ನನ್ನ ಬೆತ್ತಲೆ ಚಿತ್ರವನ್ನು ಕ್ಲಿಕ್ಕಿಸಿದ್ದು ನನ್ನ ಪತ್ನಿಯೇ: ಮಿಲಿಂದ್ ಸೋಮನ್

ವಿವಾದ ಎಬ್ಬಿಸಿದ್ದ ತಮ್ಮ ಬೆತ್ತಲೆ ಚಿತ್ರದ ಬಗ್ಗೆ ಮೊದಲ ಬಾರಿಗೆ ನಟ ಮಿಲಿಂದ್ ಸೋಮನ್ ಮಾತನಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದು ಬೆತ್ತಲೆಯಾಗಿ ಬೀಚ್‌ನಲ್ಲಿ ಓಡಿ ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಆ ಚಿತ್ರ ಅದೇಕೆ ಅಷ್ಟು ವಿವಾದ ಎಬ್ಬಿಸಿತೊ ಗೊತ್ತಿಲ್ಲ. ಜನ ಈ ಮೊದಲು ಯಾರನ್ನೂ ಬೆತ್ತಲೆಯಾಗಿ ನೋಡಿಲ್ಲವಾ ಹೇಗೆ?' ಎಂದಿದ್ದಾರೆ ಮಿಲಿಂದ್.

'99% ಮಂದಿ ನನ್ನ ಬೆತ್ತಲೆ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಕೆಲವರಿಗೆ ಆ ಚಿತ್ರ ಶಾಕ್ ತಂದಿದೆ. ವಿಶೇಷವಾಗಿ 'ಸಾಮಾಜಿಕ ಜಾಲತಾಣ ಸಂಸ್ಕೃತಿ'ಗೆ ಹೊಸದಾಗಿ ಪರಿಚಯವಾಗಿರುವವರಿಗೆ ಆ ಚಿತ್ರ 'ಡಿಸ್ಟರ್ಬಿಂಗ್' ಎನಿಸಿರಬಹುದು' ಎಂದಿದ್ದಾರೆ ಮಿಲಿಂದ್ ಸೋಮನ್.

Milind Soman Talked About His Beach Photo Which Created Issue

'ನನ್ನ ಚಿತ್ರ ನೋಡಿ ತಕರಾರು ತೆಗೆಯುತ್ತಿರುವವರು ಇನ್‌ಸ್ಟಾಗ್ರಾಂ ನಲ್ಲಿ ಹೋಗಿ 'ನೂಡ್' ಹ್ಯಾಷ್‌ಟ್ಯಾಗ್ ಟೈಪ್ ಮಾಡಲಿ ಲಕ್ಷಾಂತರ ಬೆತ್ತಲೆ ಚಿತ್ರಗಳು ಸಿಗುತ್ತವೆ. ಬೆತ್ತಲೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಹೊಸದೇನೂ ಅಲ್ಲ' ಎಂದಿದ್ದಾರೆ ಮಿಲಿಂದ್ ಸೋಮನ್.

'ನನ್ನ ಆ ಬೆತ್ತಲೆ ಚಿತ್ರವನ್ನು ಕ್ಲಿಕ್ಕಿಸಿದ್ದು ನನ್ನ ಪತ್ನಿ ಅಂಕಿತಾ. ಫೊಟೊಗ್ರಾಫರ್ ಅಥವಾ ಯಾವುದೇ ಸುದ್ದಿ ಪತ್ರಿಕೆಯ ಪತ್ರಕರ್ತರಲ್ಲ' ಎಂದಿದ್ದಾರೆ ಮಿಲಿಂದ್ ಸೋಮನ್. ಪತ್ನಿ ಅಂಕಿತಾ, ಮಿಲಿಂದ್ ಗೆ ವಯಸ್ಸಿನಲ್ಲಿ 25 ವರ್ಷ ಅಂತರ. ಇದೂ ಸಹ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

Recommended Video

ಪ್ರಶಾಂತ್ ನೀಲ್ ಹೇಳಿದ ಸುಳ್ಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟ ರವಿ ಬಸ್ರೂರ್

ಮಿಲಿಂದ್ ಸೋಮನ್ ಹಂಚಿಕೊಂಡಿದ್ದ ಬೆತ್ತಲೆ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಚಿತ್ರದ ವಿರುದ್ಧ ದೂರು ಸಹ ನೀಡಲಾಗಿತ್ತು. ಮಿಲಿಂದ್ ಗೂ ಮುನ್ನಾ ನಟಿ ಪೂನಂ ಪಾಂಡೆ ಗೋವಾದ ಬೀಚ್‌ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಈ ಎರಡೂ ಘಟನೆಗಳನ್ನು ತಳುಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಲಾಯಿತು.

More from Filmibeat

English summary
Actor, model Milind Soman talked about his beach photo which created issue. He said some people get shocked by my photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X