For Quick Alerts
  ALLOW NOTIFICATIONS  
  For Daily Alerts

  ನನ್ನ ಮೇಲೆ ಹಣ ಕದ್ದ ಆರೋಪ ಹೊರಿಸಲಾಗಿತ್ತು: ನಟಿ ಮಿನಿಷಾ ಲಂಬಾ

  |

  ಯಾವುದೇ ಗಾಡ್‌ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದ ನಟಿ ಮಿನಿಷಾ ಲಂಬಾ ಈಗ ಸಿನಿಮಾದಿಂದ ಬಹುತೇಕ ದೂರವಾಗಿದ್ದಾರೆ. ಆದರೆ ಸಿನಿಮಾ ರಂಗಕ್ಕೆ ಬರುವ ಮುಂಚೆ ಮುಂಬೈನಲ್ಲಿ ತಾವು ಎದುರಿಸಿದ ಕಷ್ಟಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

  ''ನಾನು ಮುಂಬೈಗೆ ನಟಿಯಾಗಲು ಬಂದಾಗ ಸಣ್ಣ ಪಿಜಿಯಲ್ಲಿ ವಾಸವಿದ್ದೆ. ಆ ಪಿಜಿಗೆ 5000 ಬಾಡಿಗೆ. ಆ ಪಿಜಿಯ ಮಾಲಕಿ ನನ್ನ ಮೇಲೆ ಹಣ ಕದ್ದ ಆರೋಪ ಮಾಡಿಬಿಟ್ಟಿದ್ದಳು. ನಾನು ಹಾಗೆ ಮಾಡಿಲ್ಲವೆಂದು ಹೇಳಿದರೂ ಕೇಳದೆ ನನ್ನನ್ನು ಕೆಟ್ಟದಾಗಿ ಬೈದಿದ್ದಳು'' ಎಂದು ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ಮಿನಿಷಾ.

  ''ಅದು ನನಗೆ ಗೌರವದ ಪ್ರಶ್ನೆಯಾಯಿತು. ಕೂಡಲೇ ನಾನು ಪಿಜಿ ಖಾಲಿ ಮಾಡಿ 7000 ರು ಬಾಡಿಗೆಗೆ ಮನೆಯೊಂದಕ್ಕೆ ಶಿಫ್ಟ್ ಆದೆ. ಆ ಮನೆ ಕೇವಲ ಒಂದು ದೊಡ್ಡ ರೂಂ ಆಗಿತ್ತಷ್ಟೆ. ಅದು ಬಹಳ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಆದರೆ ಬೇರೆ ವಿಧಿ ಇಲ್ಲದೆ ಅಲ್ಲಿಯೇ ನಾನು ಇರಬೇಕಾಯಿತು'' ಎಂದಿದ್ದಾರೆ ನಟಿ.

  Karnataka Unlock: Yediyurappa ಹೇಳಿಕೆ ಕೇಳಿ ನಿಟ್ಟುಸಿರು ಬಿಟ್ಟ ಚಿತ್ರರಂಗ | Filmibeat Kannada

  2005ರಲ್ಲಿ ಬಿಡುಗಡೆ ಆದ 'ಯಹಾ' ಸಿನಿಮಾದಿಂದ ನಟನೆ ಆರಂಭಿಸಿದ ಮಿನಿಷಾ 2017ರ ವರೆಗೆ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಬಿಗ್‌ಬಾಸ್ 8ನಲ್ಲಿಯೂ ಅವರು ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಕೆಲವು ಧಾರಾವಾಹಿಗಳಲ್ಲಿಯೂ ಸಹ ಮಿನಿಷಾ ನಟಿಸುತ್ತಿದ್ದಾರೆ.

  English summary
  Actress Minissha Lamba said once a PG owner accused her of stealing money. She left the PG and stayed in a single room after that incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X