'ಪೃಥ್ವಿರಾಜ'ನ ರಾಣಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಶ್ವ ಸುಂದರಿ ಮಾನುಷಿ ಚಿಲ್ಲರ್

Recommended Video

ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ವಿಶ್ವಸುಂದರಿ ಮಾನುಷಿ ಚಿಲ್ಲರ್ | Filmibeat Kannada

2017ರಲ್ಲಿ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡು ಬಿಂಕದಿಂದ ಬೀಗಿದ್ದ ಹೆಮ್ಮೆಯ ಭಾರತೀಯ ಕುವರಿ ಮಾನುಷಿ ಚಿಲ್ಲರ್ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿಶ್ವ ಸುಂದರಿ ಕಿರೀಟ ತೊಟ್ಟ ಮಾನುಷಿಗೆ ಬಾಲಿವುಡ್ ನಿಂದ ಅವಕಾಶಗಳ ಸುರಿಮಳೆಯೆ ಹರಿದುಬರುತ್ತಿತ್ತು. ಆದರೆ ದಿಡೀರನೆ ಚಿತ್ರರಂಗದ ಬಗ್ಗೆ ನಿರ್ಧಾರ ಮಾಡದೆ ಎರಡು ವರ್ಷಗಳ ಬಳಿಕ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

ಒಂದಿಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದ ಮಾನುಷಿ ಚಿತ್ರರಂಗದ ಎಂಟ್ರಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೀಗ ಒಂದೊಳ್ಳೆ ಸಿನಿಮಾ ಮೂಲಕ ಮಾನುಷಿ ಚಿಲ್ಲರ್ ಬಾಲಿವುಡ್ ಗೆ ಕಾಲಿಡುತ್ತಿದ್ದಾರೆ. ಅಂದ್ಹಾಗೆ ಮಾನುಷಿ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಐತಿಹಾಸಿಕ ಚಿತ್ರದಲ್ಲಿ ಮಾನುಷಿ

ಐತಿಹಾಸಿಕ ಚಿತ್ರದಲ್ಲಿ ಮಾನುಷಿ

ಐತಿಹಾಸಿಕ ಚಿತ್ರದ ಮೂಲಕ ಮಾನುಷಿ ಬಣ್ಣದ ಲೋಕದ ಜರ್ನಿಯನ್ನು ಪ್ರಾರಂಭಿಸುತ್ತಿದ್ದಾರೆ. ಹೌದು, ರಜಪೂತ ರಾಜ ಪೃಥ್ವಿರಾಜ್ ಚೌಹಾಣ್ ಪತ್ನಿ ಸಂಯುಕ್ತ ಪಾತ್ರದಲ್ಲಿ ಮಾನುಷಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಣಿ ಸಂಯುಕ್ತ ಅವರನ್ನು ಸಂಯೋಗಿತ ಎನ್ನುವ ಹೆಸರಿನಿಂದನೂ ಕರೆಯುತ್ತಾರೆ. ದೆಹಲಿ ರಾಜ್ಯವನ್ನು ಪರಿಪಾಲಿಸಿದ ಕೊನೆಯ ಹಿಂದೂ ರಾಜ ಎಂದು ಖ್ಯಾತಿಗಲಿಸಿರುವ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.

ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ

ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ

ಮಾನುಷಿ ಮೊದಲ ಸಿನಿಮಾ ಬಾಲಿವುಡ್ ನ ದೊಡ್ಡ ಬ್ಯಾನರ್ ಆದ ಯಶ್ ರಾಜ್ ಫಿಲ್ಸ್ ನಲ್ಲಿ ಮೂಡಿಬರುತ್ತಿದೆ. ಪೃಥ್ವಿರಾಜ್ ಚೌಹಾಣ್ ಸಿನಿಮಾಗೆ ಖ್ಯಾತ ಟಿವಿ ಸೀರಿಯಲ್ ನಿರ್ದೇಶಕ ಡಾ.ಚಂದ್ರಪ್ರಕಾಶ್ ದ್ವಿವೇದಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಣಿ ಸಂಯುಕ್ತ ಪಾತ್ರಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ ಚಿತ್ರತಂಡಕ್ಕೆ ಮಾನುಷಿ ಸಿಕ್ಕಿದ್ದಾರೆ. ರಾಣಿ ಸಂಯುಕ್ತ ಸೌಂದರ್ಯವತಿ ಮತ್ತು ಶಕ್ತಿಯುತ ಮಹಿಳೆ ಆಗಿದ್ದರು ಮತ್ತು ಆತ್ಮವಿಶ್ವಾಸ ಹೊಂದಿದ ರಾಣಿ ಆಗಿದ್ದರಂತೆ.

ಪಾತ್ರಕ್ಕಾಗಿ ಮಾನುಷಿ ತಯಾರಿ

ಪಾತ್ರಕ್ಕಾಗಿ ಮಾನುಷಿ ತಯಾರಿ

ಆಡಿಷನ್ ಮಾಡಿದ ಚಿತ್ರತಂಡಕ್ಕೆ ಮಾನುಷಿ ಪಕ್ಕ ಸೂಟ್ ಆಗುತ್ತಾರೆ ಎಂದು ಆಯ್ಕೆ ಮಾಡಿದ್ದಾರಂತೆ. ಅಲ್ಲದೆ ಈಗಾಗಲೆ ಮಾನುಷಿ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಅಲ್ಲದೆ ರಾಣಿ ಸಂಯುಕ್ತ ಪಾತ್ರಮಾಡಲು ಮಾನುಶಿ ಸಖತ್ ಎಕ್ಸಾಯಿಟ್ ಆಗಿದ್ದಾರಂತೆ. ಚೊಚ್ಚಲ ಸಿನಿಮಾ ಪ್ರಾರಂಭಿಸುವ ಮಾನುಷಿ ಜೀವನದ ಮತ್ತೊಂದು ಅಧ್ಯಾಯ ಪ್ರಾರಂಭವಾಗಿದೆ. ಇಂದು ಅದ್ದೂರಿ ಮುಹೂರ್ತ ಮಾಡಿಕೊಂಡಿರುವ ಚಿತ್ರತಂಡ ಸಧ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಮಿಸ್ ವರ್ಲ್ಡ್ ಗೋಸ್ ಟು.. ಇಂಡಿಯಾ! ಪ್ರಶಸ್ತಿ ಗೆದ್ದ ಹರ್ಯಾಣದ ಚೆಲುವೆ

ಕುತೂಹಲಕಾರಿಯಾಗಿದೆ ಪೃಥ್ವಿರಾಜನ ಪ್ರೇಮಕಥೆ

ಕುತೂಹಲಕಾರಿಯಾಗಿದೆ ಪೃಥ್ವಿರಾಜನ ಪ್ರೇಮಕಥೆ

ಚೌಹಮನಾ ವಂಶಕ್ಕೆ ಸೇರಿದ ಪೃಥ್ವಿರಾಜ್, 20ರ ವಯಸ್ಸಿನಲ್ಲಿಯೆ ರಾಜನಾಗಿ ಪಟ್ಟಾಭಿಷಕ್ತನಾಗಿ ರಾಜ್ಯಭಾರ ಮಾಡುವ ಜವಾಬ್ದಾರಿಯನ್ನು ಪಡೆದುಕೊಂಡ ರಾಜ. ದೆಹಲಿ ರಾಜ್ಯವನ್ನು ಪರಿಪಾಲಿಸಿದ ಕೊನೆಯ ಹಿಂದೂ ರಾಜ ಎನ್ನುವ ಖ್ಯಾತಿ ಗಳಿಸಿದ್ದಾರೆ. ಪೃಥ್ವಿರಾಜ್ ಚೌಹಾಣ್ ಕನೌಜ್ ರಾಜ್ಯಕ್ಕೆ ಸೇರಿದ ಜೈ ಚಂದ್ರ ರಾಥೋಡ್ ಮಗಳು ಸಂಯುಕ್ತಾಳನ್ನು ವರಿಸಿ ಮದುವೆ ಆಗುತ್ತಾರೆ. ಇವರಿಬ್ಬರ ಪ್ರೇಮಕಥೆ ಕುತೂಹಲಕಾರಿಯಾಗಿದೆ ಎಂದು ಹೇಳಲಾಗುತ್ತೆ. ಅದೆ ಕಥೆ ಈಗ ಸಿನಿಮಾ ಮೂಲಕ ತೆರೆ ಮೇಲೆ ಬರುತ್ತಿರುವುದು ಚಿತ್ರಪ್ರಿಯರಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

More from Filmibeat

English summary
Miss World 2017 Manushi Chhillar enter Bollywood for Prithviraj movie. Actor Akshay Kumar playing leading role in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X