ್ಷ 55 ಆದರೂ ಚಿರಯುವಕನಂತೆ ಓಡುವ, ದೈಹಿಕ ಕಸರತ್ತು ಮಾಡುವ ಮಿಲಿಂದ್ ಸೋಮನ್, ಹುಟ್ಟುಹಬ್ಬದಂದು ಬೀಚ್‌ ನಲ್ಲಿ ಓಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  ಮಿಲಿಂದ್ ಓಡುತ್ತಿರುವ ಚಿತ್ರ ವೈರಲ್ ಆಗಲು ಕಾರಣ, ಅವರು ಯಾವುದೇ ಬಟ್ಟೆ ಧರಿಸದೆ, ನಗ್ನವಾಗಿ ಬೀಚ್‌ನಲ್ಲಿ ಓಡುತ್ತಿದ್ದಾರೆ. ಆ ಚಿತ್ರವನ್ನು ಅವರ ಪತ್ನಿ ಅಂಕಿತಾ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

  ನಗ್ನವಾಗಿ ಸಮುದ್ರದಲ್ಲಿ ಓಡಿದ ಮಿಲಿಂದ್ ಸೊಮನ್

  ನಗ್ನವಾಗಿ ಸಮುದ್ರದಲ್ಲಿ ಓಡಿದ ಮಿಲಿಂದ್ ಸೊಮನ್

  ನಗ್ನವಾಗಿ ಸಮುದ್ರ ಕಿನಾರೆಯಲ್ಲಿ ಓಡುತ್ತಿರುವ ತಮ್ಮದೇ ಚಿತ್ರವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಮಿಲಿಂದ್ ಸೋಮನ್, 'ನನಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. ಮಿಲಿಂದ್ ನಗ್ನ ಚಿತ್ರ ಹಂಚಿಕೊಂಡಿದ್ದಕ್ಕೆ ಕೆಲವರು ಸಿಟ್ಟಾಗಿದ್ದರೆ, ಇನ್ನು ಕೆಲವು ಸಾಮಾನ್ಯವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

  ಗೋವಾದಲ್ಲಿರುವ ಮಿಲಿಂದ್-ಅಂಕಿತಾ

  ಗೋವಾದಲ್ಲಿರುವ ಮಿಲಿಂದ್-ಅಂಕಿತಾ

  ಅಂಕಿತಾ ಹಾಗೂ ಮಿಲಿಂದ್ ಗೋವಾದಲ್ಲಿ ಇದ್ದಾರೆ. ಅಂಕಿತಾ ಸಹ ಮಿಲಿಂದ್ ಹಾಗೂ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದು, 'ನನ್ನ ಆತ್ಮ ಹಾಗೂ ಹೃದಯವನ್ನು ಹೊಂದಿರುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ, ನಾನು ಬದುಕಿರುವವರೆಗೆ ನಿನ್ನನ್ನು ಪ್ರೀತಿಸುವೆ, ನಿನ್ನೊಂದಿಗೆ ಪ್ರತಿದಿನವೂ ಆಚರಣೆಯೇ' ಎಂದಿದ್ದಾರೆ.

  ಬೆಂಗಳೂರು ಮ್ಯಾರಥಾಮ್‌ನಲ್ಲಿ ಅತಿಥಿ ಓಟಗಾರ

  ಬೆಂಗಳೂರು ಮ್ಯಾರಥಾಮ್‌ನಲ್ಲಿ ಅತಿಥಿ ಓಟಗಾರ

  ಅಂಕಿತಾ ಹಾಗೂ ಮಿಲಿಂದ್ ಇಬ್ಬರೂ ಸಹ ಅದ್ಭುತ ಓಟಗಾರರು, ಇಬ್ಬರೂ ಇಂದು 12 ಕಿ.ಮೀ ಗೋವಾದ ಬೀಚ್‌ನಲ್ಲಿ ಓಡಿದ್ದಾರಂತೆ. ಮಿಲಿಂದ್ ದೇಶದ ವಿವಿಧ ನಗರಗಳಲ್ಲಿ ನಡೆವ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಅತಿಥಿ ಓಟಗಾರರಾಗಿ ಭಾಗವಹಿಸುತ್ತಾರೆ. ಬೆಂಗಳೂರಿನಲ್ಲೂ ಸಹ.

  26 ವರ್ಷ ಕಿರಿಯ ಯುವತಿಯನ್ನು ಮದುವೆಯಾಗಿರುವ ಮಿಲಿಂದ್

  26 ವರ್ಷ ಕಿರಿಯ ಯುವತಿಯನ್ನು ಮದುವೆಯಾಗಿರುವ ಮಿಲಿಂದ್

  ಇನ್ನು ಮಿಲಿಂದ್ ಹಾಗೂ ಅಂಕಿತಾ ವಿವಾಹ ತುಸು ವಿವಾದ ಎಬ್ಬಿಸಿತ್ತು. ಮಿಲಿಂದ್ ಸೋಮನ್ ತನಗಿಂದ 26 ವರ್ಷ ಕಡಿಮೆ ವಯಸ್ಸಿನ ಅಂಕಿತಾರನ್ನು ಮದುವೆಯಾಗಿದ್ದಾರೆ. ಅಂಕಿತಾಗೆ 26 ವರ್ಷ ವಯಸ್ಸಾಗಿದ್ದಾಗ 56 ವರ್ಷದ ಮಿಲಿಂದ್ ಅವರನ್ನು ಮದುವೆಯಾಗಿದ್ದರು.

  English summary
  Actor Milind Soman running naked on Goa beach picture went viral on social media. He posted picture of him running naked.
  Wednesday, November 4, 2020, 14:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X