''ಚಿತ್ರರಂಗಕ್ಕೆ ಬಂದು 22ವರ್ಷವಾದರೂ ಅವಕಾಶಕ್ಕೆ ಇನ್ನೂ ಅಲೆಯುತ್ತಿದ್ದೇನೆ''ಎಂದ ಖ್ಯಾತ ನಾಯಕಿ ...!

ಸಾಮಾನ್ಯವಾಗಿ ಜನ ಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದರೆ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ ಕಥೆ ಭಿನ್ನವಾಗಿರುತ್ತೆ. ಬೇರೆಲ್ಲ ಉದ್ಯಮಕ್ಕಿಂತ ಹೆಚ್ಚಿನ ಅನಿಶ್ಚಿತತೆ- ಅಭದ್ರತೆ ಇಲ್ಲಿ ಹೆಚ್ಚೇ ಇರುತ್ತೆ.

ಇನ್ನೂ ಇಲ್ಲಿ ಲುಕ್ ಇದ್ದರೆ ಮಾತ್ರ ಗೆಲ್ಲಲಾಗುವುದಿಲ್ಲ. ಟ್ಯಾಲೆಂಟ್ ಜೊತೆ ಲಕ್ ಕೂಡ ಬೇಕಾಗುತ್ತೆ. ಹೀಗಾಗಿಯೇ.. ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರೂ ಸಿಗಬೇಕಾದ ಬೆಲೆ ಕೆಲವರಿಗೆ ಸಿಗುವುದೇ ಇಲ್ಲ. ಎಷ್ಟೇ ಚೆಂದವಾಗಿ ಆಕ್ಟಿಂಗ್ ಮಾಡಿದರೂ ಚಮತ್ಕಾರ ನಡೆಯುವುದಿಲ್ಲ. ಎಷ್ಟೇ ದೊಡ್ಡ ಚಿತ್ರಗಳ ಭಾಗವಾದರೂ ಕೂಡ ಚಿತ್ರರಂಗದ ಸಹುದ್ಯೋಗಿಗಳ ಕಣ್ಣು ಇವರ ಮೇಲೆ ಬೀಳಲ್ಲ. ಇವರಲ್ಲಿನ ಕಲೆಯನ್ನೂ ಪ್ರೇಕ್ಷಕರು ಕೂಡ ಸಕಾಲಕ್ಕೆ ಗುರುತಿಸುವುದಿಲ್ಲ. ಹೀಗಾಗಿಯೇ ವರ್ಷಾನುವರ್ಷ ಚಿತ್ರರಂಗದಲ್ಲಿ ಇವರು ಸೈಕಲ್ ಹೊಡಿಯುತ್ತಾನೇ ಇರ್ತಾರೆ. ಬಾಲಿವುಡ್ ನ ನಟಿ ನೇಹಾ ಧೂಪಿಯಾ ಇದಕ್ಕೆ ಅತ್ಯುತ್ತಮ ಉದಾಹರಣೆ.

Miss Universe starred in blockbusters but has been struggling for 22 years to find work in Bollywood

ಹೌದು, ನೇಹಾ ಧೂಪಿಯಾ... 2002ರಲ್ಲಿ ಭುವನ ಸುಂದರಿ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುಂದರಿ. ಆ ಕಾಲದಲ್ಲಿಯೇ ಜಪಾನ್‌ನಲ್ಲಿ ಚಿತ್ರವನ್ನು ಮಾಡಿ, ಆ ನಂತರ ತೆಲುಗು ಚಿತ್ರರಂಗದ ಮೂಲಕ ಭಾರತದಲ್ಲಿ ಬಣ್ಣದ ಬದುಕಿಗೆ ಮುನ್ನುಡಿ ಬರೆದ ನೇಹಾ, 'ಕಯಾಮತ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು.

ಆ ನಂತರ 'ಮಿಥ್ಯಾ'.. 'ಏಕ್ ಚಾಲಿಸ್ ಕಿ ಲಾಸ್ಟ್ ಲೋಕಲ್'.. 'ಫಸ್ ಗಯೇ ರೇ ಒಬಾಮಾ'.. ಚಿತ್ರಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿದರು. 'ಗರಂ ಮಸಾಲಾ' .. 'ರಾತ್ ಗಯೀ ಬಾತ್ ಗಯೀ'.. 'ಧೇ ಧನಾ ಧನ್' .. 'ಕ್ಯಾ ಕೂಲ್ ಹೈ ಹಮ್‌' ಹೀಗೆ ಹಲವು ಚಿತ್ರಗಳಲ್ಲಿ ಗ್ಲಾಮರಸ್ ಪಾತ್ರಗಳನ್ನು ನಿರ್ವಹಿಸಿದರು. 'ಜ್ಯೂಲಿ' ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೋಲ್ಡ್ ಪಾತ್ರಕ್ಕೆ ಬಣ್ಣ ಹಚ್ಚಿದರು. ಆದರೆ.. ದುರಾದೃಷ್ಟವಶಾತ್, ಬಾಲಿವುಡ್ ಇವರನ್ನು ಅಪ್ಪಿಕೊಳ್ಳಲೇ ಇಲ್ಲ. ಕರೆದು ಒಳ್ಳೋಳ್ಳೆ ಅವಕಾಶಗಳನ್ನು ನೀಡಲಿಲ್ಲ. ತಮ್ಮ ಈ ಮನದ ನೋವನ್ನೂ ನೇಹಾ ಧೂಪಿಯಾ ಹಂಚಿಕೊಂಡಿದ್ಧಾರೆ. ಚಿತ್ರರಂಗಕ್ಕೆ ಬಂದು 22 ವರ್ಷವಾದರೂ ನಾನು ಇವತ್ತು ಕೂಡ ಕಷ್ಟ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಹೌದು, ಬಾಲಿವುಡ್ ಹಂಗಾಮಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನೇಹಾ ಧೂಪಿಯಾ, ತಮ್ಮ ಮನದ ನೋವನ್ನೂ ಹೊರ ಹಾಕಿದ್ದಾರೆ. ಕಳೆದ 03-04 ತಿಂಗಳಿಂದ.. ದಕ್ಷಿಣ ಭಾರತೀಯ ಚಿತ್ರರಂಗದಿಂದ ನನಗೆ ಅನೇಕ ಕರೆಗಳು ಬರುತ್ತಿವೆ. ಅವಕಾಶಗಳು ಬರುತ್ತಿವೆ. ಆದರೆ.. ಅಲ್ಲಿನವರ ಬಗ್ಗೆ ನನಗೆ ಗೊತ್ತಿಲ್ಲ. ಅವರ ಪರಿಚಯ ನನಗಿಲ್ಲ. ಹೀಗಾಗಿಯೇ ನಾನು ಬಂದ ಆ ಅವಕಾಶಗಳನ್ನು ಒಪ್ಪಿಕೊಳ್ಳಲಿಲ್ಲ. ಆದರೆ.. ನಮ್ಮವರು.. ನನಗೆ ಗೊತ್ತಿದ್ದವರೂ .. ನನ್ನಲ್ಲಿನ ಸಾಮರ್ಥ್ಯವನ್ನು ಚೆನ್ನಾಗಿ ಬಲ್ಲವರು.. ನನಗೆ ಅವಕಾಶಗಳನ್ನೂ ಕೊಡ್ತಿಲ್ಲ ಎಂದಿದ್ದಾರೆ. ಆ ಸಿನಿಮಾದಲ್ಲಿ ನಿಮ್ಮ ಅಭಿನಯ ಚೆನ್ನಾಗಿದೆ ಎಂದು ಹೊಗಳುತ್ತಾರೆ ಹೊರತು, ಅವಕಾಶ ಮಾತ್ರ ಕೊಡುವುದಿಲ್ಲ ಎಂದು ಬೇಸರವನ್ನೂ ಹೊರ ಹಾಕಿದ್ದಾರೆ.

Miss Universe starred in blockbusters but has been struggling for 22 years to find work in Bollywood

ಇನ್ನೂ ಪಾತ್ರಕ್ಕಾಗಿ ಹಿಂದಿ ಚಿತ್ರರಂಗದಿಂದ ನನಗೆ ಕರೆ ಬಂದಿದ್ದು ಯಾವಾಗ ಅನ್ನುವುದು ನನಗೆ ನೆನಪಿಲ್ಲ ಎಂದಿರುವ ನೇಹಾ, ಸಿನಿಮಾದಲ್ಲಿ ಬೇಡ ಕೊನೆ ಪಕ್ಷ ವೆಬ್ ಸರಣಿಯಲ್ಲಿ ಆದರೂ ಅವಕಾಶ ಕೊಡಬಹುದು, ಆದರೆ.. ಅಲ್ಲಿಯೂ ಅವಕಾಶಕ್ಕೆ ಕಲ್ಲು ಹಾಕುವವರ ಸಂಖ್ಯೆ ದೊಡ್ಡದಿದೆ ಎಂದಿದ್ದಾರೆ.

ಅಂದ್ಹಾಗೇ ನೇಹಾ ಧೂಪಿಯಾ ಮೊನ್ನೆ ಬಿಡುಗಡೆಯಾದ ಬ್ಯಾಡ್ ನ್ಯೂಜ್ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಮೂರು ವರ್ಷದ ನಂತರ ಬಿಡುಗಡೆಯಾದ ನೇಹಾ ಧೂಪಿಯಾ ಅಭಿನಯದ ಚಿತ್ರ ಇದು ಅನ್ನುವುದು ನಿಮಗೆ ಗೊತ್ತಿರಲಿ. ಇನ್ನೂ ನೇಹಾ ಓಟಿಟಿಯಲ್ಲಿ ಕಾಣಿಸಿಕೊಂಡು ಎರಡು ವರ್ಷಗಳಾಗಿವೆ.

miss-universe-starred-in-blockbusters-but-has-been-struggling-for-22-years-to-find-work-in-bollywood

ಸದ್ಯಕ್ಕೆ ಬಾಲಿವುಡ್‌ನವರ ಈ ಧೋರಣೆಯ ಬಗ್ಗೆ ನೇಹಾ ಧೂಪಿಯಾ ಮಾತನಾಡಿದ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಉದ್ಯಮದ ಕುರಿತು ಚರ್ಚೆ ನಡೆಯುತ್ತಿದೆ. ಬಾಲಿವುಡ್‌ನಲ್ಲಿ ಕೇವಲ ದೇಹ ಪ್ರದರ್ಶನಕ್ಕೀಡುವರಿಗೆ ಮಾತ್ರ ಬೆಲೆ ಇದೆ ಹೊರತು, ನಿಜವಾದ ಕಲಾವಿದರಿಗೆ ಬೆಲೆ ಇಲ್ಲ ಅನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

More from Filmibeat

English summary
In a recent interview with Bollywood Hungama, Neha Dhupia revealed that she's been receiving more film offers from the South Indian film industry compared to Bollywood lately. The actress also claims she has been 'struggling' for roles in the film industry for the past 22 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X