»   » ಮೇ 21, 1994ರ 'ಆ' ಕ್ಷಣವನ್ನು ನೆನಪಿಸಿಕೊಂಡ ನಟಿ ಸುಶ್ಮಿತಾ ಸೇನ್

ಮೇ 21, 1994ರ 'ಆ' ಕ್ಷಣವನ್ನು ನೆನಪಿಸಿಕೊಂಡ ನಟಿ ಸುಶ್ಮಿತಾ ಸೇನ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಖ್ಯಾತ ನಟಿ ಸುಶ್ಮಿತಾ ಸೇನ್ ಅವರು 1994 ರಲ್ಲಿ ಪ್ರತಿಷ್ಟಿತ 'ಮಿಸ್ ಯುನಿವರ್ಸ್' ಕಿರೀಟ ತೊಟ್ಟ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆಗಿನ್ನೂ ಅವರಿಗೆ ಕೇವಲ 18 ವರ್ಷ ವಯಸ್ಸಾಗಿತ್ತು.

ಇದೀಗ ನಟಿ ಸುಶ್ಮಿತಾ ಸೇನ್ ಅವರು 'ಮಿಸ್ ಯುನಿವರ್ಸ್' ಕಿರೀಟ ತೊಟ್ಟು ಇಂದಿಗೆ (ಮೇ 21) ಭರ್ತಿ 22 ವರ್ಷಗಳಾಗಿದ್ದು, ಆ ಕ್ಷಣವನ್ನು ನಟಿ ಸುಶ್ಮಿತಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕಿರೀಟ ತೊಟ್ಟ ಆ ಸಂಭ್ರಮದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.[ಭುವನ ಸುಂದರಿ ಸುಶ್ಮಿತಾ ಸೇನ್ ಎರಡನೇ ಇನ್ನಿಂಗ್ಸ್]

Miss Universe 1994: Sushmita Sen Celebrates Her 'Crowning Anniversary'

'ಆ ಕ್ಷಣಗಳನ್ನು ನೆನೆಸಿಕೊಂಡರೆ ನನಗೆ ಮಾತುಗಳೇ ಹೊರಡುತ್ತಿಲ್ಲ. ಎಲ್ಲರಿಗೂ ಧನ್ಯವಾದಗಳು' ಎಂದು ಮಾಜಿ ಭುವನ ಸುಂದರಿ ನಟಿ ಸುಶ್ಮಿತಾ ಸೇನ್ ಟ್ವೀಟ್ ಮಾಡಿದ್ದಾರೆ.

'ಮೇ 21, 1994, ಭಾರತ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಗೆದ್ದಿತ್ತು. ಈ ಗೌರವವನ್ನು ದೇಶಕ್ಕೆ ತರಲು ಸಹಾಯ ಮಾಡಿದ ದೇವರಿಗೆ ನಾನು ಚಿರ ಋಣಿ' ಎಂದು ಮಾಜಿ ಭುವನ ಸುಂದರಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.[ಸುಶ್ ಜೊತೆ ಸುಲ್ತಾನ್ ಆಫ್ ಸ್ವಿಂಗ್ ಮದ್ವೆ?]

ನಟಿ ಸುಶ್ಮಿತಾ ಸೇನ್ ಅವರು 'ಮಿಸ್ ಯೂನಿವರ್ಸ್' ಕಿರೀಟ ಗೆದ್ದುಕೊಂಡ ಸಂಭ್ರಮದ ಕ್ಷಣದ ವಿಡಿಯೋ ಇಲ್ಲಿದೆ ನೋಡಿ....

ಜೊತೆಗೆ 1994ರ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ ಕೊಲಂಬಿಯಾದ ಚೆಲುವೆ ಕೆರೋಲಿನಾ ಅವರಿಗೂ ಸುಶ್ಮಿತಾ ಸೇನ್ ಅವರು ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.[ಇದೇನು ಸಭ್ಯತೆ ಇದೇನು ಸಂಸ್ಕೃತಿ ಭುವನ ಸುಂದರಿ?]

ನಟಿ ಸುಶ್ಮಿತಾ ಸೇನ್ ಅವರ ಮಾಡೆಲಿಂಗ್ ದಿನಗಳ ಕಾಲದ ಹಾಗೂ ಅವರ ಯೌವ್ವನದ ದಿನಗಳ ಅಪರೂಪದ ಚಿತ್ರಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

-
-
-
-
-
-
-
-
-
-
-
-
English summary
Bollywood Actress Sushmita Sen made us all proud when she won the Miss Universe title on May 22, 1994 for the country. It was a prestigious moment not just for her but even for India as she became the first Indian to win the crown.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada