ಆಹಾ, ಹಾಲಿನಂತಹ ಮೈಬಣ್ಣ ; ತಮನ್ನಾ ಬಗ್ಗೆ 69ನೇ ವಯಸ್ಸಿನ ನಟನ ಬಾಯಲ್ಲಿ ಇದೆಂಥಾ ಅಸಹ್ಯ ಮಾತು

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.

ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ದ್ವೇಷವನ್ನು ಬಿತ್ತುವಲ್ಲಿ ಕೂಡ ಮಾತು ಪ್ರಮುಖ ಪಾತ್ರ ವಹಿಸುತ್ತಿದೆ.ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬಂತೆ ವಿವಾದಕ್ಕೆ ಕೂಡ ಮಾತನಾಡುವ ಮಾತುಗಳು ಕಾರಣವಾಗುತ್ತಿವೆ. ದುರಂತ ಅಂದರೆ ಹಿರಿಯರಿಗೆ ಕೂಡ ತಮ್ಮ ಮಾತಿನ ಮೇಲೆ ಈಗೀಗ ನಿಗಾ ಇರುವುದಿಲ್ಲ. ಹಿರಿಯ ಎಂಬ ಕನಿಷ್ಠ ಪ್ರಜ್ಞೆಯೂ ಇರಲ್ಲ. ಉದಾಹರಣೆಗೆ ''ಅಣ್ಣು ಕಪೂರ್''.

MILKY BODY UPROAR Annu Kapoor Slammed For Lewd Tamannaah Bhatia Remark

ಹೌದು, ಅನು ಕಪೂರ್.. ಹೇಳಿಕೊಳ್ಳಲು ಬಾಲಿವುಡ್‌ನ ಹಿರಿಯ ನಟ. ''ಮಿಸ್ಟರ್ ಇಂಡಿಯಾ''.. ''ಘಾಯಲ್''.. ''ಡರ್''.. ''ಕಾಲಾಪಾನಿ''.. ''ರೇನ್‌ಕೋಟ್''.. ''ಐತರಾಜ್''.. ''7 ಖೂನ್ ಮಾಫ್''.. ''ವಿಕ್ಕಿ ಡೋನರ್''.. ''ದಿ ಶೌಕಿನ್ಸ್‌''.. ''ಜಾಲಿ ಎಲ್‌ಎಲ್‌ಬಿ-2'' ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರತಿಭಾವಂತ ಕಲಾವಿದ. ಅದರಲ್ಲಿ ದೂಸ್ರಾ ಮಾತಿಲ್ಲ.

ಆದರೆ ಇಂಥಾ ಅನು ಕಪೂರ್‌ಗೆ ಈಗ ವಯಸ್ಸು 69. ಆದರೂ ಕೂಡ ಮಾತುಗಳ ಮೇಲೆ ಹಿಡಿತ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಸದ್ಯ ತಮನ್ನಾ ಅವರ ದೇಹದ ಬಗ್ಗೆ ಅನು ಕಪೂರ್ ಮಾತನಾಡಿದ್ದಾರೆ. ಜನರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದಾರೆ.

ಹೌದು ಅಸಲಿಗೆ ಶುಭಂಕರ್ ಮಿಶ್ರಾ ಅವರಿಗೆ ಅನು ಕಪೂರ್ ಸಂದರ್ಶನ ನೀಡಿದ್ದಾರೆ. ಇದೇ ಸಮಯದಲ್ಲಿ ಶುಭಂಕರ್ ಮಿಶ್ರಾ ತಮನ್ನಾ ಅವರ ''ಆಜ್ ಕೀ ರಾತ್'' ಹಾಡಿನ ಪ್ರಸ್ತಾಪ ಮಾಡಿದ್ದಾರೆ. ಆಗ ಅನು ಕಪೂರ್ "ಮಾಶಲ್ಲಾಹ್ ಕ್ಯಾ ದುಧಿಯಾ ಬದನ್ ಹೈ (ಓ ದೇವರೇ, ಅವಳು ಎಂಥಾ ಹಾಲಿನಂತ ದೇಹ ಹೊಂದಿದ್ದಾರೆ) ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲ ಮುಂದುವರೆದು ''ಆಜ್‌ ಕೀ ರಾತ್‌'' ಹಾಡನ್ನು ನೋಡಿ ಚಿಕ್ಕಮಕ್ಕಳು ಕೂಡ ನಿದ್ರೆ ಮಾಡುತ್ತಾರೆ ಎಂದು ತಮನ್ನಾ ಈ ಹಿಂದೆ ಹೇಳಿದ್ದ ಮಾತನ್ನು ಶುಭಂಕರ್ ಮಿಶ್ರಾ ಉಲ್ಲೇಖಿಸಿದಾಗ, ಯಾವ ವಯಸ್ಸಿನ ಮಕ್ಕಳು ಮಲಗುತ್ತಾರೆ? 70 ವರ್ಷ ವಯಸ್ಸಿನವರು ಕೂಡ ಮಗು ಆಗಿರಬಹುದು. ನಾನಾಗಿದ್ದರೆ ಈ ಪ್ರಶ್ನೆಯನ್ನು ಅವಳಿಗೆ ಕೇಳುತ್ತಿದ್ದೆ ಎಂದು ಹೇಳಿದ್ದಾರೆ.

MILKY BODY UPROAR Annu Kapoor Slammed For Lewd Tamannaah Bhatia Remark

ಆ ನಂತರ ತನ್ನ ಹಾಡಿನಿಂದ.. ತನ್ನ ಹಾಲಿನಂತಹ ಮುಖ ಮತ್ತು ಹಾಲಿನಂತಹ ದೇಹದಿಂದ.. ಮಕ್ಕಳನ್ನು ನನ್ನ ಸಹೋದರಿ ನಿದ್ದೆ ಮಾಡಿಸುತ್ತಿದ್ದಾಳೆ ಅಂದರೆ ಅದಕ್ಕಿಂತ ಸಂತೋಷ ಎಲ್ಲಿದೆ ಎಂದು ಹೇಳಿರುವ ಅನು ಕಪೂರ್ ನಮ್ಮ ಮಕ್ಕಳು ರಾತ್ರಿ ನೆಮ್ಮದಿಯ ನಿದ್ದೆ ಮಾಡುವುದು ಈ ದೇಶಕ್ಕೆ ದೊಡ್ಡ ಆಶೀರ್ವಾದ. ಅವಳಿಗೆ ಬೇರೆ ಬೇರೆ ಆಸೆಗಳಿದ್ದರೆ ದೇವರು ಆಕೆಗೆ ಆ ಆಸೆಗಳನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯ ನೀಡಲಿ ಎಂದು ನಾನು ಆಶೀರ್ವಾದ ಮಾಡುತ್ತೇನೆ ಎಂದಿದ್ದಾರೆ.

ಅನು ಕಪೂರ್ ಅವರ ಈ ಮಾತುಗಳು ಈಗ ಹಲವರನ್ನು ಕೆರಳಿಸಿವೆ. ಅನೇಕರು ಅಸಹ್ಯ.. ಅಶ್ಲೀಲ.. ಅಸಭ್ಯ ಮಾತುಗಳನ್ನಾಡಲು ನಾಚಿಕೆಯಾಗಲ್ವಾ ಎಂದು ತಪರಾಕಿ ಹಾಕುತ್ತಿದ್ದಾರೆ. ನಿಮ್ಮ ಮಗಳ ವಯಸ್ಸಿನ ನಟಿಯ ಕುರಿತು ಈ ರೀತಿ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ ಎನ್ನುತ್ತಿದ್ದಾರೆ. ವಯಸ್ಸಾಗಿದೆ ಗೌರವದಿಂದ ಬದುಕುವುದನ್ನು ಕಲಿಯಿರಿ ಎಂದು ಕೂಡ ಅನು ಕಪೂರ್ ಅವರಿಗೆ ಮಂಗಳಾರತಿಯನ್ನು ಹಲವರು ಮಾಡುತ್ತಿದ್ದಾರೆ. ಅನು ಕಪೂರ್ ಅವರ ಈ ಮಾತುಗಳಿಗೆ ತಮನ್ನಾ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The controversial 'milky body' comment has landed Annu Kapoor in hot water. Netizens slam the veteran actor, calling the remark "Ashleel" (lewd).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X